ಇತ್ತೀಚಿನ ದಿನಗಳಲ್ಲಿ ವಜ್ರದ ಉಂಗುರಗಳು, ನೆಕ್ಲೇಸ್ಗಳು, ಬಳೆಗಳು, ಕಿವಿಯೋಲೆಗಳನ್ನು ಧರಿಸುವುದು ಟ್ರೆಂಡ್ ಆಗುತ್ತಿದೆ. ಕೆಲವರು ಫ್ಯಾಷನ್ ಗಾಗಿ ವಜ್ರ ಧರಿಸಿದರೆ, ಇನ್ನೂ ಕೆಲವರು ಸ್ಥಾನಮಾನ, ಶ್ರೀಮಂತಿಕೆ ತೋರಿಕೆಗಾಗಿ ವಜ್ರವನ್ನು ಧರಿಸುತ್ತಾರೆ, ಆದರೆ ಜ್ಯೋತಿಷ್ಯ ಮತ್ತು ರತ್ನಶಾಸ್ತ್ರದ ಪ್ರಕಾರ, ವಜ್ರವು ಎಲ್ಲರಿಗೂ ಸರಿಹೊಂದುವುದಿಲ್ಲ. ರತ್ನ ಶಾಸ್ತ್ರದಲ್ಲಿ ವಜ್ರವನ್ನು ಪ್ರಮುಖ ರತ್ನವೆಂದು ಪರಿಗಣಿಸಲಾಗುತ್ತದೆ ಮತ್ತು ಜಾತಕದಲ್ಲಿ ಯಾರ ಗ್ರಹಗಳು ವಜ್ರವನ್ನು ಧರಿಸಲು ಅನುಕೂಲಕರವಾಗಿವೆಯೋ ಅವರು ಮಾತ್ರ ಧರಿಸಬೇಕು ಎಂದು ಹೇಳಲಾಗುತ್ತದೆ. ಆದ್ದರಿಂದ, ತಜ್ಞರ ಸಲಹೆ ಪಡೆದ ನಂತರವೇ ವಜ್ರವನ್ನು ಧರಿಸಬೇಕು, ಇಲ್ಲದಿದ್ದರೆ ವಜ್ರವನ್ನು ಧರಿಸುವುದು ನಿಮಗೆ ತೊಡುಕಾಗಬಹುದು. ಹಾಗಾಗಿ, ಜ್ಯೋತಿಷಿಗಳನ್ನು ಸಂಪರ್ಕಿಸದೆ ಯಾವುದೇ ಕಾರಣಕ್ಕೂ ವಜ್ರ ಧಾರಣೆ ಮಾಡದಿರುವುದು ಒಳ್ಳೆಯದು. ಯಾವ ರಾಶಿಯವರಿಗೆ ವಜ್ರಧಾರಣೆ ಸೂಕ್ತವಲ್ಲ ಎಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮೇಷ ರಾಶಿ: ವಜ್ರವನ್ನು ಧರಿಸುವುದರಿಂದ ಮೇಷ ರಾಶಿಯವರಿಗೆ ಜೀವನದಲ್ಲಿ ಅನೇಕ ತೊಂದರೆಗಳು ಉಂಟಾಗಬಹುದು. ಈ ಜನರು ವಜ್ರವನ್ನು ಧರಿಸಲು ಬಯಸಿದರೆ, ಅವರು ಮೊದಲು ತಜ್ಞರನ್ನು ಸಂಪರ್ಕಿಸಬೇಕು.
ಕರ್ಕಾಟಕ ರಾಶಿಯ ಜನರು ವಜ್ರವನ್ನು ಧರಿಸುವುದು ಶುಭವಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ಅವರು ತಜ್ಞರನ್ನು ಸಂಪರ್ಕಿಸಿದ ನಂತರ ವಜ್ರವನ್ನು ಧರಿಸಬಹುದು.
ಸಿಂಹ ರಾಶಿ: ವಜ್ರವು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಶುಕ್ರವನ್ನು ಸಿಂಹ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ರಾಶಿಯ ಜನರು ವಜ್ರವನ್ನು ಧರಿಸಬಾರದು. ಇಲ್ಲದಿದ್ದರೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಮತ್ತು ವಜ್ರಕ್ಕೆ ಸಂಬಂಧಿಸಿದ ಗ್ರಹ ಶುಕ್ರ ಪರಸ್ಪರ ಶತ್ರುಗಲಾಗಿದ್ದು, ವಜ್ರವು ಈ ಜನರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ವಜ್ರವನ್ನು ಧರಿಸುವುದು ಅವರ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಧನು ರಾಶಿ: ವಜ್ರವನ್ನು ಧರಿಸುವುದು ಧನು ರಾಶಿಯವರಿಗೆ ಕೂಡ ಅಶುಭ. ವಜ್ರವನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳು ಉಂಟಾಗುತ್ತವೆ.
ಮೀನ ರಾಶಿ: ಮೀನ ರಾಶಿಯವರಿಗೆ ಶುಕ್ರನೂ ಒಳ್ಳೆಯ ಫಲ ನೀಡುವುದಿಲ್ಲ. ಆದ್ದರಿಂದ, ಈ ಜನರು ವಜ್ರ ಧರಿಸುವುದರಿಂದ ತಾವೇ ತೊಂದರೆಗಳನ್ನು ಆಹ್ವಾನಿಸಿದಂತಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.