ಆರೋಗ್ಯ ಸಲಹೆಗಳು: ಸಾಮಾನ್ಯವಾಗಿ ಅನಾರೋಗ್ಯ ಸಮಸ್ಯೆ ಇದ್ದಾಗ ವೈದ್ಯರು ಬಿಸಿ ನೀರು ಕುಡಿಯುವಂತೆ ಸಲಹೆ ನೀಡುತ್ತಾರೆ. ಆದರೆ, ಕೆಲವರಿಗೆ ಸದಾ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ...
ಅತಿಯಾದ ಬಿಸಿ ನೀರಿನ ಅಡ್ಡಪರಿಣಾಮಗಳು: ಶೀತ, ಕೆಮ್ಮು, ನೆಗಡಿ, ಜ್ವರ ಈ ರೀತಿ ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳಿದ್ದಾಗ ಜನರು ಬಿಸಿ ನೀರು ಕುಡಿಯುತ್ತಾರೆ. ಇನ್ನೂ ಕೆಲವರು ತೂಕ ನಷ್ಟ ಮತ್ತು ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಬಿಸಿನೀರನ್ನು ಕುಡಿಯುತ್ತಾರೆ. ವಾಸ್ತವವಾಗಿ, ಅನಾರೋಗ್ಯ ಸಮಸ್ಯೆ ಇದ್ದಾಗ ವೈದ್ಯರು ಬಿಸಿ ನೀರು ಕುಡಿಯುವಂತೆ ಸಲಹೆ ನೀಡುತ್ತಾರೆ. ಬಿಸಿ ನೀರಿನ ಸೇವನೆಯಿಂದ ಕೆಲವು ಪ್ರಯೋಜನಗಳೂ ಇವೆ. ಆದರೆ, ಯಾವುದೇ ಆದರೂ ಅತಿಯಾದರೆ ಹಾನಿಕಾರಕ. ಅತಿಯಾದ ಬಿಸಿ ನೀರಿನ ಸೇವನೆಯು ಇದಕ್ಕೆ ಹೊರತಲ್ಲ. ನಿಮಗೂ ಪದೇ ಪದೇ ಬಿಸಿ ನೀರು ಕುಡಿಯುವ ಅಭ್ಯಾಸವಿದ್ದರೆ ಅದರ ಅನಾನುಕೂಲಗಳ ಬಗ್ಗೆಯೂ ತಿಳಿದಿರುವುದು ಒಳ್ಳೆಯದು. ಅತಿಯಾದ ಬಿಸಿ ನೀರು ಸೇವನೆ ನಿಮ್ಮ ಈ ಅಂಗಗಳಿಗೆ ಹಾನಿಕಾರಕ ಎಂದು ಸಾಬೀತು ಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಾಯಾರಿಕೆಯಾದಾಗ ಹೆಚ್ಚು ಬಿಸಿ ನೀರು ಕುಡಿದರೆ ಅದು ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಅತಿಯಾದ ಬಿಸಿನೀರು ಮೆದುಳಿನ ಜೀವಕೋಶಗಳಲ್ಲಿ ಊತವನ್ನು ಉಂಟುಮಾಡಬಹುದು. ಇದು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಬಿಸಿನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗುತ್ತದೆ. ಮೂತ್ರಪಿಂಡಗಳು ವಿಶೇಷ ಕ್ಯಾಪಿಲ್ಲರಿ ವ್ಯವಸ್ಥೆಯನ್ನು ಹೊಂದಿವೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಬಿಸಿನೀರಿನಿಂದಾಗಿ ಕಿಡ್ನಿ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿಯೇ, ಅತಿಯಾಗಿ ಬಿಸಿ ನೀರು ಸೇವಿಸುವವರಿಗೆ ಅದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು.
ತುಂಬಾ ಬಿಸಿ ನೀರು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕರುಳಿನ ಮೇಲೂ ಪರಿಣಾಮ ಬೀರುತ್ತದೆ. ಕರುಳಿನ ಸಮಸ್ಯೆ ಇರುವವರು ಬಿಸಿನೀರು ಕುಡಿಯುವುದನ್ನು ತಪ್ಪಿಸಿ. ಇದಲ್ಲದೆ ಬಿಸಿನೀರು ಬಾಯಿಯಲ್ಲಿ ಹುಣ್ಣುಗಳನ್ನು ಉಂಟುಮಾಡಬಹುದು.
ಪದೇ ಪದೇ ಬಿಸಿನೀರು ಕುಡಿಯುವುದರಿಂದ ಅನೇಕ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಇದು ಮೆದುಳು ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಉಂಟಾಗಬಹುದು.
ಹೆಚ್ಚು ಬಿಸಿ ನೀರು ಕುಡಿಯುವುದರಿಂದ ನಮ್ಮ ದೇಹದ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಬಿಸಿ ನೀರು ಕುಡಿದರೆ ಹೊಟ್ಟೆ ಉರಿ ಸಮಸ್ಯೆ ಕಾಡಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.