Actress on Casting Couch : 26 ವರ್ಷದ ಬಿಗ್ ಬಾಸ್ ಸ್ಪರ್ಧಿ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವೃದ್ಧನೊಬ್ಬನು ತಮ್ಮನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ ವಿಚಾರವನ್ನು ಹೇಳಿಕೊಂಡಿದ್ದಾರೆ.. ಅಲ್ಲದೆ, ಈ ಘಟನೆ ತಮ್ಮ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬಿದ್ದಿದೆ ಅಂತ ನೋವು ತೋಡಿಕೊಂಡಿದ್ದಾರೆ..
ಕಾಸ್ಟಿಂಗ್ ಕೌಚ್... ಸಿನಿರಂಗದಲ್ಲಿ ಇತ್ತೀಚಿಗೆ ಹೆಚ್ಚಾಗಿ ಕೇಳಿ ಬರುತ್ತಿರುವ ಪದ.. ಕಿರುತೆರೆಯಿಂದ ಹಿಡಿದು ಸಿನಿರಂಗದಲ್ಲಿ ಯಾರೂ ಇದರಿಂದ ಹೊರತಾಗಿಲ್ಲ. ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಈಗ ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರ ತಾವು ಅನುಭವಿಸಿದ ನೋವಿನ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.. ತಮ್ಮ ಕಾಸ್ಟಿಂಗ್ ಕೌಚ್‌ನ ನೋವಿನ ಕಥೆಯನ್ನು ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಯಾರು ಈ ಸುಂದರಿ.. ಈಕೆ ಹೇಳಿದ್ದೇನು..? ಬನ್ನಿ ನೋಡೋಣ..
ಈ ನಟಿಯ ಹೆಸರು ಈಡನ್ ರೋಸ್. ಬಿಗ್ ಬಾಸ್ ಹಿಂದಿ 18 ರ ಸ್ಪರ್ಧಿ.. ಈಕೆ ಇತ್ತೀಚಿನ ಸಂದರ್ಶನವೊಂದರಲ್ಲಿ, ವಯಸ್ಸಾದ ವ್ಯಕ್ತಿಯೊಬ್ಬರು ತಮ್ಮನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನಿಸಿದರು ಎಂಬುದನ್ನು ಬಹಿರಂಗ ಪಡಿಸಿದ್ದಾಳೆ..
'ಒಬ್ಬ ವ್ಯಕ್ತಿ ನನಗೆ ನಂಬರ್ ಕೊಟ್ಟ...' ಅವರನ್ನು ಭೇಟಿ ಪ್ರಾಜೆಕ್ಟ್ ಒಂದಕ್ಕೆ ಒಪ್ಪಂದಕ್ಕೆ ಸಹಿ ಹಾಕಲು ನನ್ನನ್ನು ಕರೆಯಲಾಯಿತು. ಅನೇಕ ದೊಡ್ಡ ತಾರೆಯರನ್ನು ಒಳಗೊಂಡ ಒಂದು ಯೋಜನೆ ಅಂತ ನನಗೆ ಹೇಳಲಾಗಿತ್ತು. ನನ್ನ ಪಾತ್ರವನ್ನೂ ಅಲ್ಲಿಯೇ ನಿರ್ಧರಿಸಲಾಯಿತು.
'ನಾನು ಭೇಟಿಯಾದ ವ್ಯಕ್ತಿಯ ಮನೆಯಲ್ಲಿ ಒಂದು ಕಚೇರಿ ಇತ್ತು' ಅಲ್ಲಿ ಹಲವು ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕ್ಯಾಮೆರಾ ಇದ್ದರೂ, ಆ ಮುದುಕ ತನ್ನ ತೊಡೆಯ ಮೇಲೆ ಕೈ ಇಟ್ಟ, ನಂತರ ನನಗೆ ಆಘಾತವಾಯಿತು. ಆ ಮನುಷ್ಯನು ಎಷ್ಟು ವಯಸ್ಸಾದನೆಂದರೆ, ಅವನು ಜೋರಾಗಿ ಉಸಿರಾಡಿದರೆ ಸಾಯುತ್ತಾನೆ.
ಅವರು ನನಗೆ ಸಹಿ ಹಾಕಲು ಒಪ್ಪಂದ ಮಾಡಿಕೊಂಡು. ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳು. ಅವನು ನನ್ನ ತೊಡೆಯ ಮೇಲೆ ಕೈ ಇಟ್ಟ ತಕ್ಷಣ, ನಾನು 5 ನಿಮಿಷಗಳ ಕಾಲ ಸ್ಟನ್ ಆದೆ.. ಕ್ಯಾಮೆರಾಗಳಿದ್ದರೂ ಆ ವ್ಯಕ್ತಿ ಇಷ್ಟೊಂದು ಹೇಯ ಕೃತ್ಯ ಎಸಗುತ್ತಿರುವುದು ನನಗೆ ಆಶ್ಚರ್ಯ ತಂದಿತು" ಎಂದು ಈಡನ್ ಹೇಳಿದರು.
ಇದಾದ ನಂತರ ಕೋಪಗೊಂಡು ಒಪ್ಪಂದದ ಪತ್ರವನ್ನು ನಾಲ್ಕು ತುಂಡುಗಳಾಗಿ ಹರಿದು ಅಲ್ಲಿಂದ ಹಿಂತಿರುಗಿದೆ ಎಂದು ಬಿಗ್ ಬಾಸ್ ಸುಂದರಿ ಈಡನ್ ರೋಸ್ ಹೇಳಿಕೊಂಡಿದ್ದಾರೆ.. ಅಂದಹಾಗೆ ಈಡನ್ ಒರ್ವ ಪ್ರಖ್ಯಾತ ರೂಪದರ್ಶಿ ಮತ್ತು ನಟಿ.. ಬಿಗ್‌ಬಾಸ್ ಮೂಲಕ ಮುನ್ನೆಲೆಗೆ ಬಂದರು..
ಈಡನ್ ರೋಸ್ 'ಬಿಗ್ ಬಾಸ್ 18' ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು.. ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ತನ್ನ ಸೌಂದರ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಈ ಚೆಲುವೆ ದುಬೈನಲ್ಲಿ ಜನಿಸಿ.. ನಟನೆ ಮೇಲಿನ ಆಸಕ್ತಿಯಿಂದ ಭಾರತಕ್ಕೆ ಬಂದರು.