ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (OPS) ಜನಪ್ರಿಯಗೊಳಿಸಲು ಸರ್ಕಾರ ಅನೇಕ ಬದಲಾವಣೆಗಳನ್ನುಜಾರಿಗೆ ತಂದಿದೆ.. ಆದರೆ ಈ ಬದಲಾವಣೆಗಳು ಕೇಂದ್ರ ಸರ್ಕಾರಿ ನೌಕರರಿಗೆ ಯಾಕೋ ಇಷ್ಟವಾಗುತ್ತಿಲ್ಲ.
7th Pay Commission : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (OPS) ಜನಪ್ರಿಯಗೊಳಿಸಲು ಸರ್ಕಾರ ಅನೇಕ ಬದಲಾವಣೆಗಳನ್ನುಜಾರಿಗೆ ತಂದಿದೆ.. ಆದರೆ ಈ ಬದಲಾವಣೆಗಳು ಕೇಂದ್ರ ಸರ್ಕಾರಿ ನೌಕರರಿಗೆ ಯಾಕೋ ಇಷ್ಟವಾಗುತ್ತಿಲ್ಲ. 1 ಜನವರಿ 2004 ರ ನಂತರ ಸೇರಿರುವ ಕೇಂದ್ರ ನೌಕರರ (Central Govt Employees) ಒಂದು ಗುಂಪು, ಹಳೆಯ ಪಿಂಚಣಿ ಯೋಜನೆಯ (OPS) ಅನುಷ್ಠಾನಕ್ಕೆ ಒತ್ತಾಯಿಸಿದೆ. ಈ ಉದ್ಯೋಗಿಗಳು ಮಾರ್ಕೆಟ್ ಲಿಂಕ್ಡ್ ನ್ಯಾಷನಲ್ ಪೆನ್ಶನ್ ಸಿಸ್ಟಮ್ ಬದಲಾಗಿ ಹಳೆಯ ಯೋಜನೆಯನ್ನು ಮತ್ತೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಒಪಿಎಸ್ ಯೋಜನೆಗೆ (OPS) ಹೋಲಿಸಿದರೆ ಎನ್ ಪಿಎಸ್ (NPS) ಉತ್ತಮ ದರವನ್ನು ನೀಡುತ್ತದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಕೃತ ಉತ್ತರದಲ್ಲಿ ತಿಳಿಸಲಾಗಿದೆ. ಹೀಗಿರುವಾಗ ಎನ್ಪಿಎಸ್ ಅನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಹೆಚ್ಚುತ್ತಿರುವ ಹಣ, ವಿವೇಕಯುತ ಹೂಡಿಕೆ ನಿಯಮಗಳು ಮತ್ತು ಎನ್ಪಿಎಸ್ಗೆ ಸಂಬಂಧಿಸಿದಂತೆ ಇತ್ತೀಚಿನ ನಿರ್ಧಾರಗಳೊಂದಿಗೆ, ಎನ್ಪಿಎಸ್ ಹಳೆಯ ಪಿಂಚಣಿ ಯೋಜನೆಗೆ ಸಮನಾಗಿರುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಹೋಲಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. ಎರಡೂ ಯೋಜನೆಗಳು ಬೇರೆ ಬೇರೆಯಾಗಿವೆ. ಹಳೆಯ ಪಿಂಚಣಿ ಯೋಜನೆಯನ್ನು (OPS) ಭಾರತ ಸರ್ಕಾರದ ಯೋಜನೆ ಎಂದು ಪರಿಗಣಿಸಲಾಗುತ್ತದೆ. ಎನ್ಪಿಎಸ್ ಕೂಡಾ ಅತ್ಯುತ್ತಮ ಪಿಂಚಣಿ ಯೋಜನೆಯಾಗಿದ್ದು, ಇದರ ಲಾಭ ನಷ್ಟಗಳನ್ನು ಈಗಲೇ ನಿರ್ಧರಿಸಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ಎನ್ ಪಿಎಸ್ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಅಂದರೆ, ಹೂಡಿಕೆಯ ಪ್ರಮಾಣ ಎಷ್ಟು, ಯಾವ ವಯಸ್ಸಿನಿಂದ ಹೂಡಿಕೆ ಮಾಡಲಾಗುತ್ತಿದೆ, ಚಂದಾದಾರಿಕೆಯ ಅವಧಿ ಎಷ್ಟು, ಚಂದಾದಾರರು ಯಾವ ರೀತಿಯ ಹೂಡಿಕೆಯನ್ನು ಆರಿಸಿಕೊಂಡಿದ್ದಾರೆ, ಪಿಂಚಣಿಗಾಗಿ ಒಟ್ಟು ಎಷ್ಟು ಮೊತ್ತವನ್ನು ಇಡಲಾಗಿದೆ, ಹೀಗೆ ಅನೇಕ ಅಂಶಗಳನ್ನು ಅವಲಂಬಿತವಾಗಿರುತ್ತದೆ. ಇಷ್ಟು ಮಾತ್ರವಲ್ಲದೆ, ಇನ್ನೂ ಅನೇಕ ಅಂಶಗಳು ಈ ಪಿಂಚಣಿಯ ಮೇಲೆ ಪರಿಣಾಮ ಬೀರುತ್ತದೆ.
ಎನ್ಪಿಎಸ್ ಚಂದಾದಾರರ ಆತಂಕವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು, ಉನ್ನತ ಸಮಿತಿಯನ್ನೂ ರಚಿಸಿದೆ. ಎನ್ ಪಿಎಸ್ ನಲ್ಲೇನಾದರೂ ನ್ಯೂನತೆಗಳು ಕಂಡು ಬಂದರೆ ಅದನ್ನು ತೆಗೆದುಹಾಕುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. ಸಮಿತಿಯ ಸಲಹೆಗಳನ್ನು ಅನುಸರಿಸಿ, ಎನ್ಪಿಎಸ್ ಸುಧಾರಣೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ತನ್ನ ಆರ್ಥಿಕ ಹೊರೆ ಕಡಿಮೆ ಮಾಡಲು ಹಳೆಯ ಪಿಂಚಣಿ ವ್ಯವಸ್ಥೆಯ ಬದಲಿಗೆ ಸರ್ಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಪರಿಚಯಿಸಿತು. 1 ಜನವರಿ 2004 ರಿಂದ ಜಾರಿಗೆ ಬರುವಂತೆ, ಕೇಂದ್ರ ಸೇವೆಯಲ್ಲಿರುವ ಎಲ್ಲ ಉದ್ಯೋಗಿಗಳಿಗೆ ಎನ್ಪಿಎಸ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ, ಇತರ ರಾಜ್ಯಗಳು ಸಹ ಎನ್ಪಿಎಸ್ ಅಳವಡಿಸಿಕೊಂಡವು.