Diabetes Control tips: ಮಧುಮೇಹ ವೇಗವಾಗಿ ಹೆಚ್ಚುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ.. ಇದಕ್ಕೆ ಪರಿಹಾರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಈ ಬ್ಲಡ್ ಶುಗರ್ನ್ನು ನಿಯಂತ್ರಿಸಬಹುದು..
ಮಧುಮೇಹ ದಿನೇ ದಿನೇ ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ.. ಈ ರೋಗಕ್ಕೆ ವೈದ್ಯರು ಸೂಚಿಸಿದ ಪರಿಹಾರವೇನು ಬೇಕು ಆದರೆ ಕೆಲವು ನೈಸರ್ಗಿಕ ವಿಧಾನಗಳು ಸಹ ಅವಶ್ಯವಾಗಿರುತ್ತವೆ..
ಶತಾವರಿ ಒಂದು ಆಯುರ್ವೇದ ಔಷಧೀಯ ಮೂಲಿಕೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.. ಇದು ಮಾನವನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.. ಇದರಿಂದ ಮಧುಮೇಹವನ್ನು ಹೇಗೆ ನಿಯಂತ್ರಿಸಬಹುದು ಎನ್ನುವುದನ್ನು ನೋಡೋಣ..
ಶತಾವರಿಯನ್ನು ಪುಡಿ ಮಾಡಿ ಅಥವಾ ಟ್ಯಾಬ್ಲೆಟ್ ರೂಪದಲ್ಲಿ ತೆಗೆದುಕೊಳ್ಳಬಹುದು.. ಅಶ್ವಗಂಧವನ್ನು ಆಯುರ್ವೇದ ಗಿಡಮೂಲಿಕೆಗಳ ರಾಜ ಎಂದರೇ, ಶತಾವರಿಯನ್ನು ಆಯುರ್ವೇದ ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ.
ಈ ಶತಾವರಿಯನ್ನು ಆಸ್ಪ್ಯಾರಗಸ್ ಎಂದು ಕರೆಯಲಾಗುತ್ತದೆ.. ಶತಾವರಿ ಬಳ್ಳಿ 100 ಕ್ಕೂ ಹೆಚ್ಚು ಬೇರುಗಳನ್ನು ಹೊಂದಿದೆ. ಇವು 30-100 ಸೆಂ.ಮೀ ಉದ್ದ ಮತ್ತು ಸುಮಾರು 1-2 ಸೆಂ.ಮೀ. ಇರುತ್ತವೆ.. ಶತಾವರಿಯು ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆಯಿಲ್ಲ.
ಅರ್ಧ ಚಮಚ ಶತಾವರಿ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಮಲಗುವ ಮುನ್ನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಮಟ್ಟ ನಿಯಂತ್ರಣದಲ್ಲಿರುತ್ತದೆ.. ಇದಲ್ಲದೇ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ಕುಡಿಯಬಹುದು.. ಇಲ್ಲವಾದರೆ ಕಷಾಯ ಮಾಡಿ ಕುಡಿಯಬಹುದು..
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶತಾವರಿಯನ್ನು ಆಯುರ್ವೇದದಲ್ಲಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಕೆಮ್ಮು, ಶೀತ, ಜ್ವರ ಮತ್ತು ಇತರ ವೈರಲ್ ಮತ್ತು ಬ್ಯಾಕ್ಟೀರಿಯಾದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ ಈ ಮೂಲಿಕೆ ಸಹಾಯ ಮಾಡುತ್ತದೆ...