Actress Kushbu Hair Care : ನಟಿ ಖುಷ್ಬೂ 90ರ ದಶಕದ ಸ್ಟಾರ್ ನಟಿಯರಲ್ಲಿ ಒಬ್ಬರು. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ಆಗಾಗ, ಕೂದಲ ರಕ್ಷಣೆಯ ಬಗ್ಗೆಯೂ ಒಂದಿಷ್ಟು ಟಿಪ್ಸ್ ಹಂಚಿಕೊಳ್ಳುತ್ತಾರೆ.. ಸಧ್ಯ ಖುಷ್ಬೂ, ನೀಡಿರುವ ಸಲಹೆಗಳು ನೆಟ್ಟಿಗರ ಗಮನಸೆಳೆಯುತ್ತಿವೆ..
ನಟಿ ಖುಷ್ಬೂ 90ರ ದಶಕದಲ್ಲಿ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್, ಸಾಹಸಸಿಹಂ ವಿಷ್ಣುವರ್ಧನ್, ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ನಾಗಾರ್ಜುನ, ವೆಂಕಟೇಶ್ ಸೇರಿದಂತೆ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಮುಖ ತಾರೆಗಳೊಂದಿಗೆ ನಟಿಸಿದ್ದಾರೆ.
ನಟಿ ಖುಷ್ಬೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯ. ವಿಶೇಷವಾಗಿ Instagram ನಲ್ಲಿ. ಆ ಮೂಲಕ ಮನೆಯಲ್ಲೇ ಕೂದಲ ರಕ್ಷಣೆಯ ಸಲಹೆಗಳನ್ನು ಸೇರಿದಂತೆ ಹಲವಾರು ಟಿಪ್ಸ್ ಹಂಚಿಕೊಳ್ಳುತ್ತಾರೆ..
ಲ್ಯಾವೆಂಡರ್ / ರೋಸ್ಮರಿ ಮತ್ತು ಸ್ವಲ್ಪ ಕಪ್ಪು ಕಾಫಿ / ಟೀ, ಗೋರಂಟಿ ಪೇಸ್ಟ್ ಮಿಶ್ರಣ ಮಾಡಿ ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ನಿಮ್ಮ ಕೂದಲನ್ನು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ.
ನಿಮ್ಮ ನೆತ್ತಿಯ ಮೇಲೆ ಗೋರಂಟಿ ಹಚ್ಚಿ ಹಾಗೂ ಶಾಂಪೂವಿನಿಂದ ಕೂದಲನ್ನು ತೊಳೆದು, ಉತ್ತಮ ಕಂಡೀಷನರ್ ಬಳಸಿ.
ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಆರೋಗ್ಯಕರ ಮತ್ತು ಹೊಳೆಯುತ್ತದೆ ಎಂದು ನಟಿ ಖುಷ್ಬೂ ಟಿಪ್ಸ್ ನೀಡಿದ್ದಾರೆ..