ನಮ್ಮ ಮೆಟ್ರೋಗೆ ಧ್ವನಿ ಆಗಿದ್ದ ಅಪರ್ಣಾ ಅವರ ಪತಿ ಯಾರು ಗೊತ್ತಾ? ನಿರೂಪಕಿಯ ಯಶಸ್ವಿ ಜರ್ನಿಯಲ್ಲಿ ಅವರದ್ದೇ ಬಹುಪಾಲು!!

Anchor Aparna Husband: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅಗಲಿಕೆಯಿಂದ ಇಡೀ ಚಿತ್ರರಂಗ ಹಾಗೂ ಕಿರುತೆರೆ ಲೋಕ ಬೆಚ್ಚಿಬಿದ್ದಿದೆ.. ಅಚ್ಚ ಕನ್ನಡದಲ್ಲಿ ಮಾತನಾಡುತ್ತಿದ್ದ ಸ್ವಚ್ಚ ಕನ್ನಡದ ಚೆಲುವೆ ಅಪರ್ಣಾ ಅವರು ಕ್ಯಾನ್ಸರ್‌ ಕಾಯಿಲೆಯಿಂದ  ಕೊನೆಯುಸಿರೆಳೆದಿದ್ದಾರೆ.. 
 

1 /6

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕ್ಯಾನ್ಸರ್‌ ಕಾಯಿಲೆಯಿಂದ ನಮ್ಮನ್ನೇಲ್ಲ ಅಗಲಿದ್ದಾರೆ.. ಈ ವಿಚಾರ ನಿಜಕ್ಕೂ ಎಲ್ಲರಿಗೂ ಶಾಕ್‌ ನೀಡಿದೆ..   

2 /6

ಬರೀ ನಿರೂಪಕಿ ಮಾತ್ರವಲ್ಲದೇ ಸಿನಿಮಾ, ಕಿರುತೆರೆಯಲ್ಲೂ ಮಿಂಚಿದ್ದ ಅಪರ್ಣಾ ಅವರು ತಮ್ಮ ಬನಶಂಕರಿ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ..   

3 /6

ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅಪರ್ಣಾ ಅವರ ಆಂಕರಿಂಗ್‌ ಇಲ್ಲವಾದರೇ ಚಿತ್ರರಂಗದ ಅಥವಾ ರಾಜಕೀಯ ಕಾರ್ಯಕ್ರಮಗಳು ಅಪೂರ್ಣ ಎನ್ನಿಸುತ್ತಿದ್ದವು.   

4 /6

ಇನ್ನು ನಿರೂಪಕಿ ಅಪರ್ಣಾ ಅವರ ಪತಿಯ ಹೆಸರು ನಾಗೇಶ್ ವಸ್ತಾರೆ... ವೃತ್ತಿಯಲ್ಲಿ ಇವರು ಆರ್ಕಿಟೆಕ್ಟ್‌ ಆಗಿದ್ದು,  ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ.. ಕಥೆ, ಕಾದಂಬರಿ ಹೀಗೆ ಕನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡಿದ್ದಾರೆ..   

5 /6

 ನಾಗರಾಜ ರಾಮಸ್ವಾಮಿ ವಸ್ತಾರೆ ಅವರ ಹೆಸರಿನಲ್ಲಿ ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಅಂಕರಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.   

6 /6

ಅಲ್ಲದೇ ನಾಗರಾಜ ರಾಮಸ್ವಾಮಿ ವಸ್ತಾರೆ ಅವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.