ಬೆಂಗಳೂರು : ಗ್ರಹಗಳ ಸಂಯೋಜನೆಯು ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಮುಂದಿನ ತಿಂಗಳು ಅಂದರೆ ಜುಲೈ ನಲ್ಲಿ ಗ್ರಹಗಳ ಸ್ಥಾನದಲ್ಲಾಗುವ ಬದಲಾವಣೆ ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಬುಧ-ಶುಕ್ರ ಸಂಯೋಗವು ವೃಷಭ ರಾಶಿಯಲ್ಲಿ ಅಂದರೆ ಶುಕ್ರನ ರಾಶಿಯಲ್ಲಿ ರೂಪುಗೊಳ್ಳುತ್ತದೆ. 30 ವರ್ಷಗಳ ನಂತರ, ಕರ್ಮಫಲದಾತ ಶನಿ ತನ್ನ ಮೂಲ ರಾಶಿ ಕುಂಭದಲ್ಲಿ ಇದ್ದಾನೆ. ಶನಿ ಮತ್ತು ಬುಧ-ಶುಕ್ರರ ಈ ಸ್ಥಾನವು 4 ರಾಶಿಗಳಲ್ಲಿ ರಾಜಯೋಗವನ್ನು ಸೃಷ್ಟಿ ಮಾಡುತ್ತದೆ.
ಅದೃಷ್ಟವನ್ನೇ ಬದಲಾಯಿಸುತ್ತದೆ ರಾಜಯೋಗ :
ವೃಷಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಯ ಜನರ ಲಗ್ನದ ಮನೆಯಲ್ಲಿ ರಾಜಯೋಗ ರೂಪುಗೊಳ್ಳುತ್ತಿದೆ. ಇದು ಅವರ ವೃತ್ತಿಜೀವನದ ದಿಕ್ಕನ್ನೇ ಬದಲಾಯಿಸಬಹುದು. ಈ ರಾಶಿಯವರು ದೊಡ್ಡ ಹುದ್ದೆಯನ್ನು ಪಡೆಯಬಹುದು. ದೊಡ್ಡ ಸಂಬಳ ಮತ್ತು ಸ್ಥಾನದೊಂದಿಗೆ ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಬಡ್ತಿ ಸಿಗುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ : Chaturmas Horoscope 2022: ಜುಲೈ 10ರಿಂದ ಈ ರಾಶಿಗಳ ಜನರಿಗೆ ಬಂಪರ್ ಲಾಭ, ಚಾತುರ್ಮಾಸದಿಂದ ಇವರಿಗೆ ಲಾಭ
ಸಿಂಹ : ಬುಧ-ಶುಕ್ರ, ಶನಿಯ ಸ್ಥಾನವು ಸಿಂಹ ರಾಶಿಯಲ್ಲಿ ಎರಡು ರಾಜಯೋಗಗಳನ್ನು ರೂಪಿಸುತ್ತಿದೆ. ಈ ಯೋಗವು ಈ ರಾಶಿಯವರಿಗೆ ಹಠಾತ್ತನೆ ಬಹಳಷ್ಟು ಹಣವನ್ನು ತಂದು ಕೊಡುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಬಯಸುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ವಿದೇಶಕ್ಕೆ ಹೋಗುವ ಕನಸು ಈ ಸಮಯದಲ್ಲಿ ಈಡೇರಲಿದೆ. ಈ ಸಮಯದಲ್ಲಿ ಮಾಡಿದ ಹೂಡಿಕೆಯು ದೊಡ್ಡ ಲಾಭವನ್ನು ತರಲಿದೆ.
ವೃಶ್ಚಿಕ ರಾಶಿ : ಗ್ರಹಗಳ ಸ್ಥಾನವು ವೃಶ್ಚಿಕ ರಾಶಿಯ ಜನರ ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಅವರು ಹೊಸ ಕೆಲಸ, ಇನ್ಕ್ರಿಮೆಂಟ್ ಪಡೆಯುವ ಸಾಧ್ಯತೆ ಹೆಚ್ಚಿದೆ. ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದವರು ದೊಡ್ಡ ಲಾಭವನ್ನು ಪಡೆಯಲಿದ್ದಾರೆ. ಹೊಸ ಮನೆ-ಕಾರು ಖರೀದಿಸಬಹುದು.
ಇದನ್ನೂ ಓದಿ : Mangal Gochar 2022 in Aries: 45 ದಿನ ಎಚ್ಚರಿಕೆಯಿಂದ ಇರಬೇಕು ಈ ರಾಶಿಯವರು. ! ಅಂಗಾರಕ ಯೋಗ ಹೆಚ್ಚಿಸಲಿದೆ ಸಮಸ್ಯೆ
ಕುಂಭ : ಕುಂಭ ರಾಶಿಯಲ್ಲಿ ರಚನೆಯಾಗುತ್ತಿರುವ 2 ರಾಜಯೋಗಗಳು ಈ ರಾಶಿಯವರ ಜೀವನವನ್ನು ಸುಖಕರವಾಗಿರಿಸುತ್ತದೆ. ಐಷಾರಾಮಿ ಜೀವನ ಈ ರಾಶಿಯವರ ಪಾಲಿಗೆ ಒದಗುತ್ತದೆ. ಮನೆ ಕಾರು ಖರೀದಿಸಬಹುದು. ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಬಹುದು. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.