NRI: ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿಯಾಗಿ ಭಾರತೀಯ ಮೂಲದ ಅಮೇರಿಕನ್ ನೌಕಾಪಡೆಯ ಅನುಭವಿ ಶಾಂತಿ ಸೇಠಿ ನೇಮಕ

ಡಿಸೆಂಬರ್ 2010 ರಿಂದ ಮೇ 2012 ರ ಅವಧಿಯಲ್ಲಿ ಶಾಂತಿ ಸೇಠಿ ವಿಧ್ವಂಸಕ ಗೈಡೆಡ್ ಮಿಸೈಲ್ USS ಡೆಕಾಟೂರ್‌ಗೆ ಕಮಾಂಡೆಂಟ್ ಆಗಿದ್ದರು. ಅಷ್ಟೇ ಅಲ್ಲ ಶಾಂತಿ ಅವರು ಭಾರತಕ್ಕೆ ಭೇಟಿ ನೀಡಿದ US ನೌಕಾ ಪಡೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದಾರೆ.  

Written by - Nitin Tabib | Last Updated : Apr 21, 2022, 02:39 PM IST
  • ಅಮೆರಿಕಾದ ಉಪಾಧ್ಯಕ್ಷರ ರಕ್ಷಣಾ ಸಲಹೆಗಾರ್ತಿಯಾಗಿ ಶಾಂತಿ ಸೇಠಿ ನೇಮಕ.
  • ಡಿಸೆಂಬರ್ 2010 ರಿಂದ ಮೇ 2012 ರ ಅವಧಿಯಲ್ಲಿ ಶಾಂತಿ ವಿಧ್ವಂಸಕ ಗೈಡೆಡ್ ಮಿಸೈಲ್ USS ಡೆಕಾಟೂರ್‌ಗೆ ಕಮಾಂಡೆಂಟ್ ಆಗಿದ್ದರು.
  • ಶಾಂತಿ ಭಾರತಕ್ಕೆ ಭೇಟಿ ನೀಡಿದ US ನೌಕಾಪಡೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದಾರೆ.
NRI: ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿಯಾಗಿ ಭಾರತೀಯ ಮೂಲದ ಅಮೇರಿಕನ್ ನೌಕಾಪಡೆಯ ಅನುಭವಿ ಶಾಂತಿ ಸೇಠಿ ನೇಮಕ title=
non resident indians

ವಾಶಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಯುಎಸ್ ನೌಕಾಪಡೆಯ ಅನುಭವಿ ಶಾಂತಿ ಸೇಠಿ, ಅಮೆರಿಕಾದ ಉಪಾಧ್ಯಕ್ಷೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರ ಕಾರ್ಯಕಾರಿ ಕಾರ್ಯದರ್ಶಿ ಮತ್ತು ರಕ್ಷಣಾ ಸಲಹೆಗಾರ್ತಿಯಾಗಿ ನೇಮಕಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಯುಎಸ್ ನೌಕಾಪಡೆಯ ಪ್ರಮುಖ ಯುದ್ಧ ನೌಕೆಯ ಮೊದಲ ಭಾರತೀಯ-ಅಮೆರಿಕನ್ ಕಮಾಂಡರ್ ಆಗಿರುವ ಶಾಂತಿ ಸೇಠಿ ಅವರು ಇತ್ತೀಚೆಗೆ ಉಪಾಧ್ಯಕ್ಷ ಹ್ಯಾರಿಸ್ ಅವರ ಕಚೇರಿಗೆ ಸೇರಿಕೊಂಡಿದ್ದಾರೆ ಎಂದು ಉಪಾಧ್ಯಕ್ಷರ ಹಿರಿಯ ಸಲಹೆಗಾರಾಗಿರುವ ಹರ್ಬಿ ಜಿಸ್ಕೆಂಡ್ ಅವರನ್ನು ಉಲ್ಲೇಖಿಸಿ ಪೊಲಿಟಿಕೊ ವರದಿ ಮಾಡಿದೆ.

ತನ್ನ ಹೊಸ ಜವಾಬ್ದಾರಿಯಲ್ಲಿ ಶಾಂತಿ ಸೇಠಿ ಅವರು, ರಾಷ್ಟ್ರೀಯ ಭದ್ರತಾ ಸಲಹೆಗಾರರ ದಾಖಲಾತಿಗಳನ್ನು ಉಪಾಧ್ಯಕ್ಷರ ಕಚೇರಿಯಲ್ಲಿ ಸಂಯೋಜಿಸಲಿದ್ದಾರೆ ಎಂದು ಅವರ ಲಿಂಕ್ಡ್ ಇನ್ ಪ್ರೋಪೈಲ್ ನಲ್ಲಿ ಬರೆಯಲಾಗಿದೆ.

ಡಿಸೆಂಬರ್ 2010 ರಿಂದ ಮೇ 2012 ರ ಅವಧಿಯಲ್ಲಿ ಶಾಂತಿ ಸೇಠಿ ವಿಧ್ವಂಸಕ ಗೈಡೆಡ್ ಮಿಸೈಲ್ USS ಡೆಕಾಟೂರ್‌ಗೆ ಕಮಾಂಡೆಂಟ್ ಆಗಿದ್ದರು. ಅಷ್ಟೇ ಅಲ್ಲ ಶಾಂತಿ ಅವರು ಭಾರತಕ್ಕೆ ಭೇಟಿ ನೀಡಿದ US ನೌಕಾಪಡೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದಾರೆ.

1993 ರಲ್ಲಿ ಶಾಂತಿ ಅವರು ನೌಕಾಪಡೆಗೆ ಸೇರಿದಾಗ, ಯುದ್ಧದಿಂದ ಹೊರಗಿಡುವ ಕಾನೂನು ಇನ್ನೂ ಜಾರಿಯಲ್ಲಿತ್ತು. ಹೀಗಾಗಿ ಅವರು ಸೀಮಿತ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಆದರೂ ಕೂಡ ಅವರು ಅಧಿಕಾರಿಯಾಗಿದ್ದಾಗ, ಈ ಯುದ್ಧದಿಂದ ಹೊರಗಿಡುವ ಕಾಯಿದೆಯನ್ನು ತೆಗೆದುಹಾಕಲಾಯಿತು.ಒಂದು ವರ್ಷದ ಹಿಂದೆ ಈ ಕುರಿತು ಯುಎಸ್ ಟುಡೇಗೆ ನೀಡಿದ ಸಂದರ್ಶನವೊಂದರಲ್ಲಿ  ಉಲ್ಲೇಖಿಸಿದ್ದ ಶಾಂತಿ, "ಪುರುಷ ಪ್ರಾಬಲ್ಯವಿರುವ ಪರಿಸರಕ್ಕೆ ನಾನು ಹೆಚ್ಚು ಹೊಂದಿಕೊಂಡಿದ್ದ ಕಾರಣ ನನಗೆ ನನ್ನ ವೃತ್ತಿಜೀವನದಲ್ಲಿ ಮುಂದುವರೆಯಲು ಸಾಧ್ಯವಾಯಿತು" ಎಂದಿದ್ದರು.

ಇದನ್ನೂ ಓದಿ-NRI: ಭಾರತದ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಹೆಚ್ಚಿಸಲು ಈ ಬಾರಿ ಭಾರತೀಯರಿಗೆ ಹೆಚ್ಚು ವಿಸಾ ನೀಡಲಾಗುವುದು: ಜಾನ್ಸನ್

ಅಂದ ಹಾಗೆ ಶಾಂತಿ ಸೇಠಿ ಅವರ ತಂದೆ 1960ರ ದಶಕದಲ್ಲಿ ಭಾರತದಿಂದ ಅಮೆರಿಕಾಕ್ಕೆ ವಲಸೆ ಹೋಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-NRI: ಮುಂದಿನ 1 ವರ್ಷದಲ್ಲಿ 8 ಲಕ್ಷ ವಿಸಾ ಪ್ರಕ್ರೀಯೆಗೊಳಿಸುವುದಾಗಿ ಹೇಳಿದ US!

ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News