Numerology Prediction - ಜ್ಯೋತಿಷ್ಯಶಾಸ್ತ್ರದಂತೆ (Jyothishya Shastra) ಪ್ರತಿಯೊಬ್ಬರ ಜೀವನದಲ್ಲಿ ಅಂಕ ಜ್ಯೋತಿಷ್ಯ ಕೂಡ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಅಂಕ ಜ್ಯೋತಿಷ್ಯದ ಮೂಲಕ ಭವಿಷ್ಯದ (Astrology) ಕುರಿತು ಮಾಹಿತಿ ಲಭ್ಯವಾಗುತ್ತದೆ. ಇದನ್ನು ಅಂಕಶಾಸ್ತ್ರ (Anka Shastra) ಅಥವಾ ನ್ಯೂಮರಾಲಾಜಿ (Numerology) ಎಂದೂ ಕೂಡ ಕರೆಯಲಾಗುತ್ತದೆ. ಯಾರ ಜನನ ತಿಥಿ 9, 19 ಹಾಗೂ 27 ಆಗಿರುತ್ತದೆಯೋ ಅವರ ಮೂಲಾಂಕ 9 ಇರಲಿದೆ.
ತಜ್ಞರ ಪ್ರಕಾರ, ಮೂಲಾಂಕ 9 ಹೊಂದಿರುವ ಜನರು, ತುಂಬಾ ಅದೃಷ್ಟವಂತರಾಗಿರುತ್ತಾರೆ ಎನ್ನಲಾಗಿದೆ. ಈ ಸಂಖ್ಯೆಯ ಅಧಿಪತಿ ಮಂಗಳ. ಈ ಮೂಲಾಂಕದ ಜನರಿಗೆ ಎಂದಿಗೂ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಈ ಜನರ ಹುಟ್ಟಿನಿಂದಲೇ ಚಿನ್ನದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿರುತ್ತಾರೆ. ಅಂದರೆ, ಇವರು ಹುಟ್ಟು ಸಿರಿವಂತರಾಗಿರುತ್ತಾರೆ.
ಮೂಲಾಂಕ 9 ಇರುವವರ ಸ್ವಭಾವ ಹೇಗಿರುತ್ತದೆ?
ಅಂಕ ಜ್ಯೋತಿಷ್ಯದ (Astrology) ಪ್ರಕಾರ ಮೂಲಾಂಕ 9 ಹೊಂದಿದವರು ತುಂಬಾ ತಮಾಷೆಯ ಪ್ರವೃತ್ತಿಯವರಾಗಿರುತ್ತಾರೆ. ಇವರು ತುಂಬಾ ಕಷ್ಟಜೀವಿಗಳಾಗಿರುತ್ತಾರೆ. ಸಾಕಷ್ಟು ಸ್ನೇಹಿತರನ್ನು ಹೊಂದಿರುತ್ತಾರೆ. ಪ್ರತಿಯೊಂದು ಸಮಸ್ಯೆಯ ಪರಿಹಾರ ಹುಡುಕುವ ಪ್ರಯತ್ನ ಇವರದಾಗಿರುತ್ತದೆ.
ಇದನ್ನೂ ಓದಿ-ಕೆಟ್ಟ ಸಮಯ ಆರಂಭಕ್ಕೂ ಮುನ್ನ ಸಿಗುತ್ತದೆಯಂತೆ ಈ ಸೂಚನೆಗಳು ..!
Numarology Prediction - ಇವರು ಶಿಸ್ತು ಪ್ರಿಯರಾಗಿರುತ್ತಾರೆ. ಇವರ ಜೀವನ ಸಂಘರ್ಷದಿಂದ ಕೂಡಿರುತ್ತದೆ ಎನ್ನಲಾಗುತ್ತದೆ. ಇವರು ಆಗಾಗ ಕೋಪಿಸಿಕೊಳ್ಳುತ್ತಾರೆ.
ಈ ಜನರಿಗೆ ಆತ್ಮಾಭಿಮಾನ ಹೆಚ್ಚು ಪ್ರಿಯವಾಗಿರುತ್ತದೆ. ಈ ಜನರಿಗೆ ಅತ್ತೆ ಮನೆಯಿಂದಲೂ ಕೂಡ ಧನಪ್ರಾಪ್ತಿಯ ಯೋಗ ಇರುತ್ತದೆ ಎನ್ನಲಾಗುತ್ತದೆ. ಆರ್ಥಿಕವಾಗಿ ಈ ಮೂಲಾಂಕದ ಜನರು ತುಂಬಾ ಸಮೃದ್ಧರಾಗಿರುತ್ತಾರೆ. ಇವರು ಆಸ್ತಿಗೆ ಸಂಬಂಧಿಸಿದ ವಿವಾದವನ್ನೂ ಕೂಡ ಎದುರಿಸುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ-Luckiest Nakshatra: ಈ ನಕ್ಷತ್ರದಲ್ಲಿ ಹುಟ್ಟಿದವರ ಮೇಲೆ ಶನಿ ಹಾಗೂ ಬೃಹಸ್ಪತಿಯ ವಿಶೇಷ ಕೃಪೆ ಇರುತ್ತದೆ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕೂ ಮುನ್ನ ಕ್ಷೇತ್ರಕ್ಕೆ ಸಂಬಂಧಪಟ್ಟ ತಜ್ಞರ ಸಲಹೆ ಪಡೆಯಲು ಮರೆಯಬೇಡಿ. ಏಕೆಂದರೆ ಝೀ ಹಿಂದೂಸ್ತಾನ ಕನ್ನಡ ಇದನ್ನು ದೃಢಪಡಿಸುವುದಿಲ್ಲ)
ಇದನ್ನೂ ಓದಿ-ಅಂಗೈ ತುರಿಕೆ ಸೇರಿದಂತೆ ಈ ಲಕ್ಷಣಗಳು ನೀಡುತ್ತವೆ ನಷ್ಟದ ಮುನ್ಸೂಚನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.