Virat Kohli : ಇಂದು ಪಾಕಿಸ್ತಾನದ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿ ಅವರಿಗೆ ಕೊಂಚ ವಿಶೆಷವಾಗಿದೆ. ಒಂದಲ್ಲೊಂದು ದಾಖಲೆ ಬರೆದು ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ಇಂದು ಕಿಂಗ್ ಕೊಹ್ಲಿ ಅವರಿಗೆ ಇದು 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿರಲಿದೆ.
Asia Cup 2022 : ಬದ್ಧ ವೈರಿಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನೇನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗ ವಿರಾಟ್ ಕೊಹ್ಲಿ ಇಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಖಾಡಕ್ಕಿಳಿದ ತಕ್ಷಣ ಕ್ರಿಕೆಟ್ನ ಎಲ್ಲಾ ಮೂರು ಮಾದರಿಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಎಂಬ ದಾಖಲೆ ಬರೆಯಲಿದ್ದಾರೆ. ಇಂದು ಪಾಕಿಸ್ತಾನದ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿ ಅವರಿಗೆ ಕೊಂಚ ವಿಶೆಷವಾಗಿದೆ. ಒಂದಲ್ಲೊಂದು ದಾಖಲೆ ಬರೆದು ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ಇಂದು ಕಿಂಗ್ ಕೊಹ್ಲಿ ಅವರಿಗೆ ಇದು 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿರಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ - ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಬದ್ಧ ವೈರಿಗಳ ನಡುವೆ ನಡೆಯುವ ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ದ ಏಷ್ಯಾಕಪ್ ಸರಣಿಯಲ್ಲಿ ತಮ್ಮ ನೂರನೇ ಟಿ20 ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವ ಮೂಲಕ ಫಾರ್ಮ್ಗೆ ಮರಳುತ್ತಾರೆ ಎಂದು ಕೊಹ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಬದ್ಧ ವೈರಿಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನೇನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗ ವಿರಾಟ್ ಕೊಹ್ಲಿ ಇಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಖಾಡಕ್ಕಿಳಿದ ತಕ್ಷಣ ಕ್ರಿಕೆಟ್ನ ಎಲ್ಲಾ ಮೂರು ಮಾದರಿಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಎಂಬ ದಾಖಲೆ ಬರೆಯಲಿದ್ದಾರೆ. ವಿರಾಟ್ ಕೊಹ್ಲಿ ಈ ಮೊದಲು ಅಂತಾರಾಷ್ಟ್ರೀಯ ಪಿಚ್ನಲ್ಲಿ ಏಕದಿನ ಪಂದ್ಯಗಳಲ್ಲಿ ಶತಕ ಪೂರೈಸಿದರು. 2013 ರ ಜೂನ್ 11 ರಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಕೊಹ್ಲಿ ತಮ್ಮ 100 ನೇ ಏಕದಿನ ಪಂದ್ಯವನ್ನು ಆಡಿದ್ದರು.
2022 ರ ಮಾರ್ಚ್ 4 ರಂದು ಮೊಹಾಲಿಯಲ್ಲಿ ತಮ್ಮ 100 ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದರು. ಇದು ಶ್ರೀಲಂಕಾ ವಿರುದ್ಧ ನಡೆದ ಪಂದ್ಯವಾಗಿತ್ತು. ಇಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿರುವ ಪಂದ್ಯ ಅವರ T20I ವೃತ್ತಿಜೀವನದ 100 ನೇ ಪಂದ್ಯವಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದುವರೆಗೆ 99 ಟಿ20 ಪಂದ್ಯಗಳಲ್ಲಿ 3308 ರನ್ ಗಳಿಸಿದ್ದಾರೆ.
ಮೂರೂ ಮಾದರಿಯಲ್ಲಿ 100 ಪಂದ್ಯಗಳನ್ನು ಪೂರೈಸಲಿರುವ ಮೊದಲ ಭಾರತೀಯ ಕ್ರಿಕೆಟರ್ ಮತ್ತು ವಿಶ್ವದ 2ನೇ ಕ್ರಿಕೆಟಿಗ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ನ್ಯೂಜಿಲೆಂಡ್ನ ರಾಸ್ ಟೇಲರ್ ಎಲ್ಲಾ 3 ಮಾದರಿಯಲ್ಲೂ 100 ಪಂದ್ಯವಾಡಿದ ವಿಶ್ವದ ಮೊದಲ ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಖಾಡಕ್ಕಿಳಿದ ತಕ್ಷಣ ಕ್ರಿಕೆಟ್ನ ಎಲ್ಲಾ ಮೂರು ಮಾದರಿಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಕ್ರಿಕೆಟರ್ ಎಂಬ ದಾಖಲೆ ಬರೆಯಲಿದ್ದಾರೆ.
ವಿರಾಟ್ ಕೊಹ್ಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಇದು ವರೆಗೂ 99 T20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 50.12ರ ಬ್ಯಾಟಿಂಗ್ ಸರಾಸರಿಯಲ್ಲಿ 30 ಅರ್ಧಶತಕ ಸಹಿತ ಒಟ್ಟು 3,308 ರನ್ ಸಿಡಿಸಿದ್ದಾರೆ ಕಿಂಗ್ ಕೊಹ್ಲಿ. ಆದರೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಇದುವರೆಗೂ ಶತಕ ಸಿಡಿಸಿಲ್ಲ. ವಿರಾಟ್ ಕೊಹ್ಲಿ 102 ಟೆಸ್ಟ್, 262 ಏಕದಿನ ಪಂದ್ಯಗಳನ್ನಾಡಿದ್ದಾರೆ ಎಂಬುದು ವಿಶೇಷ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ನೂರು ಪಂದ್ಯಗಳನ್ನಾಡಿದ 2 ನೇ ಭಾರತೀಯ ಆಟಗಾರ ಕೂಡ ಕೊಹ್ಲಿ ಆಗಲಿದ್ದಾರೆ. ರೋಹಿತ್ ಶರ್ಮಾ, ಟೀಂ ಇಂಡಿಯಾ ಪರ 132 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಇವರು ಟಿ20 ಕ್ರಿಕೆಟ್ನಲ್ಲಿ ನೂರು ಪಂದ್ಯಗಳನ್ನಾಡಿದ ಮೊದಲ ಭಾರತೀಯ ಆಟಗಾರನಾಗಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ - ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಬದ್ಧ ವೈರಿಗಳ ನಡುವೆ ನಡೆಯುವ ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ದ ಏಷ್ಯಾಕಪ್ ಸರಣಿಯಲ್ಲಿ ತಮ್ಮ ನೂರನೇ ಟಿ20 ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವ ಮೂಲಕ ಫಾರ್ಮ್ಗೆ ಮರಳುತ್ತಾರೆ ಎಂದು ಕೊಹ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.