ಬೆಂಗಳೂರು: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಬಹಳ ಮಹತ್ವವಿದೆ. ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ಹಾಗಾಗಿಯೇ, ಪ್ರತಿ ಮನೆಯಲ್ಲಿಯೂ ತುಳಸಿ ಸಸ್ಯವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಟ್ಟು, ಬೆಳಿಗ್ಗೆ, ರಾತ್ರಿ ತುಳಸಿ ಸಸ್ಯಕ್ಕೆ ನೀರೆರೆದು, ತುಳಸಿ ಗಿಡದ ಮುಂದೆ ದೀಪ ಹಚ್ಚಿ ಭಕ್ತಿಯಿಂದ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯ ಪ್ರವೇಶವಾಗುತ್ತದೆ. ಆ ಮನೆಯಲ್ಲಿ ಎಂದಿಗೂ ಕೂಡ ಹಣದ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಇದೆ. ಆದರೆ, ತುಳಸಿ ಗಿಡಕ್ಕೆ ನೀರೆರೆಯುವಾಗ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.
ಧಾರ್ಮಿಕ ಗ್ರಂಥಗಳಲ್ಲಿ ತುಳಸಿಯನ್ನು ಪೂಜಿಸಲು ಮತ್ತು ನೀರನ್ನು ಅರ್ಪಿಸಲು ಕೆಲವು ನಿಯಮಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ವಿಷ್ಣು ಪ್ರಿಯೆ ತುಳಸಿಗೆ ಕೆಲವು ನಿರ್ದಿಷ್ಟ ದಿನಗಳಲ್ಲಿ ಅಪ್ಪಿತಪ್ಪಿಯೂ ಕೂಡ ನೀರನ್ನು ಅರ್ಪಿಸಬಾರದು. ಇದರಿಂದ ತಾಯಿ ಲಕ್ಷ್ಮಿ ಕೋಪಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಮನೆ ಮುಂದೆ ಈ ಪ್ರಾಣಿಗಳನ್ನು ಕಂಡರೆ ಭಾರೀ ಅದೃಷ್ಟ
ಈ ಎರಡು ದಿನ ಅಪ್ಪಿತಪ್ಪಿಯೂ ತುಳಸಿ ಗಿಡಕ್ಕೆ ನೀರು ಅರ್ಪಿಸಬೇಡಿ:-
ಏಕಾದಶಿಯ ದಿನ:
ವಾಸ್ತು ಶಾಸ್ತ್ರದ ಪ್ರಕಾರ, ಹಿಂದೂ ಧರ್ಮದಲ್ಲಿ ಏಕಾದಶಿಗೆ ತುಂಬಾ ಮಹತ್ವವಿದೆ. ಈ ದಿನ ವಿಷ್ಣುವಿನ ಭಕ್ತರು ಭಗವಾನ್ ವಿಷ್ಣುವಿಗಾಗಿ ಉಪವಾಸವನ್ನು ಮಾಡುತ್ತಾರೆ. ತುಳಸಿ ಮಾತೆ ಕೂಡ ವಿಷ್ಣುವಿನ ಭಕ್ತೆ. ಪ್ರತಿ ತಿಂಗಳ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿ ತಿಥಿಯಂದು ತುಳಸಿ ಶ್ರೀ ಹರಿಗಾಗಿ ನಿರ್ಜಲ ವ್ರತವನ್ನು ಆಚರಿಸುತ್ತಾಳೆ. ಹಾಗಾಗಿ, ಯಾವುದೇ ಏಕಾದಶಿಯ ದಿನದಂದು ತುಳಸಿ ಮಾತೆಗೆ ಅಪ್ಪಿತಪ್ಪಿಯೂ ನೀರೆರೆಯವಾರದು ಎಂದು ಹೇಳಲಾಗುತ್ತದೆ.
ಏಕಾದಶಿಯಂದು ತುಳಸಿಗೆ ನೀರೆರೆದರೆ ತುಳಸಿ ಒಣಗುತ್ತದೆ. ಅಷ್ಟೇ ಅಲ್ಲ, ತಾಯಿ ಮಹಾಲಕ್ಷ್ಮಿ ಮತ್ತು ಭಗವಾನ್ ವಿಷ್ಣು ಆ ಕುಟುಂಬದ ಮೇಲೆ ಅಸಮಾಧಾನಗೊಳ್ಳಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Money Plant Vastu: ಮನಿಪ್ಲಾಂಟ್ ಗೆ ಈ ವಸ್ತುವನ್ನು ಕಟ್ಟಿದರೆ ಸಾಕು ಮನೆಯಲ್ಲಿ ಹಣದ ಮಳೆಯಾಗುತ್ತದೆ!
ವಾರದ ಈ ದಿನ ಮರೆತೂ ಕೂಡ ತುಳಸಿಗೆ ನೀರೆರೆಯಬೇಡಿ:
ಧರ್ಮ ಗ್ರಂಥಗಳ ಪ್ರಕಾರ, ಭಾನುವಾರದಂದು ತುಳಸಿ ಗಿಡಕ್ಕೆ ಮರೆತೂ ಸಹ ನೀರು ಅರ್ಪಿಸಬಾರದು. ಈ ದಿನ ತುಳಸಿ ಮಾತೆಯು ಭಗವಾನ್ ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಹಾಗಾಗಿ, ಈ ದಿನ ತುಳಸಿ ಸಸ್ಯಕ್ಕೆ ನೀರೆರೆಯುವುದರಿಂದ ತುಳಸಿಯ ವ್ರತಕ್ಕೆ ಭಂಗತಂದಂತೆ ಆಗುತ್ತದೆ. ಇದರಿಂದ ತಾಯಿ ಲಕ್ಷ್ಮಿದೇವಿ ಮುನಿಸಿಕೊಳ್ಳಬಹುದು ಎಂಬ ನಂಬಿಕೆಯೂ ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.