ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಇನ್ನಿಲ್ಲ ಪಿಂಚಣಿ, ಗ್ರಾಚ್ಯುಟಿ!ಅಧಿಸೂಚನೆ ಹೊರಡಿಸಿದ ಸರ್ಕಾರ

ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ನಿಯಮಗಳು 2021 ರ ಅಡಿಯಲ್ಲಿ ಸರ್ಕಾರವು ಇತ್ತೀಚೆಗೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತಮ್ಮ ರಾಜ್ಯ ಸರ್ಕಾರಿ ನೌಕರರಿಗೂ ಈ ಆದೇಶವನ್ನು ಜಾರಿಗೊಳಿಸಬಹುದು ಎಂದು ಹೇಳಲಾಗಿದೆ.  

Central Government pensioners : ಪಿಂಚಣಿ ಮತ್ತು ಗ್ರಾಚ್ಯುಟಿಯು ನೌಕರರಿಗೆ ಅವರ ವೇತನದಷ್ಟೇ ಮುಖ್ಯವಾಗಿದೆ. ನಿವೃತ್ಯಾ ನಂತರದ ಆಧಾರ ಈ ಮೊತ್ತ. ಆದರೆ, ಇತ್ತೀಚೆಗಷ್ಟೇ ಸರಕಾರ ಹೊರಡಿಸಿರುವ ಆದೇಶ ಸರ್ಕಾರಿ ನೌಕರರ ನಿದ್ದೆಗೆಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಉದ್ಯೋಗಿಗಳಿಗೆ ವೇತನ ಎಷ್ಟು ಮುಖ್ಯವೋ,  ಪಿಂಚಣಿ ಮತ್ತು ಗ್ರಾಚ್ಯುಟಿ ಕೂಡಾ ಅಷ್ಟೇ ಮುಖ್ಯ. ಇವುಗಳನ್ನು ನಿವೃತ್ತಿಯ ಜೀವನದ ಆಧಾರ ಎಂದೇ ಪರಿಗಣಿಸಲಾಗುತ್ತದೆ.   

2 /7

ಆದರೆ, ಇತ್ತೀಚೆಗಷ್ಟೇ ಸರಕಾರ ಹೊರಡಿಸಿರುವ ಆದೇಶ ನೌಕರರಿಗೆ ಹೊಸ ಆತಂಕ ಮೂಡಿಸಿದೆ. ಕೆಲವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗಂತೂ ಇದು ಶಾಕ್ ನೀಡಿದೆ. 

3 /7

  ಕೇಂದ್ರ ಸರ್ಕಾರಿ ನೌಕರರು ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅವರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ಸಿಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಷ್ಟೇ ಅಲ್ಲ, ನೌಕರರು ಕರ್ತವ್ಯದಲ್ಲಿದ್ದಾಗ ಗಂಭೀರ ಅಪರಾಧ ಎಸಗಿರುವುದು ಕಂಡುಬಂದರೆ ಗ್ರಾಚ್ಯುಟಿ ಮತ್ತು ಪಿಂಚಣಿ ಅವರ ಕೈ ತಪ್ಪಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

4 /7

ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ನಿಯಮಗಳು 2021 ರ ಅಡಿಯಲ್ಲಿ ಸರ್ಕಾರವು ಇತ್ತೀಚೆಗೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತಮ್ಮ ರಾಜ್ಯ ಸರ್ಕಾರಿ ನೌಕರರಿಗೂ ಈ ಆದೇಶವನ್ನು ಜಾರಿಗೊಳಿಸಬಹುದು ಎಂದು ಹೇಳಲಾಗಿದೆ.  

5 /7

ಗ್ರಾಚ್ಯುಟಿ ಮತ್ತು ಪಿಂಚಣಿ ತಡೆಹಿಡಿಯುವ ಹಕ್ಕನ್ನು ಸಂಬಂಧಪಟ್ಟ ನೌಕರನ ನೇಮಕಾತಿ ಪ್ರಾಧಿಕಾರದಲ್ಲಿ ಒಳಗೊಂಡಿರುವ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೆಲಸದ ಸಂದರ್ಭದಲ್ಲಿ, ಇಲಾಖಾ ಅಥವಾ ನ್ಯಾಯಾಂಗ ವಿಚಾರಣೆಯಲ್ಲಿ ನೌಕರನು ತಪ್ಪಿತಸ್ಥನೆಂದು ಕಂಡುಬಂದರೆ, ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಬೇಕು.

6 /7

ನಿವೃತ್ತಿಯ ನಂತರ, ಪಿಂಚಣಿ ಮತ್ತು ಗ್ರಾಚ್ಯುಟಿ ಪಡೆದ ನಂತರ, ನೌಕರನು ತನ್ನ ಸೇವಾ ಅವಧಿಯಲ್ಲಿ ಯಾವುದೇ ತಪ್ಪು ಮಾಡಿರುವುದು ಕಂಡುಬಂದರೆ, ಅವರ ಪಿಂಚಣಿ ಅಥವಾ ಗ್ರಾಚ್ಯುಟಿಯ ಪೂರ್ಣ ಅಥವಾ ಭಾಗಶಃ ಮೊತ್ತವನ್ನು ಹಿಂಪಡೆಯಬಹುದು ಎಂದು ಕೂಡಾ ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.

7 /7

ಸರ್ಕಾರ ನೀಡಿರುವ ಈ ಎಚ್ಚರಿಕೆಯನ್ನು ನೌಕರರು ಅಥವಾ ಪಿಂಚಣಿದಾರರು ನಿರ್ಲಕ್ಷಿಸಿದರೆ, ದೊಡ್ಡ ಮಟ್ಟದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿ ಈ ನಿಯಮಗಳನ್ನು ನಿರ್ಲಕ್ಷಿಸಿದರೆ ಅಥವಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ, ಪಿಂಚಣಿ ಮತ್ತು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುವುದಿಲ್ಲ.