guava leaves benefits : ಕೂದಲಿಗೆ ಪೇರಳೆ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು.
ಬೆಂಗಳೂರು : ಪ್ರತಿಯೊಬ್ಬರೂ ದಟ್ಟ, ಮೃದು, ಕಾಂತಿಯುತ ಕಪ್ಪು ಹೊಂದಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಬೇರೆ ಬೇರೆ ರೀತಿಯ ಎಣ್ಣೆಯನ್ನು ಹುಡುಕಿದರೆ, ಮತ್ತೆ ಕೆಲವರು ಹೇರ್ ಮಾಸ್ಕ್ ಬಳಸುತ್ತಾರೆ. ಆದರೆ ಇಲ್ಲಿ ನಾವು ಸುಲಭ ಪರಿಹಾರವನ್ನು ಹೇಳುತ್ತಿದ್ದೇವೆ. ಆ ಪರಿಹಾರವೇ ಪೇರಳೆ ಎಲೆಗಳು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಪೇರಳೆ ಎಲೆಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಕೂದಲಿಗೆ ಪೇರಳೆ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು.
ಪೇರಳೆ ಎಲೆಗಳ ಹೇರ್ ಪ್ಯಾಕ್ ಮಾಡಲು 15 ರಿಂದ 20 ಎಲೆಗಳನ್ನು ತೊಳೆದು ಒಣಗಿಸಿ. ನೀರು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ, ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ 30-40 ನಿಮಿಷಗಳ ಕಾಲ ಹಾಗೆ ಬಿಟ್ಟು , ಒಣಗಿದ ಮೇಲೆ ಕೂದಲಿಗೆ ಸ್ನಾನ ಮಾಡಿ.
ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ. ಇನ್ನೊಂದೆಡೆ ಒಂದು ಚಿಕ್ಕ ಈರುಳ್ಳಿ ಹಾಕಿ ಪ್ಯೂರಿ ಮಾಡಿ ಈರುಳ್ಳಿ ರಸ ತೆಗೆದುಕೊಳ್ಳಿ. ಈರುಳ್ಳಿ ರಸದಲ್ಲಿ ಪೇರಳೆ ಎಲೆಗಳ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ಕೂದಲಿಗೆ ಸ್ನಾನ ಮಾಡಿ.
ಕೆಲವು ಪೇರಳೆ ಎಲೆಗಳನ್ನು ತೊಳೆದುಕೊಂಡು, ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ. 15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ, ಆ ನೀರನ್ನು ತಣ್ಣಗಾಗಿಸಿ. ಅದು ತಣ್ಣಗಾದ ನಂತರ, ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಈ ನೀರನೂ ಹಚ್ಚಿ. 10 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಸ್ವಲ್ಪ ಸಮಯದ ನಂತರ ಕೂದಲನ್ನು ತೊಳೆಯಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.