Best Home Remedies For White Hair: ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ಈ ಮನೆಮದ್ದು ಬಳಸಿ ಮತ್ತೆ ಕಪ್ಪಾಗಿಸಬಹುದು.
Coconut Oil Coffee Powder Hair Mask: ಬಿಳಿ ಕೂದಲಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಕೂದಲನ್ನು ಮರಳಿ ಕಪ್ಪಾಗಿಸಲು ತೆಂಗಿನ ಎಣ್ಣೆ ತುಂಬಾ ಪ್ರಯೋಜನಕಾರಿ. ಇದನ್ನು ಹೇಗೆ ಬಳಸಬೇಕು ಎಂಬ ಸರಿಯಾದ ವಿಧಾನ ತಿಳಿದಿರಬೇಕು.
ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಕಾಫಿ ಪುಡಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ತೆಂಗಿನೆಣ್ಣೆ ಮತ್ತು ಕಾಫಿ ಪುಡಿ ಬಳಸಿ ಮನೆಯಲ್ಲೇ ಹೇರ್ ಡೈ ತಯಾರಿಸಬಹುದು. ಈ ಹೇರ್ ಪ್ಯಾಕ್ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.
ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ಬಿಸಿ ಮಾಡಿ. 20 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಈಗ ಇದಕ್ಕೆ ಎರಡು ಚಮಚದಷ್ಟು ಕಾಫಿ ಪುಡಿ ಬೆರೆಸಿ ಚೆನ್ನಾಗಿ ಕಲಿಸಿ.
ಕಾಫಿ ಪುಡಿ ಮತ್ತು ತೆಂಗಿನೆಣ್ಣೆಯ ಈ ಹೇರ್ ಪ್ಯಾಕ್ನ್ನು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಂಡು ಮೃದುವಾಗಿ ಮಸಾಜ್ ಮಾಡಿ. ನಂತರ 2 ಗಂಟೆಗಳವರೆಗೆ ಬಿಟ್ಟು ಬಳಿಕ ಕೂದಲನ್ನು ತೊಳೆಯಿರಿ.
ವಾರಕ್ಕೆ ಎರಡು ಬಾರಿ ಬಳಸಬಹುದು. ಇದರಿಂದ ಬಿಳಿ ಕೂದಲು ಕಪ್ಪಾಗುವುದಲ್ಲದೇ ಉದ್ದ ದಪ್ಪವಾಗಿ ಬೆಳೆಯುತ್ತದೆ.
(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)