ಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...

Today Gold Rate: ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಕುಸಿಯುತ್ತಿದೆ.. ಹಾಗಾದ್ರೆ ರಾಜ್ಯದ ವಿವಿಧ ನಗರಗಳಲ್ಲಿ ಇಂದಿನ ಬಂಗಾರದ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ.. 
 

1 /6

ಕಳೆದ ಎರಡು ತಿಂಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 67 ಸಾವಿರ ಇದ್ದದ್ದು ಈಗ (ನವೆಂಬರ್ 5) 73 ಸಾವಿರ ದಾಟಿದೆ. ಅಂದರೆ 2 ತಿಂಗಳಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ.  

2 /6

ಆದರೆ ಕಳೆದ ಎರಡ್ಮೂರು ದಿನಗಳಿಂದ ಚಿನ್ನ ಕೊಂಚ ಕಡಿಮೆಯಾಗಿದೆ. ಗಗನಕ್ಕೇರಿದ ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರಿಯರು ಖುಷಿ ಪಡುತ್ತಿದ್ದಾರೆ. ಹೂಡಿಕೆ ಮಾಡಲು ಬಯಸುವವರಿಗೆ ಇದೇ ಸರಿಯಾದ ಸಮಯ ಎಂದರೇ ತಪ್ಪಾಗುವುದಿಲ್ಲ..     

3 /6

ಕಳೆದ ವಾರ ಚಿನ್ನ ಸುಮಾರು 2 ಸಾವಿರ ಏರಿಕೆಯಾಗಿದೆ. ಸದ್ಯ 770 ರೂಪಾಯಿ ಇಳಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಈ ವಾರದ ಆರಂಭದಲ್ಲಿ ಬೆಲೆಗಳು ಹೆಚ್ಚು ಬದಲಾಗಿಲ್ಲ. ಇಂದಿನ ಬೆಲೆಗಳ ಪ್ರಕಾರ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಪ್ರತಿ 10 ಗ್ರಾಂಗೆ 73,800 ರೂ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 80,055 ರೂ. ಆಗಿದೆ..   

4 /6

ಚಿನ್ನವನ್ನು ಖರೀದಿಸುವ ಮೊದಲು, ಆಭರಣಗಳ ಮೇಲೆ ಹಾಲ್ ಗುರುತುಗಳನ್ನು ಪರಿಶೀಲಿಸಿ. ಗುರುತು ಹೊಂದಿರುವ ಚಿನ್ನವು ಶುದ್ಧವಾಗಿರುತ್ತದೆ.. ಇದರಿಂದ ಈ ಆಭರಣಗಳನ್ನು ಮಾರಲು ಬಯಸಿದಾಗ ಅಥವಾ ಕರಗಿಸಿ ಮತ್ತೊಂದು ಆಭರಣವನ್ನು ಮಾಡಲು ಬಯಸಿದಾಗ ಹೆಚ್ಚು ಮಾಡುವ ಮಜೂರಿ ಇರುವುದಿಲ್ಲ.  

5 /6

ಮತ್ತೊಂದೆಡೆ, ಕಳೆದ ವಾರ ಬೆಳ್ಳಿ 2 ಸಾವಿರ ಏರಿಕೆ ಕಂಡಿತ್ತು. ವಾರದ ಅಂತ್ಯಕ್ಕೆ ಬೆಳ್ಳಿ 3 ಸಾವಿರ ಕುಸಿದಿದೆ. ಈ ವಾರದ ಆರಂಭದಲ್ಲಿ ಬೆಲೆಗಳು ಸ್ಥಿರವಾಗಿದ್ದವು. ಇಂದಿನ ಬೆಳಗಿನ ದರದ ಪ್ರಕಾರ ಬೆಳ್ಳಿ ಕುಸಿಯುವ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯದ ಬೆಲೆಯಂತೆ ಒಂದು ಕೆಜಿ ಬೆಳ್ಳಿಯ ಬೆಲೆ 97,000 ರೂ. ಆಗಿದೆ..   

6 /6

ಇದೇ ವೇಳೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಸೌಲಭ್ಯವೂ ಇದೆ ಎಂಬುದು ಹಲವರಿಗೆ ತಿಳಿದಿಲ್ಲ. ಎಲ್ಲಾ ಶೋರೂಂಗಳಲ್ಲಿಯೂ ರೂ. 60 ಸಾವಿರಕ್ಕೆ ಚಿನ್ನ ಖರೀದಿಸಬಹುದು. ಆದರೆ ಈ ಚಿನ್ನವು 18 ಕ್ಯಾರೆಟ್ ಆಗಿರುತ್ತದೆ..