Best Mileage Bikes: 110 ಕಿ.ಮೀವರೆಗೆ ಮೈಲೇಜ್ ನೀಡುತ್ತವೆ ಈ ಬೈಕ್ ಗಳು, ಬೆಲೆ ರೂ.56,000 ರಿಂದ ಆರಂಭ

Best Mileage Bikes: TVS Sports ಬೈಕ್ ಬೆಲೆ ರೂ.60,000 ದಿಂದ ಆರಂಭಗೊಂಡು ರೂ.66,000 ವರೆಗೆ ಹೋಗುತ್ತದೆ. ಇದು ಅತಿ ಹೆಚ್ಚು ಮಾರಾಟವಾಗುವ ಕಂಪನಿಯ ಬೈಕ್ ಆಗಿದೆ.
 

Best Mileage Bikes Under 65000 Rupees: ದೇಶಾದ್ಯಂತ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಯ ನಡುವೆಯೇ ಯಾವುದಾದರೊಂದು ಬೈಕ್ 110 ಕಿ.ಮೀವರೆಗೆ ಮೈಲೇಜ್ ನೀಡುತ್ತಿದೆ ಎಂದು ನಿಮಗೆ ಗೊತ್ತಾದರೆ ಹೇಗೆ? ಆದರೆ. ಇಂತಹ ಯಾವುದೇ ಬೈಕ್ ಇಲ್ಲವೇ ಇಲ್ಲ ಎಂದು ಸ್ವಲ್ಪ ಕ್ಷಣ ನಿಮಗೂ ಅನಿಸಿರಬಹುದು. ಇಂದು ನಾವು ನಿಮಗೆ ಅತಿ ಹೆಚ್ಚು ಮೈಲೇಜ್ ನೀಡುವ ದೇಶದ ಬೈಕ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಬೈಕ್ ಗಳು 100ಕ್ಕೂ ಹೆಚ್ಚು ಕಿಲೋಮೀಟರ್ ಮೈಲೇಜ್ ನೀಡುತ್ತವೆ. ಇವುಗಳಲ್ಲಿನ ಒಂದು ಬೈಕ್ 110 ಕಿ.ಮೀ ವರೆಗೆ ಮೈಲೇಜ್ ಕೊಡಬಹುದು.

 

ಇದನ್ನೂ ಓದಿ-Vijay Mallya Case: ವಿಜಯ್ ಮಲ್ಯಗೆ ನಾಲ್ಕು ತಿಂಗಳ ಸೆರೆವಾಸ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದ SC

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

1 /4

ಟಿವಿಎಸ್ ಸ್ಪೋರ್ಟ್ಸ್ (ಎಕ್ಸ್ ಷೋರೂಮ್ ಬೆಲೆ ರೂ.60,000 ಕ್ಕಿಂತ ಹೆಚ್ಚಾಗಿದೆ) - ಟಿವಿಎಸ್ ಕಂಪನಿಯ ಸ್ಪೋರ್ಟ್ಸ್ ಬೈಕ್ ಬೆಲೆ 60 ಸಾವಿರ ರೂ.ಗಳಿಂದ ಆರಂಭಗೊಂಡು 66 ಸಾವಿರ ರೂ.ಗಳವರೆಗೆ ಹೋಗುತ್ತದೆ. ಇದು ಕಂಪನಿಯ ಅತಿ ಹೆಚ್ಚು ಮಾರಾಟಗೊಳ್ಳುವ ಬೈಕ್ ಆಗಿದೆ. ಇದು 109 ಸಿಸಿ ಇಂಜಿನ್ ಸಾಮರ್ಥ್ಯದೊಂದಿಗೆ ಬರುತ್ತದೆ ಮತ್ತು 8.18bhp ಗರಿಷ್ಠ ಮೈಲೇಜ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ನ ನಿರ್ವಹಣಾ ವೆಚ್ಚವೂ ಕೂಡ ತುಂಬಾ ಕಡಿಮೆಯಾಗಿದೆ. ಟಿವಿಎಸ್ ಕಂಪನಿಯ ವೆಬ್ ಸೈಟ್ ಮೇಲೆ ಪಟ್ಟಿಮಾಡಲಾಗಿರುವ ರೀವ್ಯೂಗಳ ಪ್ರಕಾರ, ಈ ಬೈಕ್ 110ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.

2 /4

ಹೀರೋ ಹೆಚ್ ಎಫ್ ಡಿಲಕ್ಸ್ (ಆರಂಭಿಕ ಎಕ್ಸ್ ಷೋರೂಮ್ ಬೆಲೆ 56,070 ರೂ.ಗಳು) - ಹೀರೋ ಹೆಚ್ ಎಫ್ ಡಿಲಕ್ಸ್ ಬೈಕ್ ನ ಆರಂಭಿಕ ಬೆಲೆ ರೂ. 56,070 ಆಗಿದೆ. ಇದರ ಗರಿಷ್ಟ ಬೆಲೆ ರೂ.63,790ರವರೆಗೆ ತಲುಪುತ್ತದೆ. 97.2cc ಇಂಜಿನ್ ಸಾಮರ್ಥ್ಯದ ಈ ಬೈಕ್, 5.9kw ಪವರ್ ಹಾಗೂ 8.5Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಗ್ರಾಹಕರೊಬ್ಬರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ, ಈ ಬೈಕ್ 100 ಕಿ.ಮೀಗೂ ಅಧಿಕ ಮೈಲೇಜ್ ನೀಡುತ್ತದೆ ಎನ್ನಲಾಗಿದೆ. 

3 /4

ಬಜಾಜ್ ಪ್ಲಾಟಿನಾ 100 (ಎಕ್ಸ್ ಷೋರೂಮ್ ಬೆಲೆ ರೂ.53,000ದಿಂದ ಆರಂಭ) - ಬಜಾಜ್ ಪ್ಲಾಟಿನಾ 100, 102 cc 4-ಸ್ಟ್ರೋಕ್, DTS-i, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 5.8 kW ಗರಿಷ್ಠ ಶಕ್ತಿ ಮತ್ತು 8.3 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಬೈಕ್‌ನ ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿದ್ದು, 70 ಕಿಲೋಮೀಟರ್‌ಗಿಂತಲೂ ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಇದು ಹೊಂದಿದೆ.

4 /4

ಬಜಾಜ್ ಸಿಟಿ110 ಎಕ್ಸ್ (ಎಕ್ಸ್ ಷೋರೂಮ್ ಬೆಲೆ ರೂ.66,000ನಿಂದ ಆರಂಭ) - ಬಜಾಜ್ CT110X 115.45cc 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8.6 PS ಗರಿಷ್ಠ ಶಕ್ತಿ ಮತ್ತು 9.81 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಈ ಬೈಕ್ ಪಡೆಯುತ್ತದೆ. ಇದರ ಮೈಲೇಜ್ ಕೂಡ 70 ಕಿ.ಮೀಗಿಂತ ಹೆಚ್ಚಾಗಿದೆ.