Breakup Day 2023 : ಈ ಸಂಬಂಧಗಳೇ ಹಾಗೆ. ಬೆಸೆಯುವುದೂ ಕಷ್ಟ, ಮುರಿಯುವುದೂ ಕಷ್ಟ. ಕೆಲವೊಮ್ಮೆ ಸಂಬಂಧಗಳನ್ನು ಕಡಿದುಕೊಳ್ಳ ಲೇಬೇಕಾದ ಸಂದರ್ಭ ಎದುರಾಗಲೂ ಬಹುದು. ಸಂಬಂಧಗಳಲ್ಲಿ ತಲೆದೋರುವ ಜಗಳ, ಮನಸ್ತಾಪಗಳು, ತಪ್ಪು ತಿಳುವಳಿಕೆಗಳು ಸಂಬಂಧಗಳ ನಡುವಿನ ಅಂತರವನ್ನು ಹೆಚ್ಚಿಸುತ್ತವೆ. ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹೀಗಾದಾಗ ಆ ನೋವು ಮನಸ್ಸಿನ ಮೂಲೆಯಲ್ಲಿ ಉಳಿದು ಬಿಡುತ್ತದೆ.
ನೀವು ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧದಲ್ಲಿ ಅತೃಪ್ತರಾಗಿರುವವರೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ಬಯಸುವುದಾದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಬಹುದು. ಇದರಿಂದ ಎದುರಿಗಿರುವವರಿಗೂ ನೋವಾಗುವುದಿಲ್ಲ. ಯಾವುದೇ ರೀತಿಯ ತಪ್ಪು ತಿಳುವಳಿಕೆ ಉಳಿಯುವುದಿಲ್ಲ. ಪ್ರತಿ ವರ್ಷ ಫೆಬ್ರವರಿ 21ರಂದು ಬ್ರೇಕಪ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಸಂಗಾತಿಗೆ ನೋವಾಗದಂತೆ ಬ್ರೇಕಪ್ ಮಾಡುವುದು ಹೇಗೆಂದು ಬ್ರೇಕ್ ಅಪ್ ದಿನದಂದು ನೋಡೋಣ.
ಇದನ್ನೂ ಓದಿ : Child Care: ಮಕ್ಕಳ ಕೇಶಮುಂಡನ ಮಾಡುವಾಗ ಎಚ್ಚರಿಕೆ ಅಗತ್ಯ: ಇಲ್ಲದಿದ್ದರೆ ಈ ಸಮಸ್ಯೆ ಎದುರಾಗುವುದು ಖಂಡಿತ
ಕುಳಿತು ಮಾತನಾಡಬೇಕು :
ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸುವ ಬದಲು, ಅವನೊಂದಿಗೆ ಕುಳಿತು ಎಲ್ಲಾ ವಿಷಯಗಳನ್ನು ಉತ್ತಮ ರೀತಿಯಲ್ಲಿ ಹೇಳಿ. ನಿಮ್ಮ ಮಾತನ್ನು ಅವರಿಗೆ ಅರ್ಥ ಮಾಡಿಸಿ. ಮೆಸೇಜ್‌ನಲ್ಲಿ ಬ್ರೇಕಪ್ ಎಂದು ಕಳುಹಿಸುವ ಬದಲು ಮುಖಾಮುಖಿಯಾಗಿ ಕುಳಿತುಕೊಂಡು ಮಾತನಾಡಿ ಸಂಬಂಧಕ್ಕೆ ಅಂತ್ಯ ಹಾಡಿ.
ಆತುರಪಡಬೇಡಿ , ಸಮಯ ತೆಗೆದುಕೊಳ್ಳಿ ಮತ್ತು ಮನಬಿಚ್ಚಿ ಮಾತನಾಡಿ :
ಇದು ನಿಮ್ಮ ಸಂಗಾತಿಗೆ ಕಠಿಣ ನಿರ್ಧಾರವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವಸರದಲ್ಲಿ ಮಾತನಾಡುವ ಮೊದಲು ಸಮಯ ತೆಗೆದುಕೊಂಡು ಸಮಯ ನೋಡಿಕೊಂಡು ಮಾತನಾಡಿ. ನಿಮ್ಮ ನಡೆಯ ಹಿಂದಿನ ಕಾರಣಗಳನ್ನು ಸರಿಯಾಗಿ ವಿವರಿಸಿ ಹೇಳಿ.
ಇದನ್ನೂ ಓದಿ : Skin Care: ಮುಖದ ಕಲೆಗಳನ್ನು ಹೊಡೆದೋಡಿಸಲು ತೆಂಗಿನೆಣ್ಣೆ ಜೊತೆ ಈ ವಸ್ತು ಬೆರೆಸಿ: ಒಂದೇ ದಿನದಲ್ಲಿ ಬೆಳ್ಳಗಾಗುತ್ತೆ ತ್ವಚೆ!
ಎಲ್ಲರೆದುರು ಇಂಥಹ ಮಾತುಗಳು ಬೇಡ :
ಈ ಮಾತುಕತೆಯು ಕೆಲವೊಮ್ಮೆ ವಾತಾವರಣವನ್ನೇ ಹಾಳು ಮಾಡಿ ಬಿಡಬಹುದು. ಆದ್ದರಿಂದ ಮನೆ ಅಥವಾ ಸಾರ್ವಜನಿಕ ಸ್ಥಳದ ಬದಲಿಗೆ, ಕಡಿಮೆ ಜನರು ಇರುವಂತಹ ಸ್ಥಳದಲ್ಲಿ ಈ ಬಗ್ಗೆ ಕುಳಿತು ಮಾತನಾಡಬೇಕು.
ಸುಳ್ಳು ಹೇಳಬೇಡಿ :
ವಿಷಯವನ್ನು ಸುತ್ತು ಬಳಸಿ ಮಾತನಾಡುವ ಬದಲು ನೇರವಾಗಿ ಮತ್ತು ಸತ್ಯ ಸಂಗತಿಯನ್ನು ಹೇಳಿ. ಸುಳ್ಳು ಮತ್ತು ಅಸಂಬದ್ಧ ವಾದಗಳನ್ನು ಇಡುವುದು ಸರಿಯಲ್ಲ. ನಿಮ್ಮ ನಡೆ ಸಂಗಾತಿಯ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಮಿಸ್ ಅಂಡರ್ ಸ್ಟ್ಯಾಂಡಿಂಗ್ ಹೆಚ್ಚಾಗಬಹುದು. ಅದಕ್ಕೇ ನಿಜ ಏನಿದ್ದರೂ ಹೇಳಿ ಬಿಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.