Chanakya Niti: ಇಂತಹ ಸ್ವಭಾವದ ಸ್ತ್ರೀ ಜೊತೆಗೆ ವಿವಾಹವಾದರೆ ಜೀವನವೇ ಹಾಳಾಗುತ್ತದೆ... ಎಚ್ಚರ!

Chanakya Niti For Wedding: ಆಚಾರ್ಯ ಚಾಣಕ್ಯರು ರೋವ ಶ್ರೇಷ್ಠ ಶಿಕ್ಷಕ, ವಿದ್ವಾಂಸ, ರಾಜತಾಂತ್ರಿಕ, ಅರ್ಥಶಾಸ್ತ್ರಜ್ಞ ಮತ್ತು ತಂತ್ರಜ್ಞರಾಗಿದ್ದರು. ಯಾವುದೇ ವ್ಯಕ್ತಿ ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸಿದರೆ, ಅವನು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾನೆ.

Chanakya Niti For Wedding: ಆಚಾರ್ಯ ಚಾಣಕ್ಯರು ರೋವ ಶ್ರೇಷ್ಠ ಶಿಕ್ಷಕ, ವಿದ್ವಾಂಸ, ರಾಜತಾಂತ್ರಿಕ, ಅರ್ಥಶಾಸ್ತ್ರಜ್ಞ ಮತ್ತು ತಂತ್ರಜ್ಞರಾಗಿದ್ದರು. ಯಾವುದೇ ವ್ಯಕ್ತಿ ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸಿದರೆ, ಅವನು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾನೆ. ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಮಾನವ ಜೀವನದ ಎಲ್ಲಾ ಅಂಶಗಳನ್ನು ಉಲ್ಲೇಖಿಸಿದ್ದಾರೆ. ತಂದೆ, ಮಗ, ಮಗಳು, ಹೆಂಡತಿ ಮತ್ತು ಸ್ನೇಹಿತ ಇತ್ಯಾದಿಗಳು ಹೇಗಿರಬೇಕು ಎಂಬುದನ್ನೂ ಸಹ ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಮತ್ತು ಅದು ಅವನ ಇಡೀ ಜೀವನವನ್ನು ಹೇಗೆ ಹಾಳುಮಾಡುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯರು  ಎಂತಹ ಮಹಿಳೆಯರನ್ನು ವಿವಾಹ ಮಾಡಿಕೊಳ್ಳಬಾರದು ಮತ್ತು ಎಂತಹ ಮಹಿಳೆ ವಿವಾಹಕ್ಕೆ ಯೋಗ್ಯ ಎಂದಿದ್ದಾರೆ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Narak Chaturdashi 2022: ನರಕ ಚತುರ್ದಶಿಯ ದಿನ ಈ ಒಂದು ಕೆಲಸ ಮಾಡಿ ನರಕ ಯಾತನೆಯಿಂದ ಮುಕ್ತಿ ಪಡೆಯಿರಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಆಚಾರ್ಯ ಚಾಣಕ್ಯರು ತನ್ನ ಚಾಣಕ್ಯ ನೀತಿಯಲ್ಲಿ ಸುಸಂಸ್ಕೃತ ಮಹಿಳೆಯನ್ನು ಮಾತ್ರ ಮದುವೆಯಾಗಬೇಕು ಎಂದು ಹೇಳಿದ್ದಾರೆ. ಮಹಿಳೆ ಸಂಸ್ಕಾರಹೀನಳಾಗಿದ್ದರೆ, ಅವಳು ಎಲ್ಲವನ್ನೂ ಹಾಳುಮಾಡುತ್ತಾಳೆ. ಸಂಸ್ಕೃತಿಯಿಲ್ಲದ ಮಹಿಳೆ ತನ್ನ ಗಂಡ ಮತ್ತು ಅವನ ಕುಟುಂಬದ ಜೀವನವನ್ನು ಹಾಳುಮಾಡುತ್ತಾಳೆ. ಸಂಸ್ಕಾರವಿಲ್ಲದ ಹೆಣ್ಣನ್ನು ಮದುವೆಯಾಗಬಾರದು ಎಂದು ಅವರು ಹೇಳಿದ್ದಾರೆ.  

2 /4

ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಸುಸಂಸ್ಕೃತ ಮಹಿಳೆಯನ್ನು ಮದುವೆಯಾದರೆ, ಅವಳು ತನ್ನ ಗಂಡನ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತಾಳೆ. ಸುಸಂಸ್ಕೃತ ಮಹಿಳೆ ತನ್ನ ಗಂಡನ ಜೊತೆಗೆ ಅವನ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾಳೆ. ಆಕೆ ಅನಾವಶ್ಯಕವಾಗಿ ವಿವಾದ ಸೃಷ್ಟಿಸುವುದಿಲ್ಲ ಮತ್ತು ತನ್ನ ಪತಿ ಮತ್ತು ಅವನ ಕುಟುಂಬ ಸದಸ್ಯರೊಂದಿಗೆ ಕಹಿ ಮಾತುಗಳನ್ನು ಆಡುವುದಿಲ್ಲ ಎಂದಿದ್ದಾರೆ.  

3 /4

ಹೆಣ್ಣಿನ ಸೌಂದರ್ಯ, ಮೈಬಣ್ಣ ಎಲ್ಲವೂ ಅಲ್ಲ ಎಂದು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳುತ್ತಾರೆ.ಒಬ್ಬ ಪುರುಷನು ಹೆಣ್ಣನ್ನು ಅವಳ ಸೌಂದರ್ಯವನ್ನು ನೋಡಿಯೇ ಮದುವೆಯಾದರೆ, ಅವನಷ್ಟು ಮೂರ್ಖ ಈ ಪ್ರಪಂಚದಲ್ಲಿ ಮತ್ತೊಬ್ಬನಿಲ್ಲ. ಪುರುಷನು ಮಹಿಳೆಯ ಗುಣಗಳನ್ನು ಗಮನದಲ್ಲಿಟ್ಟುಕೊಂಡು ಅವಳನ್ನು ಮದುವೆಯಾಗಬೇಕು ಎಂದು ಚಾಣಕ್ಯರು ಹೇಳಿದ್ದಾರೆ.  

4 /4

ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯ ಸೌಂದರ್ಯದ ಬದಲು, ಪುರುಷನು ಅವಳ ಸ್ವಭಾವ, ಸಂಸ್ಕಾರ, ಗುಣಗಳು, ಗುಣ ಮತ್ತು ದೋಷಗಳನ್ನು ತಿಳಿದ ನಂತರ ಮದುವೆಯಾಗಬೇಕು ಎಂದಿದ್ದಾರೆ. ಆಚಾರ್ಯ ಚಾಣಕ್ಯರು ಹೇಳುವಂತೆ ಮಹಿಳೆಯು ನೋಟದಲ್ಲಿ ಸುಂದರವಾಗಿಲ್ಲದಿದ್ದರೂ, ಆಕೆಯ ಸಂಸ್ಕಾರವು ಉತ್ತಮವಾಗಿದ್ದರೆ ಆಕೆಯನ್ನು ಮದುವೆಯಾಗಬೇಕು. ಅಂತಹ ಮಹಿಳೆ ಪುರುಷನ ಉತ್ತಮ ಭವಿಷ್ಯವನ್ನು ಬರೆಯುತ್ತಾಳೆ ಎಂದು ಚಾಣಕ್ಯರು ಹೇಳಿದ್ದಾರೆ.