ಬೆಂಗಳೂರು : ಇಂದು ಸಂಜೆ 6.18ಕ್ಕೆ ಧನು ರಾಶಿಯನ್ನು ಪ್ರವೇಶಿಸುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹವು ಹಿಮ್ಮುಖ ಚಲನೆಯಿಂದ ನೇರ ನಡೆ ಆರಂಭಿಸಿದಾಗ ಕೆಲವು ರಾಶಿಯವರ ಜೀವನದ ಎಲ್ಲಾ ಕಷ್ಟಗಳು ನಿವಾರಣೆಯಾದರೆ, ಇನ್ನು ಕೆಲವು ರಾಶಿಯವರ ಜೀವನದಲ್ಲಿ ಕಷ್ಟದ ದಿನಗಳು ಆರಂಭವಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ :ಉದ್ಯೋಗವನ್ನು ಬದಲಾಯಿಸುವ ಆಲೋಚನೆಯಲ್ಲಿರುವವರಿಗೆ ಇದು ಸುಸಂದರ್ಭ. ಬುಧ ಸಂಕ್ರಮಣದಿಂದಾಗಿ ಉತ್ತಮ ಉದ್ಯೋಗಾವಕಾಶ ಎದುರಾಗಲಿದೆ. ಆರೋಗ್ಯ ಮತ್ತು ವೃತ್ತಿ ಜೀವನದಲ್ಲಿ ಎದುರಾಗುತ್ತಿದ್ದ ತೊಂದರೆ ನಿವಾರನೆಯಾಗಬಹುದು. ತುಳಸಿ ಗಿಡಕ್ಕೆ ಪ್ರತಿದಿನ ನೀರು ಅರ್ಪಿಸಿದರೆ ಇನ್ನೂ ಶುಭ ಫಲ ಸಿಗುವುದು.
ತುಲಾ ರಾಶಿ : ಮಾಧ್ಯಮ ಮತ್ತು ಬರವಣಿಗೆಗೆ ಸಂಬಂಧಿಸಿದ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಅವಧಿಯು ಪ್ರಾರಂಭವಾಗಲಿದೆ. ಬುಧಗ್ರಹದ ಹಿಮ್ಮುಖ ಚಲನೆಯಿಂದಾಗಿ, ಈ ರಾಶಿಯವರು ಇಲ್ಲಿವರೆಗೆ ತಮ್ಮ ಗುರಿಯನ್ನು ಸಾಧಿಸುವಲ್ಲಿ ತೊಂದರೆ ಎದುರಿಸುತ್ತಿದ್ದರು. ಮತ್ತೆ ಅವರು ಮಾಡುವ ಕೆಲಸ ಉತ್ತಮ ಫಲಿತಾಂಶ ನೀಡಲಿದೆ. ಮನೆಯಲ್ಲಿ ಒಡಹುಟ್ಟಿದವರ ಜೊತೆ ಇದ್ದ ವಿವಾದಗಳು ಬಗೆಹರಿಯುತ್ತವೆ. ಮನೆಯಲ್ಲಿ ತುಳಸಿ ಗಿಡ ನೆಟ್ಟು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಿದರೆ ಹೆಚ್ಚಿನ ಪ್ರಯೋಜನವಾಗುವುದು.
ಕುಂಭ ರಾಶಿ : ಈ ರಾಶಿಯವರು ಹೂಡಿಕೆ ಅಥವಾ ಬಡ್ಡಿಯ ಮೇಲೆ ನೀಡಿದ ಹಣದ ಮೂಲಕ ಹೆಚ್ಚಿನ ಗಳಿಕೆ ಮಾಡುವುದು ಸಾಧ್ಯವಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ದೊರೆಯುವುದು. ಬರವಣಿಗೆ, ಸಮೂಹ ಸಂವಹನ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.
ಮಿಥುನ ರಾಶಿ :ಈ ರಾಶಿಯವರ ಜೀವನದಲ್ಲಿ ಒಳ್ಳೆಯ ಸಮಯ ಪ್ರಾರಂಭವಾಗಲಿವೆ. ಮದುವೆಗೆ ಸೂಕ್ತ ಜೀವನ ಸಂಗಾತಿಯನ್ನು ಹುಡುಕುತ್ತಿರುವವರ ಹುಡುಕಾಟ ಕೊನೆಯಾಗಲಿದೆ. ನೀವು ಮಾಡುವ ಕೆಲ್ಸಕ್ಕೆ ತಾಯಿಯ ಪ್ರೋತ್ಸಾಹ ಸಿಗುವುದು. ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ ಅವರನ್ನು ಪೋಷಕರಿಗೆ ಪರಿಚಯಿಸಬಹುದು. ಸಂಗಾತಿಗಳ ಮಧ್ಯೆ ಮೂಡಿರುವ ಬಿರುಕು ಸರಿಯಾಗಬಹುದು. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)