Astro Tips: ತಿಂಗಳಲ್ಲಿ ಐದು ದಿನ (ಐದು ತಿಥಿ) ಈರುಳ್ಳಿ-ಬೆಳ್ಳುಳ್ಳಿಯನ್ನು ಸೇವಿಸದಿದ್ದರೆ ಜೀವನ ಪರ್ಯಂತ ತಾಯಿ ಮಹಾಲಕ್ಷ್ಮಿಯ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ತಿಂಗಳಲ್ಲಿ ಯಾವ್ಯಾವ ದಿನ ಈರುಳ್ಳಿ-ಬೆಳ್ಳುಳ್ಳಿ ತಿನ್ನಬಾರದು ತಿಳಿಯಿರಿ.
Astro Tips: ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಪ್ರತೀಕಾರದ ಆಹಾರ ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾವುದೇ ವಿಶೇಷ ಪೂಜೆ, ಉಪವಾಸದ ಸಂದರ್ಭದಲ್ಲಿ ಇಂತಹ ಆಹಾರವನ್ನು ಸೇವಿಸಬಾರದು. ಕಾರಣ, ಈರುಳ್ಳಿ ಮತ್ತು ಬೆಳ್ಳುಳ್ಳಿ ಇವೆರಡೂ ರಾಹುವಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಹಾಗಂತ, ನಿತ್ಯ ಆಹಾರದಲ್ಲಿ ಇವುಗಳನ್ನು ಬಳಸದಿದ್ದರೆ ಅಡುಗೆ ರುಚಿ ಎಂದೆನಿಸುವುದಿಲ್ಲ. ಆದರೆ, ತಿಂಗಳಲ್ಲಿ ಐದು ದಿನ (ಐದು ತಿಥಿ) ಈರುಳ್ಳಿ-ಬೆಳ್ಳುಳ್ಳಿಯನ್ನು ಸೇವಿಸದಿದ್ದರೆ ಜೀವನ ಪರ್ಯಂತ ತಾಯಿ ಮಹಾಲಕ್ಷ್ಮಿಯ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ತಿಂಗಳಲ್ಲಿ ಯಾವ್ಯಾವ ದಿನ ಈರುಳ್ಳಿ-ಬೆಳ್ಳುಳ್ಳಿ ತಿನ್ನಬಾರದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರತಿ ಮಾಸದಲ್ಲಿ ಬರುವ ಅಮಾವಾಸ್ಯೆಯು ಪೂರ್ವಜರಿಗೆ ಸಂಬಂಧಿಸಿದೆ. ಈ ದಿನ ಪಿಂಡದಾನ, ಶ್ರಾದ್ಧದಂತಹ ಕಾರ್ಯಗಳನ್ನು ಮಾಡಲಾಗುತ್ತದೆ. ಈ ದಿನದಂದು ಈರುಳ್ಳಿ-ಬೆಳ್ಳುಳ್ಳಿಯನ್ನು ಸೇವಿಸಬಾರದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಮಾವಾಸ್ಯೆಯಂತೆ ಹುಣ್ಣಿಮೆಗೂ ಕೂಡ ಮಹತ್ವವಿದೆ. ಹುಣ್ಣಿಮೆ ಚಂದ್ರನಿಗೆ ಸಂಬಂಧಿಸಿದ ದಿನ. ಚಂದ್ರ ತಾಯಿ ಮಹಾಲಕ್ಷ್ಮಿಯ ಸಹೋದರ. ಹಾಗಾಗಿ, ಹುಣ್ಣಿಮೆ ದಿನದಂದು ತಾಯಿ ಲಕ್ಷ್ಮಿ ಪೂಜೆಗೆ ತುಂಬಾ ಪ್ರಾಮುಖ್ಯತೆ ಇದೆ. ಹುಣ್ಣಿಮೆಯ ದಿನದಂದೂ ಕೂಡ ನಿಮ್ಮ ಆಹಾರದಿಂದ ಈರುಳ್ಳಿ-ಬೆಳ್ಳುಳ್ಳಿಯನ್ನು ದೂರವಿಡಿ.
ಏಕಾದಶಿ ವ್ರತ, ಉಪವಾಸ, ಪೂಜೆಗೆ ವಿಶೇಷವಾದ ಮಹತ್ವವಿದೆ. ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಈ ದಿನ ನೀವು ಉಪವಾಸವನ್ನು ಆಚರಿಸದಿದ್ದರೂ ಕೂಡ ಈರುಳ್ಳಿ-ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.
ಪ್ರತಿ ತಿಂಗಳು ಗಣೇಶ ಚತುರ್ಥಿತಿಯನ್ನು ಆಚರಿಸಲಾಗುತ್ತದೆ. ಈ ದಿನ ವಿಘ್ನ ವಿನಾಶಕನನ್ನು ಭಕ್ತಿ-ಭಾವದಿಂದ ಪೂಜಿಸುವುದರಿಂದ ವಿಶೇಷ ಫಲ ದೊರೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಗಣೇಶ ಚತುರ್ಥಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಬಾರದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಮಾಸದ ತ್ರಯೋದಶಿ ತಿಥಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುವುದು. ಈ ದಿನ ಶಿವನ ಪೂಜೆಗೆ ವಿಶೇಷ ಮಹತ್ವವಿದ್ದು, ಪ್ರದೋಷ ವ್ರತಾಚರಣೆಗೂ ಪ್ರಾಮುಖ್ಯತೆ ಇದೆ. ಈ ದಿನ ನಿಮ್ಮ ಆಹಾರದಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದೂರ ಇಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.