ತಾತ ಪ್ರಧಾನಿ.. ಪತಿ ಸ್ಟಾರ್ ಹೀರೋ.. ಈಕೆ ಬ್ಯಾಗ್ರೌಂಡ್‌ ಕೇಳಿದ್ರೆ ನಿಮ್ಮ ತಲೆ ಗಿರ್‌.. ಅನ್ನುತ್ತೆ...!

Aditi rao hydari : ಈ ಮೇಲಿನ ಫೋಟೋದಲ್ಲಿರುವ ಪುಟ್ಟ ಹುಡುಗಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಚೆಲುವೆ.. ಸಾಮಾನ್ಯವಾಗಿ ಸಿನಿಮಾ ನಾಯಕಿಯರಿಗೆ ದೊಡ್ಡ ಹಿನ್ನಲೆ ಇರುವುದಿಲ್ಲ.. ಆದರೆ ಈ ಹೀರೋಯಿನ್‌ಗೆ ಇರುವ ಹಿನ್ನೆಲೆ ಬೇರೆ ಯಾವ ಹೀರೋಯಿನ್‌ಗೂ ಇಲ್ಲ..  

1 /8

ಸಿನಿಮಾದ ನಾಯಕಿಯರಿಗೆ ಸಾಮಾನ್ಯ ಹಿನ್ನೆಲೆ ಇರುತ್ತದೆ. ಆದರೆ ಈ ಕ್ಯೂಟಿಯಷ್ಟು ಹಿನ್ನೆಲೆ ಭಾರತೀಯ ಚಿತ್ರರಂಗದ ಯಾವ ನಟಿಗೂ ಇಲ್ಲ. ಆದರೂ ಈ ಕ್ಯೂಟ್‌ ಬ್ಯೂಟಿ ತಮ್ಮ ಬ್ಯಾಗ್ರೌಂಡ್‌ ಬಳಸಿಕೊಳ್ಳದೇ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾಳೆ..    

2 /8

ಮೊದಲ ಮದುವೆ ಬ್ರೇಕಪ್ ಆದ ನಂತರ ಹಲವು ವರ್ಷಗಳಿಂದ ಒಂಟಿಯಾಗಿದ್ದ ಈಕೆ ಇದೀಗ ಸ್ಟಾರ್ ನಟನ ಕೈ ಹಿಡಿದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಧ್ಯ ಈ ಜೋಡಿ ತಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ... ಯಸ್‌.. ನಾವು ಹೇಳುತ್ತಿರುವುದು.. ನಟಿ ಅದಿತಿ ರಾವ್ ಹೈದರಿ ಅವರ ಹಿನ್ನಲೆ ಬಗ್ಗೆ..  

3 /8

ನಿನ್ನೆ ಅದಿತಿ ರಾವ್ ಹೈದರಿ ತಮ್ಮ ಜನ್ಮದಿನವನ್ನು ಅಚರಿಸಿಕೊಂಡರು (ಅಕ್ಟೋಬರ್ 28). ಸಿದ್ಧಾರ್ಥ್ ಮದುವೆಯ ನಂತರ ಅದಿತಿ ತನ್ನ ಮೊದಲ ಹುಟ್ಟುಹಬ್ಬವನ್ನು ತನ್ನ ಪತಿಯೊಂದಿಗೆ ಅದ್ದೂರಿಯಾಗಿ ಸೆಲೆಬ್ರೇಟ್‌ ಮಾಡಿದರು. ಫ್ಯಾನ್ಸ್‌, ನೆಟಿಜನ್ಸ್‌ಗಳು ಸೇರಿದಂತೆ, ಸಿನಿ ಇಂಡ್ರಸ್ಟ್ರಿಯ ನಟ ನಟಿಯರು ಈ ಕ್ರೇಜಿ ಹೀರೋಯಿನ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.  

4 /8

ಅದಿತಿ ರಾವ್ ಹೈದರಿ ರಾಜಮನೆತನದಿಂದ ಬಂದವರು. ಆಕೆಯ ಅಜ್ಜ (ತಂದೆಯ ತಂದೆ) ಅಕ್ಬರ್ ಹೈದರಿ ಆ ಸಮಯದಲ್ಲಿ ಹೈದರಾಬಾದ್‌ನ ಪ್ರಧಾನ ಮಂತ್ರಿಯಾಗಿದ್ದರು. ಮತ್ತೊಬ್ಬ ಅಜ್ಜ ರಾಮೇಶ್ವರ ರಾವ್ (ತಾಯಿಯ ತಂದೆ) ತೆಲಂಗಾಣದ ವನಪರ್ತಿಯ ಗವರ್ನರ್, ಮತ್ತೊಬ್ಬ ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್ ಅವರ ಮಾಜಿ ಪತ್ನಿ ಮತ್ತು ನಿರ್ದೇಶಕ ಕಿರಣ್ ರಾವ್ ಕೂಡ ಅದಿತಿಯ ಹತ್ತಿರದ ಸಂಬಂಧಿ.  

5 /8

ಅದಿತಿ ಎರಡು ವರ್ಷದವಳಿದ್ದಾಗ ಪೋಷಕರು ಬೇರ್ಪಟ್ಟರು. ಆ ನಂತರ ತನ್ನ ತಾಯಿಯೊಂದಿಗೆ ದೆಹಲಿಗೆ ಬಂದರು, ಅಲ್ಲಿಯೇ ಬೆಳೆದರು. 2006 ರಲ್ಲಿ ಪಾದಾರ್ಪಣೆ ಮಾಡಿದ ಅದಿತಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.  

6 /8

ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಅದಿತಿ, ಮಹಾಸಮುದ್ರ ಚಿತ್ರೀಕರಣದ ವೇಳೆ ನಟ ಸಿದ್ಧಾರ್ಥ್ ಅವರ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದರು. ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇತ್ತೀಚೆಗಷ್ಟೇ ಸಪ್ತಪದಿ ತುಳಿಯಿತು. ಅದಿತಿ 2007 ರಲ್ಲಿ ಹಿಂದಿ ನಟ ಸತ್ಯದೀಪ್ ಮಿಶ್ರಾ ಅವರನ್ನು ಅದಿತಿ ವಿವಾಹವಾಗಿದ್ದರು, ಆರು ವರ್ಷಗಳ ನಂತರ ಅವರು ವಿಚ್ಛೇದನ ಪಡೆದು ಬೇರ್ಪಟ್ಟರು.  

7 /8

ಅದಿತಿ-ಸಿದ್ದಾರ್ಥ್‌ ಮದುವೆ ದಕ್ಷಿಣ ಭಾರತದ ಸಂಪ್ರದಾಯದಂತೆ ನೆರವೇರಿತು. ಅದಿತಿ ಮತ್ತು ಸಿದ್ಧಾರ್ಥ್ ವನಪರ್ತಿಯಲ್ಲಿ 400 ವರ್ಷಗಳಷ್ಟು ಹಳೆಯದಾದ ದೇವಸ್ಥಾನದಲ್ಲಿ ವಿವಾಹವಾದರು. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ಅದಿತಿ ರಾವ್ ಹೈದರಿ ಒಂದಲ್ಲ ಎರಡಲ್ಲ ರಾಜ ಮನೆತನದವರು. ಅಕ್ಬರ್ ಹೈದರಿಯ ಮೊಮ್ಮಗಳು. ರಾಯಲ್ ಹೈದರಾಬಾದಿ, ವನಪರ್ತಿಯ ಉತ್ತರಾಧಿಕಾರಿ. ಅದಿತಿಯ ಆಸ್ತಿ ರೂ.60-65 ಕೋಟಿ ಎಂದು ವರದಿಯಾಗಿದೆ.  

8 /8

2003 ರಲ್ಲಿ ಬಿಡುಗಡೆಯಾದ ತಮಿಳು ಚಿತ್ರವೊಂದರಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಸಿದ್ಧಾರ್ಥ್ ಸುಮಾರು 70 ಕೋಟಿ ರೂ. ಇವರಿಬ್ಬರ ಆಸ್ತಿ ಹೊಂದಿದ್ದಾರೆ.. ಇಬ್ಬರ ಅಸ್ತಿ ಒಟ್ಟುಗೂಡಿಸಿದರೆ 130ರಿಂದ 135 ಕೋಟಿ ರೂ. ಪ್ರತಿ ಚಿತ್ರ ಅಥವಾ ವೆಬ್ ಸರಣಿಗೆ ಅದಿತಿ ಒಂದು ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ..