Gajlakshmi Rajyog 2024: ಹನ್ನೆರಡು ವರ್ಷಗಳ ಬಳಿಕ ಗುರು-ಶುಕ್ರರ ಕೃಪೆಯಿಂದ ಗಜಲಕ್ಷ್ಮಿ ರಾಜಯೋಗ ರಚನೆ, ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿ!

Guru Shukra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗುರು-ಶುಕ್ರರ ಮೈತ್ರಿಯಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಹಲವು ಶುಭ ಹಾಗೂ ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಅವುಗಳಲ್ಲಿ ಗಜಲಕ್ಷ್ಮಿ ರಾಜಯೋಗ ಕೂಡ ಒಂದು. ಮೇ 1, 2024 ರಂದು ದೇವ ಗುರು ಬೃಹಸ್ಪತಿ ವೃಷಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದಲ್ಲದೆ ಮೇ 19,2024 ರಂದು ಧನದಾತ ಶುಕ್ರ ಕೂಡ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತಿದೆ. ಇಲ್ಲಿ ಗುರು ಹಾಗೂ ಶುಕ್ರ ಇಬ್ಬರು ಪರಸ್ಪರ ಕೇಂದ್ರ ಸ್ಥಾನದಲ್ಲಿ ಪರಸ್ಪರ ಎದುರಿಗೆ ಅಥವಾ ಪ್ರಥಮ, ಚತುರ್ಥ ಹಾಗೂ ಸಪ್ತಮ ಭಾವದಲ್ಲಿ ಇರಲಿದ್ದಾರೆ ಮತ್ತು ಆಗ ಗಜಲಕ್ಷಿ ರಾಜಯೋಗ ನಿರ್ಮಾಣಗೊಳ್ಳಲಿದೆ. ಹೀಗಿರುವಾಗ ಈ ರಾಜಯೋಗದ ನಿರ್ಮಾಣದಿಂದ ಕೆಲ ರಾಶಿಗಳ ಜನರಿಗೆ ಸಾಕಷ್ಟು ಶುಭಫಲಗಳು ಪ್ರಾಪ್ತಿಯಾಗಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ -Venus Transit 2024 March: ಮಾರ್ಚ್ ತಿಂಗಳಿನಲ್ಲಿ ಎರಡು ಬಾರಿ ಶುಕ್ರನ ರಾಶಿ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

Guru Shukra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗುರು-ಶುಕ್ರರ ಮೈತ್ರಿಯಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ (Spiritual News In Kannada)  

2 /6

ಸಿಂಹ ರಾಶಿ: ಗಜಲಕ್ಷ್ತ್ಮಿ ರಾಜಯೋಗ ನಿರ್ಮಾಣದಿಂದ ನಿಮಗೆ ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಅಧಿಕ ಉತ್ತಮವಾಗಲಿದೆ. ಆಸೆಗಳು ಈಡೇರಲಿವೆ. ಈ ಅವಧಿಯಲ್ಲಿ ನೀವು ಹೊಸ ಕೆಲಸ ಆರಂಭಿಸುವ ಸಾಧ್ಯತೆ ಇದೆ. ಆದರಿಂದ ನಿಮಗೆ ಧನಲಾಭ ಉಂಟಾಗಲಿದೆ. ಕೆಲಸದ ನಿಮಿತ್ತ ವಿಶೇಷ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಅದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಉನ್ನತಿಯಾಗಲಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವುದರಿಂದ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ಹೊಸ ವರ್ಷದಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ ಮತ್ತು ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೊಸ ವರ್ಷದಲ್ಲಿ ನೀವು ವಾಹನ ಹಾಗೂ ಸಂಪತ್ತನ್ನು ಕೂಡ ಖರೀದಿಸುವ ಸಾಧ್ಯತೆ ಇದೆ.   

3 /6

ಧನು ರಾಶಿ: ಗಜಲಕ್ಷ್ಮಿ ರಾಜಯೋಗದಿಂದ ನಿಮ್ಮ ಆದಾಯ ದುಪ್ಪಟ್ಟಾಗಲಿದೆ. ಆದಾಯದ ಹೊಸ ಮೂಲಗಳು ಕೂಡ ನಿರ್ಮಾಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಉತ್ತಮ ಸಾಧನೆಯನ್ನು ಮಾಡುವಿರಿ. ಈ ಸಮಯದಲ್ಲಿ ನಿಮಗೆ ಹೂಡಿಕೆಯಿಂದಲೂ ಕೂಡ ಅಪಾರ ಲಾಭ ಉಂಟಾಗಲಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲ ಶುಭ ಸಮಾಚಾರಗಳು ಕೂಡ ನಿಮಗೆ ಪ್ರಾಪ್ತಿಯಾಗಲಿವೆ. ವ್ಯಾಪಾರಿಗಳು ಕೆಲ ಉತ್ತಮ ಡೀಲ್ ಗಳನ್ನು ಫೈನಲ್ ಮಾಡುವ ಸಾಧ್ಯತೆ ಇದೆ. ಲಾಭದ ಶುಭಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೊಸ ವರ್ಷದಲ್ಲಿ ನೀವು ಕೆಲ ಸ್ಪೆಷಲ್ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ.   

4 /6

ಕರ್ಕ ರಾಶಿ: ಈ ರಾಜಯೋಗ ನಿರ್ಮಾಣದಿಂದ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ. ಪರ್ಸ್ನಲ್ ಲೈಫ್ ಜೊತೆಗೆ ಪ್ರೊಫೆಶನಲ್ ಲೈಫ್ ನಲ್ಲಿಯೂ ಕೂಡ ನೀವು ಉತ್ತಮ ಪ್ರದರ್ಶನವನ್ನು ತೋರುವಿರಿ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಲಾಭದ ಯೋಗ ರೂಪುಗೊಳ್ಳುತ್ತಿದೆ. ನಿಮ್ಮ ಸ್ಸೇ ಆಕಾಂಕ್ಷೆಗಳು ಈಡೇರಲಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಅರ್ಥಾತ್ ಅವರಿಗೆ ಸರ್ಕಾರಿ ನೌಕರಿ ಸಿಗುವ ಎಲ್ಲಾ ಸಾಧ್ಯತೆಗಳಿವೆ.  

5 /6

ಮೇಷ ರಾಶಿ: ಮೇಷ ರಾಶಿಗ ಜನರಿಗೆ ಗಜಲಕ್ಷ್ಮಿ ಯೋಗ ಒಂದು ವರದಾನ ಸಾಬೀತಾಗಲಿದೆ. ಇದರಿಂದ ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ನೀವು ಸಮರ್ಥರಾಗುವಿರಿ. ಇದರಿಂದ ನಿಮಗೆ ಜ್ಞಾನ ಹಾಗೂ ಸಮೃದ್ಧಿ ಪ್ರಾಪ್ತಿಯಾಗಲಿದೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ಉನ್ನತ ವ್ಯಕ್ತಿಗಳ ಜೊತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. ಅದು ನಿಮಗೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಆರೋಗ್ಯ ಉತ್ತಮವಾಗಿರಲಿದೆ. ನೀವು ಸಾಕಷ್ಟು ಶಕ್ತಿಯಿಂದ ತುಂಬಿರುವಿರಿ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ವಿವಾಹಿತರ ವೈವಾಹಿಕ ಜೀವನ ಅದ್ಭುತವಾಗಿರಲಿದೆ. ಅಂದುಕೊಂಡ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ.   

6 /6

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)