BBK 11: ಡಬಲ್‌ ಎಲಿಮಿನೇಷನ್‌ ಬೆನ್ನಲ್ಲೇ ಮೋಕ್ಷಿತಾ ಬಳಿಕ ಬಿಗ್‌ಬಾಸ್‌ ಫಿನಾಲೆಗೆ ಎಂಟ್ರಿ ಕೊಟ್ಟೇಬಿಟ್ರು ಯಾರೂ ಊಹಿಸದ ಸ್ಪರ್ಧಿ!

Bigg Boss Kannada Finalist: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಡಬಲ್‌ ಎಲಿಮಿನೇಷನ್‌ ನಡೆದಿದೆ.. ಫಿನಾಲೆಗೆ ಸೆಲೆಕ್ಟ್‌ ಆದ ಮೂರು ಸ್ಪರ್ಧಿಗಳನ್ನು ಹೊರತುಪಡಿಸಿ ಇಬ್ಬರನ್ನು ಮನೆಯಿಂದ ಹೊರಕಳಿಸಲಾಗಿದೆ.. ಇದೀಗ ಗ್ಯ್ರಾಂಡ್‌ ಫಿನಾಲೆಗೆ ಎಂಟ್ರಿಕೊಡುವ ಮತ್ತೊಬ್ಬ ಸ್ಪರ್ಧಿಯ ಹೆಸರು ಲೀಕ್‌ ಆಗಿದೆ.. 

1 /6

ಬಿಗ್‌ಬಾಸ್‌ ಮನೆಯಿಂದ ಡಬಲ್‌ ಎಲಿಮಿನೇಷನ್‌ನಲ್ಲಿ ಗೌತಮಿ ಮತ್ತು ಧನರಾಜ್‌ ಹೊರಗೆ ಹೋಗಿದ್ದಾರೆ ಎಂದು ವರದಿಯಾಗಿದೆ.. ಮೂರು ಸ್ಪರ್ಧಿಗಳು ಈಗಾಗಲೇ ಫಿನಾಲೆ ಪ್ರವೇಶ ಪಡೆದುಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಭವ್ಯ, ಮಂಜು, ರಜತ್‌ ಈ ಮೂವರಲ್ಲಿ ಯಾರು ಫಿನಾಲೆಗೆ ಎಂಟ್ರಿಕೊಡಲಿದ್ದಾರೆ ಎನ್ನುವ ಗುಸುಗುಸು ಇದೀಗ ಶುರುವಾಗಿದೆ..   

2 /6

ಕಳೆದ ವಾರ ಬಿಗ್‌ಬಾಸ್‌ ಮನೆಯಲ್ಲಿ ಮಿಡ್‌ವೀಕ್‌ ಎಲಿಮಿನೇಷನ್‌ ಘೋಷಣೆ ಮಾಡಲಾಗಿತ್ತು.. ಆದರೆ ಕಾರಣಾಂತರಳಿಂದ ಎಲಿಮಿನೇಷನ್‌ ರದ್ದಾಯಿತು.. ಇದರಿಂದ ಈ ವಾರಾಂತ್ಯದಲ್ಲಿ ಇಬ್ಬರು ಹೊರಹೋಗುವ ಅನಿವಾರ್ಯತೆ ಎದುರಾಯಿತು.. ಇದರಿಂದ ಎಲ್ಲರ ಲೆಕ್ಕಾಚಾರ ತಲೆಕೆಳಗಾಯಿತು.. ಫಿನಾಲೆಗೆ ಎಂಟ್ರಿ ಕೊಡ್ತಾರೆ ಎಂದುಕೊಂಡಿದ್ದ ಧನರಾಜ್‌ ಮಾಡಿದ ಒಂದೇ ಒಂದು ತಪ್ಪಿನಿಂದ ಮನೆಯಿಂದಲೇ ಹೊರಹೋದರು..  

3 /6

ಉಳಿದ ಆರು ಜನರಲ್ಲಿ ಈಗಾಗಲೇ ಮೂರು ಜನ ಎಂದರೇ ತ್ರಿವಿಕ್ರಮ್‌, ಹನುಮಂತ, ಮೋಕ್ಷಿತಾ ಫಿನಾಲೆ ತಲುಪಿದ್ದಾರೆ.. ಅದರಂತೆ ಭವ್ಯ, ಮಂಜು, ರಜತ್‌ ಈ ಮೂವರಲ್ಲಿ ಯಾರು ಫಿನಾಲೆಗೆ ಪ್ರವೇಶ ಪಡೆಯಲಿದ್ದಾರೆ ಎನ್ನುವುದು ಈಗಿನ ಕುತೂಹಲದ ವಿಷಯವಾಗಿದೆ..  

4 /6

ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಭವ್ಯ ಫಿನಾಲೆ ಪ್ರವೇಶ ಪಡೆಯಬಹುದು ಎನ್ನಲಾಗಿದೆ.. ಏಕೆಂದರೇ ಉಳಿದ ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೇ ಭವ್ಯ ಮನೆಯಲ್ಲಿ ಸ್ಟ್ರಾಂಗ್‌ ಕಂಟೆಸ್ಟಂಟ್‌ ಎಂದೇ ಹೇಳಲಾಗುತ್ತದೆ.. ಹೀಗಾಗಿ ಅವರೇ ಮುಂದಿನ ಫಿನಾಲೆ ಸ್ಪರ್ಧಿ ಎಂದು ವರದಿಯಾಗಿದೆ..   

5 /6

ಒಂದು ವೇಳೆ ಭವ್ಯ ಫಿನಾಲೆಗೆ ಎಂಟ್ರಿ ಕೊಟ್ಟರೇ ಮಂಜು, ರಜತ್‌ ಇಬ್ಬರಲ್ಲಿ ಯಾರಾದರೂ ಒಬ್ಬರು ಮನೆಯಿಂದ ಹೊರಹೋಗುತ್ತಾರೆ.. ಏಕೆಂದರೇ ಫಿನಾಲೆಗೆ ಕೇಲ ಟಾಪ್‌ 5 ಸ್ಪರ್ಧಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ..   

6 /6

ಇಷ್ಟೇ ಅಲ್ಲದೇ ನಿನ್ನೆಯ ಸಂಚಿಕೆಯಲ್ಲಿ ಬಿಗ್‌ಬಾಸ್‌ ವಿನ್ನರ್‌ ಪಡೆಯುವ ಕಪ್‌ ಸಹ ಅನಾವರಣವಾಗಿದೆ.. ಸದ್ಯ ಈ ಕಪ್‌ ಯಾರ ಪಾಲಾಗುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ.. ಇದಕ್ಕಾಗಿ ನಾವು ಫಿನಾಲೆ ವಾರದ ವರೆಗೂ ಕಾಯಲೇಬೇಕಿದೆ..