Happy Valentine's Day 2023: ವಿಶ್ವಾದ್ಯಂತ ದಂಪತಿಗಳು ಫೆಬ್ರವರಿ 14 ರ ಆಗಮನಕ್ಕೆ ತುದಿಗಾಲಲ್ಲಿ ಕಾಯುತ್ತಿದ್ದಾರೆ, ಸಾಮಾನ್ಯವಾಗಿ ಫೆಬ್ರವರಿ ತಿಂಗಳನ್ನು 'ಪ್ರೀತಿಯ ತಿಂಗಳು' ಎಂದು ಕರೆಯಲಾಗುತ್ತದೆ. ಫೆಬ್ರವರಿ 14 ಅನ್ನು 'ಪ್ರೇಮಿಗಳ ದಿನ' ಎಂದು ಕೂಡ ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಪ್ರೀತಿಪಾತ್ರರ ಮುಂದೆ ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾರೆ. ಆದರೆ ಎಲ್ಲರನ್ನೂ ಪ್ರೀತಿಸುವ ರೀತಿ ವಿಭಿನ್ನವಾಗಿರುತ್ತದೆ. ಅನೇಕ ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಂಗಾತಿ ಮುಂದೆ ವಿವಿಧ ರೀತಿಯ ಉಡುಗೊರೆಗಳನ್ನು ಪ್ರಸ್ತುತಪಡಿಸುತ್ತಾರೆ. ನಿಮ್ಮ ಸಂಗಾತಿಯ ಮುಂದೆ ನೀವು ಉಡುಗೊರೆಯನ್ನು ಪ್ರಸ್ತುತಪಡಿಸಲು ಯೋಜನೆ ರೂಪಿಸುತ್ತಿದ್ದರೆ, ನಾವು ನಿಮಗಾಗಿ ಒಂದು ವಿಶೇಷತ ಕೊಡುಗೆಯ ಪರಿಕಲ್ಪನೆಯನ್ನು ಪ್ರಸ್ತುತಪಡಿಸುತ್ತಿದ್ದು. ಇದು ನಿಮ್ಮ ಸಂಗಾತಿ ಹಾಗೂ ನಿಮ್ಮ ಎರಡರ ಮೇಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತದೆ, ಆದ್ದರಿಂದ ನೀವು ನಿಮ್ಮ ಸಂಗಾತಿಗೆ ಏನನ್ನಾದರೂ ಉಡುಗೊರೆಯಾಗಿ ನೀಡುವ ಮೊದಲು ಕೆಲವು ವಿಶೇಷ ವಿಷಯಗಳಿಗೆ ಗಮನ ಕೊಡಿ.
ನಾವು ಈ ಲೇಖನದಲ್ಲಿ ಉಲ್ಲೇಖಿಸುತ್ತಿರುವ ಕೆಲ ಉಡುಗೊರೆಗಳನ್ನು ನಿಮ್ಮ ಸಂಗಾತಿಗೆ ನೀಡಿದರೆ, ನಿಮ್ಮ ನಡುವಿನ ಪ್ರೀತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಬಂಧದಲ್ಲಿ ಸಂತೋಷದ ಸುರಿಮಳೆಯಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪ್ರಕೃತಿಗೆ ಸಂಬಂಧಿಸಿದ ಉಡುಗೊರೆಗಳನ್ನು ನೀಡುವುದು ಸಂಬಂಧದಲ್ಲಿ ಸಂತೋಷವನ್ನು ತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಗಾತಿಗೆ ಬಿದಿರಿನ ಗಿಡವನ್ನು ನೀಡಬಹುದು. ಬಿದಿರಿನ ಗಿಡವನ್ನು ಕೋಣೆಯಲ್ಲಿ ಅಥವಾ ಅಧ್ಯಯನದ ಮೇಜಿನ ಮೇಲೆ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿನ ಕಲಹ ದೂರಾಗುತ್ತದೆ. ಲ್ಯಾವೆಂಡರ್ ಪರಿಮಳವನ್ನು ಅನೇಕ ಜನರು ಇಷ್ಟಪಡುತ್ತಾರೆ. ಈ ವ್ಯಾಲೆಂಟೈನ್ ನಲ್ಲಿ ನಿಮ್ಮ ಸಂಗಾತಿಗೆ ನೀವು ಲ್ಯಾವೆಂಡರ್ ಗಿಡವನ್ನು ಉಡುಗೊರೆಯಾಗಿ ನೀಡಬಹುದು. ಈ ಗಿಡ ನೋಡಲು ತುಂಬಾ ಸುಂದರವಾಗಿದ್ದು, ಈ ಗಿಡದ ಹೂವುಗಳ ಸುಗಂಧವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.
ನೈದಿಲೆಯನ್ನು ಉಡುಗೊರೆಯಾಗಿ ನೀಡುವುದು ಕೂಡ ವಾಸ್ತು ಶಾಸ್ತ್ರದ ಪ್ರಕಾರ ತುಂಬಾ ಮಂಗಳಕರ ಎಂದು ವಾಸ್ತು ಶಾಸ್ತ್ರದ ತಜ್ಞರು ಹೇಳುತ್ತಾರೆ. ಈ ವ್ಯಾಲೆಂಟೈನ್ ನಿಮ್ಮ ಸಂಗಾತಿಗೆ ನೀವು ಪೀಸ್ ಲಿಲಿಯನ್ನು ಉಡುಗೊರೆಯಾಗಿ ನೀಡಬಹುದು. ಪೀಸ್ ಲಿಲಿ ಪ್ರೀತಿಯ ಸಂಕೇತ ಎಂದು ನಂಬಲಾಗಿದೆ. ಇದು ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ. ನಮ್ಮಲ್ಲಿ ಹೆಚ್ಚಿನವರು ಸ್ನೇಕ್ ಗಿಡದ ಬಗ್ಗೆ ತಿಳಿದಿರುತ್ತಾರೆ, ವಾಸ್ತು ಶಾಸ್ತ್ರದಲ್ಲಿ ಸ್ನೇಕ್ ಟ್ರೀ ಅನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ. ಈ ವ್ಯಾಲೆಂಟೈನ್ ನಿಮ್ಮ ಸಂಗಾತಿಗೆ ಸ್ನೇಕ್ ಗಿಡವನ್ನು ಉಡುಗೊರೆಯಾಗಿ ನೀಡಬಹುದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.