ಮದುವೆ, ಗಂಡ ಬೇಡ.. ಅದು ಮಾತ್ರ ಬೇಕಂತೆ ಈ ಬಿಗ್‌ಬಾಸ್‌ ಬ್ಯೂಟಿಗೆ...! ಶಿವ.. ಶಿವ.. ಎಂಥಾ ಆಸೆ ಇದು..

Actress life : ಸಿನಿ ಜಗತ್ತಿನಲ್ಲಿ ವಯಸ್ಸಾದರೂ ಇನ್ನೂ ಒಂಟಿಯಾಗಿರುವ ಅನೇಕ ನಟಿಯರಿದ್ದಾರೆ. ವಿಚಿತ್ರ ಅಂದ್ರೆ ಮದುವೆಯಾಗಲು ಇಷ್ಟವಿಲ್ಲ.. ಆದರೆ ಇವರು ತಾಯಿಯಾಗಲು ಬಯಸುತ್ತಾರೆ. ಅದೇ ರೀತಿ 33 ವರ್ಷದ ನಟಿಯೊಬ್ಬಳು ಇದೀಗ ಅವಿವಾಹಿತಳಾಗಿಯೇ ಉಳಿಯಲು ಬಯಸಿದ್ದಾಳೆ.. ಆದ್ರೆ ತಾಯಿ ಆಗ್ಬೇಕು ಎನ್ನುವ ಆಸೆ ವ್ಯಕ್ತಪಡಿಸಿದ್ದಾರೆ..
 

1 /7

ನಾವು ಹೇಳುತ್ತಿರುವುದು ನಟಿ ಟೀನಾ ದತ್ತಾ ಬಗ್ಗೆ.. ಉತ್ತರಾನ್ ಧಾರಾವಾಹಿಯಿಂದ ಟೀನಾ ಖ್ಯಾತಿ ಪಡೆದ ಈ ಸುಂದರಿ ಬಿಗ್ ಬಾಸ್ 16 ವಿನ್ನರ್‌ ಸಹ ಹೌದು..   

2 /7

33 ವರ್ಷದ ಟೀನಾಗೆ ಮದುವೆಯಾಗಿಲ್ಲ.. ಒಂಟಿಯಾಗಿಯೇ ಉಳಿದುಕೊಂಡಿದ್ದಾರೆ. ಆದರೆ ಇತ್ತೀಚಿಗೆ ತಾಯಿಯಾಗುವ ಬಗ್ಗೆ ತನ್ನ ಆಸೆ ವ್ಯಕ್ತಪಡಿಸಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ..  

3 /7

ಭವಿಷ್ಯದಲ್ಲಿ ಮದುವೆಯಾಗದೇ ತಾಯಿಯಾಗುವ ಆಸೆಯನ್ನು ಟೀನಾ ವ್ಯಕ್ತ ಪಡಿಸಿದ್ದಾರೆ. ನಟಿ ಬಾಡಿಗೆ ತಾಯ್ತನ ಅಥವಾ ದತ್ತು ಪಡೆಯಲು ಪ್ಲಾನ್‌ ಮಾಡಿದ್ದಂತಿದೆ..  

4 /7

"ನಾನು ಒಳ್ಳೆಯ ತಾಯಿಯಾಗಬಹುದೆಂದು ಭಾವಿಸುತ್ತೇನೆ" ಎಂದು ಟೀನಾ ಹೇಳಿಕೊಂಡಿದ್ದಾರೆ.. ದತ್ತು ಅಥವಾ ಬಾಡಿಗೆ ತಾಯ್ತನದಂತಹ ಆಯ್ಕೆಗಳನ್ನ ಮಾಡುತ್ತೆನೆ ಎಂದಿದ್ದಾರೆ.  

5 /7

ಒಂಟಿ ತಾಯಂದಿರಾಗಿರುವ ಮಹಿಳೆಯರ ಬಗ್ಗೆ ಟೀನಾಗೆ ಹೆಚ್ಚಿನ ಅಭಿಮಾನವಿದೆ. ಇಬ್ಬರು ಸುಂದರ ಹೆಣ್ಣು ಮಕ್ಕಳನ್ನು ದತ್ತು ಪಡೆದಿರುವ ಸುಶ್ಮಿತಾ ಸೇನ್ ಅವರಂತಹ ಮಹಿಳೆಯರನ್ನು ನಾನು ಮೆಚ್ಚುತ್ತೇನೆ ಅಂತ ಟೀನಾ ಹೇಳುತ್ತಾರೆ..  

6 /7

ನಾನು ಬಾಡಿಗೆ ತಾಯ್ತನದ ಮೂಲಕ ಇಲ್ಲವೇ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದರೆ ನನ್ನ ಕುಟುಂಬ ನನ್ನನ್ನು ಬೆಂಬಲಿಸುತ್ತದೆ. ನನ್ನ ಮತ್ತು ನನ್ನ ಕುಟುಂಬವನ್ನು ನಾನು ನೋಡಿಕೊಳ್ಳಲು ಸಾಧ್ಯವಾದರೆ, ನಾನು ಮಗುವನ್ನು ನೋಡಿಕೊಳ್ಳಬಹುದು. ಇದಕ್ಕಾಗಿ ಗಂಡನನ್ನು ಅವಲಂಬಿಸುವ ಅಗತ್ಯವಿಲ್ಲ ಎಂದಿದ್ದಾರೆ ನಟಿ..  

7 /7

ಸಮಾಜವು ಬದಲಾಗುತ್ತಿದೆ, ಈ ರೀತಿಯ ವಿಷಯಗಳನ್ನು ಸ್ವೀಕರಿಸುತ್ತಿದೆ. ನನಗೆ ಮಕ್ಕಳನ್ನು ದತ್ತು ಪಡೆದ ಅನೇಕ ಸ್ನೇಹಿತರಿದ್ದಾರೆ, ಆದರೆ ಅವರು ಸೆಲೆಬ್ರಿಟಿಗಳಲ್ಲದ ಕಾರಣ ಸುದ್ದಿಯಾಗಿಲ್ಲ ಅಷ್ಟೇ ಎಂದು ನಟಿ ಟೀನಾ ಹೇಳಿಕೊಂಡಿದ್ದಾರೆ.. ಸಧ್ಯ ಸುಂದರಿ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..