ಏರಿಕೆಯಾದ ಮೂಲ ವೇತನ, ಎಲ್ಲಾ ಭತ್ಯೆ, ಅರಿಯರ್ಸ್ ಸೇರಿ ಇನ್ನೆರಡು ದಿನಗಳಲ್ಲಿ ಸರ್ಕಾರಿ ನೌಕರರ ಕೈ ಸೇರುವ ಮೊತ್ತ ಇದು !

Salary Hike : ತುಟ್ಟಿಭತ್ಯೆ ಶೇ 50 ಆದ ನಂತರ ಸರ್ಕಾರಿ ನೌಕರರ ಮೂಲ ವೇತನವೇ ಬದಲಾಗಿದೆ. ಅಲ್ಲದೆ ವಿವಿಧ ಭತ್ಯೆಗಳಲ್ಲಿಯೂ ಏರಿಕೆಯಾಗಿದೆ. ಹಾಗಿದ್ದರೆ ಮಾರ್ಚ್‌ನಲ್ಲಿ ಉದ್ಯೋಗಿಗಳ  ವೇತನ ಎಷ್ಟು ಹೆಚ್ಚಾಗುತ್ತದೆ ಎನ್ನುವ ಲೆಕ್ಕಾಚಾರ ಇಲ್ಲಿದೆ. 

7th Pay Commission: ಇನ್ನೆರಡು ದಿನಗಳಲ್ಲಿ ಕೇಂದ್ರ ನೌಕರರ ವೇತನ ಅವರ ಕೈ ಸೇರುತ್ತದೆ. ಮಾರ್ಚ್ ತಿಂಗಳಲ್ಲಿ, ಜನವರಿ ಮತ್ತು ಫೆಬ್ರವರಿಯ ಬಾಕಿ ಡಿಎ ಕೂಡಾ ಖಾತೆ ಸೇರುತ್ತದೆ. ಇನ್ನು ಹೆಚ್ಚಳವಾದ ತುಟ್ಟಿಭತ್ಯೆ ಜೊತೆಗೆ ಏರಿಕೆ ಕಂಡ ಎಚ್‌ಆರ್‌ಎಯೂ ಸೇರಿ ಕೈ ಸೇರುತ್ತದೆ. ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ. 50ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಪಿಂಚಣಿದಾರರ ತುಟ್ಟಿಭತ್ಯೆ ಕೂಡಾ ಶೇ.4ರಿಂದ ಶೇ.50ರಷ್ಟು ಏರಿಕೆಯಾಗಿದೆ. ಹೆಚ್ಚಿದ ತುಟ್ಟಿಭತ್ಯೆ ಜನವರಿ ಒಂದರಿಂದಲೇ ಜಾರಿಗೆ ಬಂದಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ತುಟ್ಟಿಭತ್ಯೆಯು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನದ ಒಂದು ಭಾಗವಾಗಿದೆ. ಹಾಗಾಗಿ ಡಿಎ ಹೆಚ್ಚಾದರೆ ಉದ್ಯೋಗಿಗಳ ಟೇಕ್ ಹೋಮ್ ವೇತನವೂ ಹೆಚ್ಚಾಗುತ್ತದೆ. ಹಾಗಿದ್ದರೆ ಮಾರ್ಚ್‌ನಲ್ಲಿ ಉದ್ಯೋಗಿಗಳ  ವೇತನ ಎಷ್ಟು ಹೆಚ್ಚಾಗುತ್ತದೆ ಎನ್ನುವ ಲೆಕ್ಕಾಚಾರ ಇಲ್ಲಿದೆ.    

2 /5

ಕೇಂದ್ರ ಸರ್ಕಾರಿ ನೌಕರ ತಿಂಗಳಿಗೆ 47,500 ರೂ. ಮೂಲ ವೇತನವನ್ನು ಪಡೆಯುತ್ತಾರೆ ಎಂದಿಟ್ಟುಕೊಳ್ಳೋಣ. ಶೇಕಡಾ 46 ರ ಪ್ರಕಾರ ತುಟ್ಟಿಭತ್ಯೆ 21,022 ರೂ. ಈಗ ಡಿಎ ಶೇ.  50 ರಷ್ಟಾಗಿದ್ದು ತುಟ್ಟಿಭತ್ಯೆ ಕೂಡಾ 22,850 ರೂ.ಗೆ ಏರಿಕೆಯಾಗುತ್ತದೆ. ಅಂದರೆ ಏರಿಕೆ ಕಂಡ ತುಟ್ಟಿಭತ್ಯೆ 1,818 ರೂ.   

3 /5

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ ಸಿಗುತ್ತದೆ. ಇದು ಅವರು ವಾಸಿಸುವ ಸ್ಥಳವನ್ನು ಅವಲಂಬಿಸಿರುತ್ತದೆ. ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ X, Y ಮತ್ತು Z ನಗರಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತದೆ. ಈಗ ಡಿಎ ಶೇ 50 ತಲುಪಿದಾಗ ಮನೆ ಬಾಡಿಗೆ ಭತ್ಯೆಯನ್ನು ಕೂಡಾ ಪರಿಷ್ಕರಿಸಲಾಗಿದೆ.

4 /5

ಮೂಲ ವೇತನವಾಗಿ 45700 ರೂಪಾಯಿ ಪಡೆಯುವ ಕೇಂದ್ರ ಸರ್ಕಾರಿ ನೌಕರ, Y ವರ್ಗದ ನಗರದಲ್ಲಿ ವಾಸಿಸುತ್ತಿದ್ದಾರೆ ಎಂದು ಭಾವಿಸೋಣ. ಇದುವರೆಗೆ ಅವರ ಎಚ್‌ಆರ್‌ಎ 8226 ರೂ.ಆಗಿದ್ದು, ಡಿಎ 50 ಪ್ರತಿಶತ ತಲುಪಿದಾಗ, ಆ ನೌಕರ ಪಡೆಯುವ HRA ಶೇಕಡಾ 20 ಕ್ಕೆ ಹೆಚ್ಚಾಗುತ್ತದೆ. ಅಂದರೆ ಅವರ HRAಯನ್ನು 9,140 ರೂಪಾಯಿಗಳಿಗೆ ಪರಿಷ್ಕರಿಸಲಾಗುವುದು. ಅಂದರೆ ತಿಂಗಳಿಗೆ 914 ರೂಪಾಯಿ ಲಾಭ ಸಿಗಲಿದೆ.

5 /5

ಈ ಮೂಲಕ ಇನ್ನೆರಡು ದಿನಗಳಲ್ಲಿ ಅಂದರೆ ಮಾರ್ಚ್ 30 ರಂದು ಸರ್ಕಾರಿ ನೌಕರರ ಕೈ ಸೇರು ವ ಮೂಲ ವೇತನದಲ್ಲಿಯೇ ಹೆಚ್ಚಳ ಕಂಡು ಬರಲಿದೆ. ಅಲ್ಲದೆ ಎಲ್ಲಾ ಭತ್ಯೆಗಳಲ್ಲಿಯೂ ಏರಿಕೆಯಾಲಿದೆ. ಒಂದು ಅರ್ಥದಲ್ಲಿ ಈ ಬಾರಿ ಬಂಪರ್ ಮೊತ್ತವೇ ಸರ್ಕಾರಿ ನೌಕರರ ಖಾತೆ ಸೇರಲಿದೆ.