ಕಠಿಣ ಪರಿಶ್ರಮದ ನಡುವೆಯೂ ಬಡತನದಿಂದ ಮೇಲೆ ಬರಲು ಸಾಧ್ಯವಾಗುತ್ತಿಲ್ಲವೇ? ಎಷ್ಟು ಹಣ ಸಂಪಾದಿಸಿದರೂ ಹಣದ ಕೊರತೆ ನೀಗುವುದೇ ಇಲ್ಲವೇ ?
ನವದೆಹಲಿ : ನೀವು ಕೂಡಾ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆ ಸಮಸ್ಯೆಗೆ ಪರಿಹಾರ ಇಲ್ಲಿದೆ. ನಿಮ್ಮ ಸರ್ವ ಪ್ರಯತ್ನಗಳ ಹೊರತಾಗಿಯೂ ಫಲ ಸಿಗುತ್ತಿಲ್ಲ ಎಂದರೆ, ಯಾಕೆ ಹೀಗಾಗುತ್ತಿದೆ ಎನ್ನುವುದನ್ನು ಮೊದಲು ಕಂಡುಕೊಳ್ಳಬೇಕು. ಹೌದು ಈ ಮಾರ್ಗಗಳನ್ನು ಅನುಸರಿಸುವ ಮೂಲಕ ಆರ್ಥಿಕ ಸಮಸ್ಯೆಗಳನ್ನು ಶಾಶ್ವತವಾಗಿ ಹೋಗಲಾಡಿಸಬಹುದು. ನಂತರ ನಿಮ್ಮ ಜೀವನಕ್ಕೊಂದು ಹೊಸ ತಿರುವು ಸಿಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಶುಕ್ರವಾರದ ದಿನವನ್ನು ಮಹಾ ಲಕ್ಷ್ಮೀಯ ದಿನ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ಎಂದರೆ ಸಂಪತ್ತಿನ ಅಧಿ ದೇವತೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ದಿನದಂದು ಲಕ್ಷ್ಮಿ ದೇವಿಯ ಹೆಸರಿನಲ್ಲಿ ಉಪವಾಸವನ್ನು ಶೃದ್ಧಾ ಭಕ್ತಿಯಿಂದ ಮಾಡಿದರೆ, ಲಕ್ಷ್ಮೀ ಪ್ರಸನ್ನಳಾಗಿ, ಭಕ್ತರ ಇಚ್ಛೆಯನ್ನು ಈಡೇರಿಸುತ್ತಾಳಂತೆ. ಶುಕ್ರವಾರ ಮಹಾಲಕ್ಷ್ಮಿಯನ್ನು ಪೂಜಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ.
ಶುಕ್ರವಾರ ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯಂತಹ ಬಿಳಿ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ತಾಯಿಯ ಅನುಗ್ರಹವು ಸದಾ ನಿಮ್ಮ ಮೇಲಿರುತ್ತದೆ. ಇನ್ನು ಶುಕ್ರವಾರ ಹಸುವಿಗೆ ಆಹಾರ ನೀಡಿದರೂ ಲಕ್ಷ್ಮೀ ಸಂತಸಗೊಳ್ಳುತ್ತಾಳಂತೆ.
ಲಕ್ಷ್ಮೀ ದೇವಿಗೆ ಶುಕ್ರವಾರ ಅಕ್ಕಿ ಅರ್ಪಿಸಬೇಕು. ಆದರೆ ನೆನಪಿರಲಿ, ನೀವು ಅರ್ಪಿಸುವ ಅಕ್ಕಿ ಕಾಳು ಮುರಿದಿರಬಾರದು. ಅಲ್ಲದೆ ಈ ದಿನ ಅಗತ್ಯ ಇದ್ದವರಿಗೆ ಸಹಾಯ ಮಾಡಬೇಕು. ಹೀಗೆ ಮಾಡುವುದರಿಂದ ಅಲ್ಪ ಅವಧಿಯಲ್ಲಿಯೇ ಹಣ ಬರಲು ಆರಂಭವಾಗುತ್ತದೆ.
ಮನೆಯೊಳಗೆ ಇರಿಸಲಾಗಿರುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಎಂದಿಗೂ ಕೊಳಕು ಸ್ಥಳದಲ್ಲಿ ಇಡಬಾರದು. ಯಾರ ಪಾದವೂ ಅದರ ಮೇಲೆ ಬೀಳದಂತಹ ಸ್ಥಳದಲ್ಲಿ ಪೊರಕೆಯನ್ನು ಇರಿಸಿ. ಪೊರಕೆ ಹಳೆಯದಾದಾಗ, ಅದನ್ನು ಸುಡುವ ಬದಲು, ಮಣ್ಣಿನಲ್ಲಿ ಹೂಳಬೇಕು.