ಪ್ರಯಾಣದ ವೇಳೆ ವಾಮಿಟಿಂಗ್ ಸಮಸ್ಯೆಯೇ? ನಿಮ್ಮ ಟ್ರಾವೆಲ್ ಬ್ಯಾಗ್‌ನಲ್ಲಿರಲಿ ಈ ವಸ್ತುಗಳು

 ಆರೋಗ್ಯವಾಗಿದ್ದರೂ ಸಹ ಪ್ರಯಾಣದ ವೇಳೆ ಕೆಲವರಿಗೆ ವಾಮಿಟಿಂಗ್ ಸಮಸ್ಯೆ ಹೆಚ್ಚು ಕಾಡುತ್ತದೆ. ಇನ್ನೂ ಕೆಲವರಂತೂ ಈ ವಾಂತಿ ಸಮಸ್ಯೆಗೆ ಹೆದರಿ ಪ್ರಯಾಣ ಮಾಡುವುದನ್ನೇ ತಪ್ಪಿಸುತ್ತಾರೆ.

ಬೆಂಗಳೂರು: ಪ್ರಯಾಣದ ವೇಳೆ ಕೆಲವರಿಗೆ ತಲೆತಿರುಗುವಿಕೆ, ವಾಂತಿ ಅಥವಾ ವಾಕರಿಕೆ ಸಮಸ್ಯೆ ಇರುತ್ತದೆ. ಆರೋಗ್ಯವಾಗಿದ್ದರೂ ಸಹ ಪ್ರಯಾಣದ ವೇಳೆ ಕೆಲವರಿಗೆ ವಾಮಿಟಿಂಗ್ ಸಮಸ್ಯೆ ಹೆಚ್ಚು ಕಾಡುತ್ತದೆ. ಇನ್ನೂ ಕೆಲವರಂತೂ ಈ ವಾಂತಿ ಸಮಸ್ಯೆಗೆ ಹೆದರಿ ಪ್ರಯಾಣ ಮಾಡುವುದನ್ನೇ ತಪ್ಪಿಸುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು  ನಿಮ್ಮ ಟ್ರಾವೆಲ್ ಬ್ಯಾಗ್‌ನಲ್ಲಿ ಕೆಲವು ಚಮತ್ಕಾರಿ ವಸ್ತುಗಳನ್ನು ಕೊಂಡೊಯ್ಯುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನಿಮಗೂ ಟ್ರಾವೆಲ್ ಮಾಡುವಾಗ ವಾಂತಿ ಬರುತ್ತಾ? ಇದನ್ನು ತಪ್ಪಿಸಲು ನೀವು ಎಲ್ಲಾದರೂ ಪ್ರಯಾಣ ಮಾಡುವಾಗ ಕೆಲವು ವಸ್ತುಗಳನ್ನು ಮರೆಯದೇ ನಿಮ್ಮ ಟ್ರಾವೆಲ್ ಬ್ಯಾಗ್‌ನಲ್ಲಿ ಕೊಂಡೊಯ್ಯಿರಿ. ಇದರಿಂದ ನೀವು ವಾಕರಿಕೆ, ವಾಂತಿ ಸಮಸ್ಯೆಗೆ ಗುಡ್ ಬೈ ಹೇಳಿ.

2 /5

ಪುದೀನ ಎಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಪ್ರಯಾಣದ ವೇಳೆ ವಾಕರಿಕೆ-ವಾಂತಿ ಬರುವಂತೆ ಭಾಸವಾಗುತ್ತಿದ್ದರೆ ಇದರ ಒಂದೆರಡು ದಳವನ್ನು ತಿನ್ನಿರಿ. ಇದು ನಿಮ್ಮ ವಾಂತಿ-ವಾಕರಿಕೆಯಂತಹ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡಬಲ್ಲದು.

3 /5

ಆರೋಗ್ಯ ವರ್ಧಕವಗಿರುವ ನಿಂಬೆಹಣ್ಣು ಸಹ ವಾಕರಿಕೆ, ವಾಂತಿ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು. ಇದಕ್ಕಾಗಿ ನೀವು ಪ್ರಯಾಣ ಮಾಡುವಾಗ ನಿಂಬೆ ಹಣ್ಣಿನ ಶರಬತ್ತನ್ನು ಸೇವಿಸಿ.

4 /5

ಶುಂಠಿಯೂ ಸಹ  ವಾಂತಿ ಮತ್ತು ವಾಕರಿಕೆ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀವು ಪ್ರಯಾಣದ ಸಮಯದಲ್ಲಿ ಶುಂಠಿ ಕ್ಯಾಂಡಿ, ಶುಂಠಿ ಚಹಾ ಸೇವಿಸುವುದು ತುಂಬಾ ಪ್ರಯೋಜನಕಾರಿ ಆಗಿದೆ.

5 /5

ಏಲಕ್ಕಿ ಬಾಳೆಯನ್ನು ಆರೋಗ್ಯದ ಗಣಿ ಎಂದು ಪರಿಗಣಿಸಲಾಗುತ್ತದೆ. ಪ್ರಯಾಣದ ಸಮಯದಲ್ಲಿ ಏಲಕ್ಕಿ ಬಾಳೆಹಣ್ಣನ್ನು ತಿನ್ನುವುದರಿಂದಲೂ ಸಹ ವಾಕರಿ,ಕೆ, ವಾಂತಿ ಸಮಸ್ಯೆಗೆ ಪರಿಹಾರ ಪಡೆಯಬಹುದು. ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.