Ramya Krishnan net worth : ಹಿರಿಯ ನಾಯಕಿ ರಮ್ಯಾ ಕೃಷ್ಣ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. 90 ದಶಕದಲ್ಲಿ ಬಹುಬೇಡಿಯ ನಟಿಯಾಗಿ ಬಹುತೇಕ ಸೌತ್‌ನ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿ ಜನ ಮನ್ನಣೆ ಗಳಿಸಿದ್ದ ಅಪರೂಪದ ಸುಂದರಿ ಈಕೆ.. ಹೊಸ ನಟಿಯರ ಎಂಟ್ರಿ ನಡುವೆಯೂ ರಮ್ಯಾ ಕೃಷ್ಣ ಅವರ ಡಿಮ್ಯಾಂಡ್ ಕಡಿಮೆಯಾಗಿಲ್ಲ ಬಿಡಿ.. ಸಧ್ಯ ಈ ನಟಿಯ ಗಳಿಕೆ ವಿಚಾರ ಚರ್ಚೆಯಲ್ಲಿದೆ..
80 ಮತ್ತು 90 ರ ದಶಕದಲ್ಲಿ ತನ್ನ ಸೌಂದರ್ಯದಿಂದ ಸೌತ್ ಸಿನಿರಂಗವನ್ನು ಆಳಿದ ನಟಿಯರಲ್ಲಿ ರಮ್ಯಾ ಕೃಷ್ಣ ಒಬ್ಬರು. ಸಾಕಷ್ಟು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ..
ಮಹಿಳಾ ಪ್ರಧಾನ ಚಿತ್ರಗಳಲ್ಲಿಯೂ ನಟಿಸಿ ತಮ್ಮ ಅಭಿನಯ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೆ, ಖಳನಾಯಕಿ ಹಾಗೂ ಗ್ಲಾಮರಸ್ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ಈ ನಟಿ ಪ್ರಸ್ತುತ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರು ಹುಬ್ಬೇರಿಸುವಂತೆ ಮಾಡಿದರು. ಸದ್ಯ ನಟಿಯ ಸಂಭಾವನೆ ಮತ್ತು ಸಂಪಾದನೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಿನಿರಂಗಕ್ಕೆ ಪ್ರವೇಶಿಸಿದಾಗಿನಿಂದ ರಮ್ಯಾ ಕೃಷ್ಣ ಅವರು ಉತ್ತಮ ಜೀವನವನ್ನು ನಡೆಸಿದ್ದಾರೆ. ಇನ್ನೂ ಅನೇಕ ಚಲನಚಿತ್ರಗಳು ಮತ್ತು ಜಾಹೀರಾತುಗಳನ್ನು ಮಾಡುವ ಮೂಲಕ ಸಾಕಷ್ಟು ಸಂಪಾದಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಿಂಗಳಿಗೆ ಸುಮಾರು ಐದು ಕೋಟಿ ರೂ.ವರೆಗೆ ಸಂಪಾದಿಸುತ್ತಿದ್ದಾರೆಂದು ವರದಿಯಾಗಿದೆ.
ಅಲ್ಲದೆ, ಈ ನಟಿ ಹೈದರಾಬಾದ್‌ನಲ್ಲಿ ಮೂರು ಆಭರಣ ಅಂಗಡಿಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ. ಇದಲ್ಲದೆ, ಕೇರಳದಲ್ಲಿ ಮೂರು ಬ್ಯೂಟಿ ಪಾರ್ಲರ್‌ಗಳಿವೆ. ಇದು ನಟಿಗೆ ಹೆಚ್ಚಿನ ಆದಾಯವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ..
ಒಂದೆಡೆ, ವ್ಯವಹಾರವನ್ನು ನೋಡಿಕೊಳ್ಳುತ್ತಾ, ತಮಗೆ ಸಿಗುವ ಪ್ರತಿಯೊಂದು ಚಿತ್ರದಲ್ಲಿ ಪಾತ್ರ ಮಾಡುತ್ತ.. ಜಾಹೀರಾತುಗಳಲ್ಲಿಯೂ ನಟಿಸುವ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ..
ಇವುಗಳೆಲ್ಲವನ್ನೂ ಲೆಕ್ಕ ಹಾಕಿದರೆ ಹಿರಿಯ ನಟಿ ರಮ್ಯಾ ಕೃಷ್ಣ ಅವರು ತಿಂಗಳಿಗೆ ಸುಮಾರು ಐದು ಕೋಟಿ ಗಳಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಸುದ್ದಿ ಈಗ ಅಂತರ್ಜಾಲದಲ್ಲಿ ಬಿಸಿ ವಿಷಯವಾಗಿದೆ.