Electric Vehicle ಕ್ಷೇತ್ರದಲ್ಲಿ ಕೈತುಂಬಾ ಸಂಪಾದನೆಗೆ ಅವಕಾಶ, ಇಲ್ಲಿದೆ ಹಣಗಳಿಕೆಯ ಫಂಡಾ

Electric Vehicle - ನೀವೂ ಕೂಡ ಎಲೆಕ್ಟ್ರಿಕ್ ಕಾರ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸಬಹುದು. ಎಲೆಕ್ಟ್ರಿಕ್ ಕಾರುಗಳ ವರ್ಕ್ ಶಾಪ್ ತೆರೆಯಬಹುದು ಅಥವಾ ಎಲೆಕ್ಟ್ರಿಕ್ ವಾಹನಗಳ ಪಾರ್ಟ್ಸ್ ಗಳಿಗೆ ಸಂಬಂಧಿಸಿದ ಬಿಸಿನೆಸ್ ಆರಂಭಿಸಬಹುದು.

ನವದೆಹಲಿ: Electric Vehicle - ಆಟೋಮೊಬೈಲ್ ಬಳಿಕ ಇದೀಗ ನಾವು ಎಲಕ್ಟ್ರಿಕ್ ವಾಹನಗಳ ಪ್ರಪಂಚದಲ್ಲಿ ಹೆಜ್ಜೆಯನ್ನಿಡುತ್ತಿದ್ದೇವೆ. ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯಸರ್ಕಾರಗಳು ಕೂಡ ತಮ್ಮ ತಮ್ಮ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡುವ ನೀಟ್ಟಿನಲ್ಲಿ ಹೊಸ ಹೊಸ ನೀತಿಗಳನ್ನು ಜಾರಿಗೆ ತರುತ್ತಲೇ ಇವೆ. ಇವೆಲ್ಲವುಗಳ ನಡುವೆ ನಮ್ಮ ವೇಗದ ಪ್ರಪಂಚ ಎಲೆಕ್ಟ್ರಿಕ್ ಆಗಲು ಹೊರಟಿದ್ದರೆ, ದೇಶದ ಯುವಕರಿಗಾಗಿಯೂ ಕೂಡ ಕೈತುಂಬಾ ಸಂಪಾದನೆ ಮಾಡುವ ಅವಕಾಶ ಕೂಡ ಹೆಚ್ಚಾಗುತ್ತಿದೆ. ನೀವೂ ಕೂಡ ಈ ಬದಲಾವಣೆಯ ಲಾಭ ಪಡೆದುಕೊಂಡು ಇಲೆಕ್ಟ್ರಿಕ್ ವಾಹನಗಳ ಹೊಸ ಪ್ರಪಂಚದಲ್ಲಿ ಕೈತುಂಬಾ ಸಂಪಾದನೆ ಮಾಡಲು ಸಿದ್ಧರಾಗಿ.

 

ಇದನ್ನೂ ಓದಿ- Nitin Gadkari: ಸರ್ಕಾರಿ ನೌಕರರಿಗೆ 'ಎಲೆಕ್ಟ್ರಿಕ್ ವಾಹನಗಳ ಬಳಕೆ ಕಡ್ಡಾಯ'..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /7

1. ಹೆಚ್ಚಾದ ಬೇಡಿಕೆ - ದೇಶಾದ್ಯಂತ ಇಲೆಕ್ಟ್ರಿಕ್ ಕಾರುಗಳ ಮಾರಾಟ ಹೆಚ್ಚಾಗುತ್ತಿದ್ದಂತೆ, ಅವುಗಳಿಗಾಗಿ ತರಬೇತಿ ಪಡೆದ ಮೆಕ್ಯಾನಿಕ್ ಗಳ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಭಾರತದಲ್ಲಿ ಪ್ರತಿ ಸಣ್ಣ-ಪುಟ್ಟ ಪಟ್ಟಣಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ವಾಹನಗಳಿಗೆ ಮೆಕ್ಯಾನಿಕ್ ಗಳು ಸುಲಭವಾಗಿ ದೊರಕುತ್ತಾರೆ. ಆದರೆ, ಎಲೆಕ್ಟ್ರಿಕ್ ವಾಹನಗಳ ಮೆಕ್ಯಾನಿಕ್ ಗಳ ಸಂಖ್ಯೆ ಇದುವರೆಗೂ ಶೂನ್ಯಕ್ಕಿಂತ ಸ್ವಲ್ಪ ಮೇಲಿದೆ. ಪರಿಸ್ಥಿತಿ ಹೇಗಿದೆ ಎಂದರೆ ಹಲವು ದೊಡ್ಡ ದೊಡ್ಡ ಕಂಪನಿಗಳಿಗೂ ಕೂಡ ಎಲೆಕ್ಟ್ರಿಕ್ ಕಾರುಗಳ ಮೆಕ್ಯಾನಿಕ್ ಗಳು ಸಿಗುತ್ತಿಲ್ಲ.

2 /7

2. ಈ ಸುವರ್ಣಾವಕಾಶ ತಪ್ಪಿಸಿಕೊಳ್ಳಬೇಡಿ - ನೀವು ಈ ಅವಕಾಶದ ಲಾಭವನ್ನು ಪಡೆದುಕೊಳ್ಳಬಹುದು. ನೀವೂ ಕೂಡ ಎಲೆಕ್ಟ್ರಿಕ್ ವಾಹನಗಳ ಮೆಕ್ಯಾನಿಕ್ ಆಗಿ ಉತ್ತಮ ಗಳಿಕೆಯ ಶುಭಾರಂಭ ಮಾಡಬಹುದು. ಎಲೆಕ್ಟ್ರಿಕ್ ಕಾರುಗಳ ಮೆಕ್ಯಾನಿಕ್ ಆಗಿ ನೀವೂ ಕೂಡ ಎಲೆಕ್ಟ್ರಿಕ್ ಕಾರುಗಳ ವರ್ಕ್ ಶಾಪ್ ತೆರೆಯಬಹುದು ಅಥವಾ ಎಲೆಕ್ಟ್ರಿಕ್ ವಾಹನಗಳ ಪಾರ್ಟ್ಸ್ ಗಳಿಗೆ ಸಂಬಂಧಿಸಿದ ಬಿಸಿನೆಸ್ ಆರಂಭಿಸಬಹುದು.

3 /7

3. ಆನ್ಲೈನ್ ತರಬೇತಿ - ಈಗ ಸಮಸ್ಯೆ ಎಂದರೆ ಎಲೆಕ್ಟ್ರಿಕ್ ಕಾರು ಅಥವಾ ವಾಹನಗಳ ದುರುಸ್ತಿ ಹಾಗೂ ಅದಕ್ಕೆ ಸಂಬಂಧಿಸಿದ ಬಿಸಿನೆಸ್ ಆರಂಭಿಸುವ ಮಾಹಿತಿ ಎಲ್ಲಿಂದ ಪಡೆದುಕೊಳ್ಳಬೇಕು. DIYguru ಹೆಸರಿನ ಸ್ಟಾರ್ಟ್ ಅಪ್ ಕಂಪನಿಯೊಂದು ಇದಕ್ಕಾಗಿ ಆನ್ಲೈನ್ ತರಬೇತಿ ಆರಂಭಿಸಿದೆ.

4 /7

4. ಆನ್ಲೈನ್ ನಲ್ಲಿ ತರಬೇತಿ - ಮನೆಯಲ್ಲಿಯೇ ಕುಳಿತು ಆನ್ಲೈನ್ ಮುಖಾಂತರ ನೀವು ಈ ಕೋರ್ಸ್ ಮಾಡಬಹುದು. ಈ ಕೋರ್ಸ್ ನಲ್ಲಿ ನಿಮಗೆ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿ ನೀಡಲಾಗುತ್ತದೆ. ಕೋರ್ಸ್ ಅವಧಿಯಲ್ಲಿ ನಿಮಗೆ ವರ್ಕ್ ಶಾಪ್ ಕೂಡ  ಮಾಡಿಸಲಾಗುತ್ತದೆ ಹಾಗೂ ಪ್ರ್ಯಾಕ್ಟಿಕಲ್ ಮಾಹಿತಿ ಕೂಡ ನೀಡಲಾಗುತ್ತದೆ. 

5 /7

5. ಇಲೆಕ್ಟ್ರಿಕ್ ವಾಹನಗಳ ಬಗ್ಗೆ ಕಲಿಕೆ ಆರಂಭಿಸಿ - DIYguru ಒಂದು ಟೆಕ್ ಕಂಪನಿಕಂಪನಿಯಾಗಿದ್ದು, ಇದು ಎಲೆಕ್ಟ್ರಿಕ್ ಮೊಬಿಲಿಟಿ ವರ್ಕ್ ಕೋರ್ಸ್ ಗೆ ಕೌಶಲ್ಯ ಒದಗಿಸುತ್ತದೆ. ಆನ್ಲೈನ್ ಪ್ಲಾಟ್ ಫಾರಂ ಆಗಿದ್ದರೂ ಕೂಡ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಿಗೆ ತರಬೇತಿ ನೀಡಲಾಗುತ್ತಿದೆ.  DIYguru ತರಬೇತಿಯ ಲಾಭ Bosch, Hyundai, Maruti ಗಳಂತಹ ಕಂಪನಿಗಳು ಕೂಡ ಪಡೆಯುತ್ತಿವೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ಈ ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ಈ ಕುರಿತು  ತರಬೇತಿ ನೀಡುತ್ತಿವೆ. DIYguru ವೆಬ್ ಸೈಟ್ ಮೇಲೆ ಇದುವರೆಗೆ ಸುಮಾರು 56 ಸಾವಿರ ಜನರು ತರಬೇತಿಗಾಗಿ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.

6 /7

6. DIYguru ಸಂಸ್ಥಾಪಕರು ಹೇಳುವುದೇನು? - ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಸಂಸ್ಥಾಪಕ ಅವಿನಾಶ್ ಸಿಂಗ್, ಈ ಆನ್ಲೈನ್ ಕೋರ್ಸ್ ಅನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಶುಲ್ಕವನ್ನು ಕೂಡ ತುಂಬಾ ಕಡಿಮೆ ಇಡಲಾಗಿದೆ. ಕೋರ್ಸ್ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಅನುಭವಕ್ಕಾಗಿ ವರ್ಕ್ ಶಾಪ್ ಕೂಡ ಆಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.

7 /7

7. ಮಾನ್ಯತೆ ಹೊಂದಿದೆ - ಮೈ ಗವರ್ನಮೆಂಟ್ ನ Digital India Foundation Award ಪಡೆದ DIYguru ಸಂಸ್ಥೆಗೆ ಅವಿನಾಶ್ ಕುಮಾರ್ ಸಿಂಗ್, ಜಸಕರನ್ ಸಿಂಗ್ ಹಾಗೂ ಆಕಾಶ್ ಜೈನ ಹೆಸರಿನ ಮೂವರು ಯುವಕರು 2017 ರಲ್ಲಿ ಅಡಿಪಾಯ ಹಾಕಿದ್ದಾರೆ. ಆನ್ಲೈನ್ ತರಬೇತಿಯ ಮೂಲಕ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾಹಿತಿ ಹೊಂದಿದವರನ್ನು, ತಾಂತ್ರಿಕ ತಜ್ಞರನ್ನು ಹಾಗೂ ಮೆಕ್ಯಾನಿಕ್ ಗಳನ್ನು ರೂಪಿಸುವುದು ಕಂಪನಿಯ ಪ್ರಮುಖ ಉದ್ದೇಶವಾಗಿದೆ.  ಭವಿಷ್ಯದಲ್ಲಿ ಇವರಿಗೆ ಅಪಾರ ಬೇಡಿಕೆ ಇರಲಿದೆ. DIYguru ಕೋರ್ಸ್ ಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾನ್ಯತೆ ಕೂಡ ದೊರೆತಿದೆ.