ನವದೆಹಲಿ : ಹಿಂದೂ ಪಂಚಾಂಗದ (Panchang) ಪ್ರಕಾರ, ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ (Akshaya Tritiya 2021) ಎಂದು ಆಚರಿಸಲಾಗುತ್ತದೆ. ಈ ವರ್ಷ, ಮೇ 14 ರಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಅದೃಷ್ಟ ಮತ್ತು ಸಂಪತ್ತನ್ನು (Good fortune and wealth) ನೀಡುವುದರ ಜೊತೆಗೆ ಸುಖ ಸಮೃದ್ಧಿಯನ್ನು ಹೊತ್ತು ತರುತ್ತದೆ ಎನ್ನುವುದು ನಂಬಿಕೆ. ಈ ಕಾರಣದಿಂದಲೇ ಈ ಹಬ್ಬದ ಮಹತ್ವ ಇನ್ನಷ್ಟು ಹೆಚ್ಚಾಗಿದೆ.
ಅನೇಕ ಶುಭ ಯೋಗಗಳನ್ನು ತರುತ್ತಿದೆ ಅಕ್ಷಯ ತೃತೀಯ :
ಈ ಬಾರಿ ಮೇ 14 ರಂದು ಅಕ್ಷಯ ತೃತೀಯ ಹಬ್ಬವನ್ನು (Akshaya Tritiya) ಆಚರಿಸಲಾಗುವುದು. ವಿಶೇಷವೆಂದರೆ ಮೇ 14 ಶುಕ್ರವಾರ. ಶುಕ್ರವಾರ (Friday) ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Godess Lakshmi) ದಿನ. ಹಾಗಾಗಿ ಈ ಬಾರಿ, ಶುಕ್ರವಾರವೇ ಅಕ್ಷಯ ತೃತೀಯ ಬಂದಿರುವುದು ವಿಶೇಷ ಎನ್ನಲಾಗಿದೆ. ಈ ದಿನ, ಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ಲಕ್ಷ್ಮೀಗೆ ಸಲ್ಲಿಸುವ ಪೂಜೆ ವಿಶೇಷ ಫಲವನ್ನು ನೀಡುತ್ತದೆಯಂತೆ. ಈ ಬಾರಿಯ ಇನ್ನೊಂದು ವಿಶೇಷವೆಂದರೆ, ಈ ವರ್ಷ ರೋಹಿಣಿ ನಕ್ಷತ್ರ ಇರಲಿದೆ. ಅಕ್ಷಯ ತೃತೀಯ ದಿನದಂದು, ಚಂದ್ರನು ವೃಷಭ ರಾಶಿಯಲ್ಲಿರುತ್ತಾನೆ. ಶುಕ್ರ (Venus) ಕೂಡಾ ಈಗಾಗಲೇ ವೇಷಭ ರಾಶಿಯಲ್ಲೇ ಇದ್ದಾನೆ. ಚಂದ್ರ ಮತ್ತು ಶುಕ್ರ ಜೊತೆಯಾದರೆ ಲಕ್ಷ್ಮೀ ಯೋಗ (Lakshmi yoga) ಬರಲಿದೆ. ಇದನ್ನು ಸಂಒತ್ತು ಹೆಚ್ಚಿಸುವ ಯೋಗ ಎನ್ನಲಾಗಿದೆ.
ಇದನ್ನೂ ಓದಿ : Turtle Ring Effects: ಈ 4 ರಾಶಿಯವರು ಎಂದಿಗೂ ಆಮೆ ಉಂಗುರವನ್ನು ಧರಿಸಬಾರದು!
ಅಕ್ಷಯ ತೃತೀಯಕ್ಕೆ ಇನ್ನೂ ಅನೇಕ ಮಹತ್ವವಿದೆ :
ಚಿನ್ನ ಖರೀದಿಸಲು ಮಾತ್ರ ಅಕ್ಷಯ ತೃತೀಯ ದಿನ ಮುಖ್ಯ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ ಈ ದಿನ ನಡೆಸುವ ಎಲ್ಲಾ ಕಾರ್ಯಗಳು ಶುಭ ಫಲವನ್ನೇ ನೀಡುತ್ತವೆಯಂತೆ. ಅಲ್ಲದೆ ದುಷ್ಷಟ್ಟು ಫಲವನ್ನು ಕೂಡಾ ನೀಡುತ್ತದೆಯಂತೆ. ಅಲ್ಲದೆ ಅಕ್ಷಯ ತೃತೀಯಕ್ಕೆ ಅನೇಕ ಧಾರ್ಮಿಕ ಮಹತ್ವವೂ ಇದೆ.
1. ಪರಶುರಾಮ ಜಯಂತಿಯನ್ನು (Parshuram jayanti) ಅಕ್ಷಯ ತೃತೀಯ ದಿನದಂದು ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲ್ಪಟ್ಟ ಪರಶುರಾಮ ಈ ದಿನ ಜನಿಸಿದರೆಂದು ನಂಬಲಾಗಿದೆ. ಈ ದಿನ, ವಿಷ್ಣುವಿನೊಂದಿಗೆ (Lord Vishnu), ಪರಶುರಾಮನನ್ನು ಸಹ ಪೂಜಿಸಲಾಗುತ್ತದೆ.
ಇದನ್ನೂ ಓದಿ : Monday Remedies: ವೈಶಾಖ ಮಾಸದ ಪ್ರತಿ ಸೋಮವಾರ ಶಿವನನ್ನು ಈ ರೀತಿ ಆರಾಧಿಸಿ ನಿಮ್ಮ ಮನಸ್ಸಿನ ಆಸೆ ಈಡೇರಿಸಿ
2. ತಾಯಿ ಅನ್ನಪೂರ್ಣೆ ( Annapoorna) ಕೂಡಾ ಇದೇ ದಿನ ಜನಿಸಿರುವುದು ಎನ್ನುತ್ತದೆ ಧರ್ಮ ಪುರಾಣ. ಈ ದಿನ ತಾಯಿ ಅನ್ನಪೂರ್ಣೆಯನ್ನು ಕೂಡಾ ಪೂಜಿಸಬೇಕು. ಇದರಿಂದ ಮನೆಯಲ್ಲಿ ಯಾವತ್ತೂ ಅನ್ನಕ್ಕೆ ಕೊರತೆಯಾಗುವುದಿಲ್ಲವಂತೆ.
3. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ, ಶಿವನು ಲಕ್ಷ್ಮಿ ದೇವಿಯನ್ನು ಪೂಜಿಸುವಂತೆ ಕುಬೇರನಿಗೆ ಹೇಳುತ್ತಾನಂತೆ. ಆದ್ದರಿಂದ ಅಕ್ಷಯ ತೃತೀಯದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ, ಧನ ಧಾನ್ಯ ಪ್ರಾಪ್ತಿಯಾಗುತ್ತದೆಯಂತೆ. ಇದು ಸಂಪತ್ತನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Venus Transit 2021: ಮೇ 4 ರಂದು ವೃಷಭ ರಾಶಿಯಲ್ಲಿ ಶುಕ್ರ ಗೋಚರ, ಎಲ್ಲ ರಾಶಿಗಳ ಮೇಲೆ ಪ್ರಭಾವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ