Aliens On Earth: ಏಲಿಯನ್ಸ್ (Aliens) ವಿಷಯ ಎಲ್ಲರಲ್ಲಿಯೂ ಕೂಡ ರೋಮಾಂಚನ ಸೃಷ್ಟಿಸುತ್ತವೆ. ಪ್ರಸ್ತುತ ಈ ಏಲಿಯನ್ಸ್ ಗಳು ವಿಜ್ಞಾನಿಗಳಿಗೆ ರೇಡಿಯೋ ಸಿಗ್ನಲ್ ಗಳನ್ನು ರವಾನಿಸುತ್ತಿವೆ. ಈ ವಿಷಯ ಕೇಳಿ ನೀವೂ ಕೂಡ ಬೆರಗಾಗಬಹುದು.
ನವದೆಹಲಿ: Aliens On Earth: ಪ್ರಪಂಚದಲ್ಲಿ ಏಲಿಯನ್ ಗಳ ಅಸ್ತಿತ್ವ ಇದೆಯೇ? ಈ ಏಲಿಯನ್ ಗಳು ಬೇರೊಂದು ಗ್ರಹದ ಮೇಲೆ ವಾಸಿಸುತ್ತವೆಯೇ? ವಿಜ್ಞಾನಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರು ಇಂತಹ ಹಲವು ಪ್ರಶ್ನೆಗಳ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕಳೆದ ಹಲವು ದಿನಗಳಿಂದ ವಿಜ್ಞಾನಿಗಳಿಗೆ ಈ ಏಲಿಯನ್ ಗಳ ಸಂದೇಶ ಸಿಗುತ್ತಿವೆ. ಹೀಗಾಗಿ ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹಗಳ ಮೇಲೂ ಜೀವನ ಇದೆ ಎಂಬುದು ಇದರಿಂದ ಸಾಬೀತಾಗುತ್ತದೆ. ಈ ರೇಡಿಯೋ ಸಂದೇಶಗಳು ಹೊಸ ಪ್ರಶ್ನೆಗಳನ್ನೇ ಹುಟ್ಟುಹಾಕಿವೆ. ಅದೇನೆಂದರೆ ಏಲಿಯನ್ (Alien)ಗಳು ಭೂಮಿಗೆ ಬರಲು ಪ್ರಯತ್ನಿಸುತ್ತಿವೆಯೇ?
.@Cornell postdoc detects possible exoplanet radio emission https://t.co/5sQgP56POZ @CornellCAS @CornellAstro @CSInst #astronomy #exoplanets #radioastronomy pic.twitter.com/mKrin0ahZD
— Blaine Friedlander (@BPFriedlander) December 16, 2020
ಇದನ್ನು ಓದಿ- ಏಲಿಯನ್‌ಗಳು ಭೂಮಿಗೆ ಬಂದಿರುವ ಬಗ್ಗೆ ನಾಸಾ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದುಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡ
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಭೂಮಿಯಿಂದ ಸಾಕಷ್ಟು ದೂರದ ಭಾಗದಿಂದ ರೇಡಿಯೋ ಸಿಗ್ನಲ್ ಗಳನ್ನೂ ಪತ್ತೆಹಚ್ಚಿದೆ. ಟೌ ಬೂಟ್ಸ್ ಎಂಬ ತಾರಾಮಂಡಲದಲ್ಲಿ ಈ ಗ್ರಹವಿದೆ. ಇದು ಭೂಮಿಯಿಂದ ಸುಮಾರು 51 ಬೆಳಕಿನ ವರ್ಷಗಳ ದೂರದಲ್ಲಿದೆ. ಈ ತಾರಾಮಂಡಲ ಬೈನರಿ ಸ್ಟಾರ್ ಮತ್ತು ಎಕ್ಸೋಪ್ಲಾನೆಟ್ ಅನ್ನು ಒಳಗೊಂಡಿದೆ.
ಜೇಕ್ ಟರ್ನರ್ (Jake Turner) ಈ ವಿಜ್ಞಾನಿಗಳ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜೇಕ್ ಟರ್ನರ್ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಶೋಧಕರಾಗಿದ್ದಾರೆ (Postdoctoral Researcher in Cornell University). ಅವರ ತಂಡವು ಫಿಲಿಪ್ ಜಾರ್ಕಾ ಮತ್ತು ಜೀನ್ ಮಥಿಯಾಸ್ ಗ್ರಿಸ್ಮಿಯರ್ ಅವರನ್ನು ಒಳಗೊಂಡಿದೆ. ಅನ್ಯಲೋಕದ ಬಗ್ಗೆ ಅವರ ಸಂಶೋಧನೆಯನ್ನು ಸೈಂಟಿಫಿಕ್ ಜರ್ನಲ್ ಆಸ್ಟ್ರೋನಾಮಿ ಅಂಡ್ ಆಸ್ಟ್ರೋಫಿಸಿಕಲ್ ನಲ್ಲಿ ಪ್ರಕಟಗೊಂಡಿದೆ.
ಟೌ ಬೂಟ್ಸ್ ತಾರಾಮಂಡಲದಿಂದ ವಿಜ್ಞಾನಿಗಳು ಈ ಸಂಕೇತಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಜೇಕ್ ಟರ್ನರ್ ಹೇಳಿದ್ದಾರೆ. ಭೂಮಿಯ ಕಾಂತಕ್ಷೇತ್ರದ ಶಕ್ತಿ ಮತ್ತು ಧ್ರುವೀಕರಣದಿಂದಾಗಿ ಈ ರೇಡಿಯೊ ಸಂಕೇತಗಳನ್ನು ಸ್ವೀಕರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ವಿಜ್ಞಾನಿ ಜೆಕ್ ಟರ್ನರ್, ತಮ್ಮ ಅಧ್ಯಯನದಿಂದ ಏಲಿಯನ್ ಗಳ ಪ್ರಪಂಚದ ಹಲವು ರಹಸ್ಯಗಳು ಬೆಳಕಿಗೆ ಬಂದಿವೆ ಎಂದಿದ್ದಾರೆ. ಇವುಗಳನ್ನು ಬಳಸಿ ಏಲಿಯನ್ ಪ್ರಪಂಚದ ಅಧ್ಯಯನ ನಡೆಸುವ ಸಂಭವನೀಯತೆಗಳು ಹೆಚ್ಚಾಗಲಿವೆ.