SSY: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸರ್ಕಾರ ಮಾಡಿರುವ 5 ಬದಲಾವಣೆಗಳು ನಿಮಗೆ ಗೊತ್ತಿರಲಿ

Sukanya Samriddhi Yojana: ಕೇಂದ್ರ ವಿತ್ತ ಸಚಿವಾಲಯ ಡಿಸೆಂಬರ್ 30 ರಂದು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಶೀಲಿಸಿದೆ. 

Sukanya Samriddhi Yojana: ಕೇಂದ್ರ ವಿತ್ತ ಸಚಿವಾಲಯ ಡಿಸೆಂಬರ್ 30 ರಂದು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಶೀಲಿಸಿದೆ. ಈ ಸಂದರ್ಭದಲ್ಲಿ ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಳದ ನಿರೀಕ್ಷೆಯಲ್ಲಿರುವವರಿಗೆ ಸರ್ಕಾರ ಶಾಕ್ ನೀಡಿದೆ. ಆದರೆ, ಪೋಸ್ಟ್ ಆಫಿಸ್ ಎಫ್ ಡಿ, ಎನ್ಎಸ್ಸಿ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ  ಇತರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಶೇ.1.1 ರಷ್ಟು ಹೆಚ್ಚಿಸಿದೆ. ಹೊಸ ಬದ್ದಿಗರಗಳು ಜನವರಿ 1, 2023 ರಿಂದ ಅನ್ವಯಿಸಲಿವೆ.

 

ಇದನ್ನೂ ಓದಿ-Budget 2023 Expectations: PPF ಖಾತೆದಾರರಿಗೆ ಭಾರಿ ಸಂತಸದ ಸುದ್ದಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

1. ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳ ಮೇಲೆ ಈ ಮೊದಲು ನೀಡಲಾಗುತ್ತಿದ್ದ ವಾರ್ಷಿಕ  ಶೇ.7.1 ಮತ್ತು ಶೇ 7.6ರಷ್ಟು ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ವರ್ಷದ ಕೊನೆಯ ದಿನಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸರ್ಕಾರ 5 ಬದಲಾವಣೆಗಳನ್ನು ಮಾಡಿದೆ ಅವು ಯಾವುವು ತಿಳಿದುಕೊಳ್ಳೋಣ ಬನ್ನಿ,  

2 /6

2. ಸುಕನ್ಯಾ ಸಮೃದ್ಧಿ ಯೋಜನೆಯ ಹೊಸ ನಿಯಮಗಳ ಅಡಿಯಲ್ಲಿ, ಖಾತೆಗೆ ವರ್ಗಾಯಿಸಲಾಗುವ ಮತ್ತು ತಪ್ಪಾದ ಬಡ್ಡಿಯನ್ನು ಹಿಂಪಡೆಯುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಹೆಚ್ಚುವರಿಯಾಗಿ, ಖಾತೆಯ ಮೇಲಿನ ವಾರ್ಷಿಕ ಬಡ್ಡಿಯನ್ನು ಪ್ರತಿ ಇನ್ಮುಂದೆ ಹಣಕಾಸು ವರ್ಷದ ಕೊನೆಯಲ್ಲಿ ವರ್ಗಾಯಿಸಲಾಗುವುದು ಎನ್ನಲಾಗಿದೆ. ಮೊದಲು ಇದನ್ನು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ವರ್ಗಾಯಿಸಲಾಗುತ್ತಿತ್ತು.  

3 /6

3. ಈ ಮೊದಲು ಇದ್ದ ನಿಯಮಗಳ ಪ್ರಕಾರ ಮಗಳಿಗೆ 10 ವರ್ಷ ತುಂಬಿದ ಬಳಿಕ ಆಕೆಗೆ ತನ್ನ ಖಾತೆಯನ್ನು ನಿರ್ವಹಿಸುವ ಅವಕಾಶ ಸಿಗುತ್ತಿತ್ತು. ಆದರೆ, ಹೊಸ ನಿಯಮದ ಪ್ರಕಾರ ಇದೀಗ ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮುನ್ನ ಖಾತೆ ನಿರ್ವಹಿಸಲು ಅನುಮತಿಯನ್ನು ನೀಡಲಾಗುವುದಿಲ್ಲ ಎನ್ನಲಾಗಿದೆ. 18 ವರ್ಷದವರೆಗೆ ಆಕೆಯ ಪೋಷಕರು ಮಾತ್ರ ಖಾತೆಯನ್ನು ನಿರ್ವಹಿಸಬೇಕು  ಎನ್ನಲಾಗಿದೆ.  

4 /6

4. ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯಲ್ಲಿ ವಾರ್ಷಿಕವಾಗಿ 250 ಮತ್ತು ಗರಿಷ್ಠ 1.5 ಲಕ್ಷ ರೂ.ಜಮಾ ಮಾಡಲು ಅವಕಾಶವಿದೆ. ಆದರೆ ಒಂದು ವೇಳೆ ಕನಿಷ್ಠ ಮೊತ್ತ ಠೇವಣಿ ಮಾಡದೆ ಹೋದ ಸಂದರ್ಭದಲ್ಲಿ ಖಾತೆ ಡೀಫಾಲ್ಟ್ ಆಗುತ್ತದೆ. ಹೊಸ ನಿಯಮದ ಪ್ರಕಾರ ಒಂದು ವೇಳೆ ಖಾತೆಯನ್ನು ಮರುಸಕ್ರೀಯಗೊಳಿಸದಿದ್ದರೆ, ಯೋಜನೆಯ ಅವಧಿ ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಲಾದ ಮೊತ್ತಕ್ಕೆ ಬಡ್ಡಿ ಪಾವತಿ ಮುಂದುವರೆಯಲಿದೆ. ಆದರೆ, ಈ ಹಿಂದೆ ಈ ಪ್ರಾವಧಾನ ಇರಲಿಲ್ಲ.  

5 /6

5. ಈ ಮೊದಲು ತೆರಿಗೆ ವಿನಾಯ್ತಿಯ ಪ್ರಯೋಜನ 80ಸಿ ಅಡಿಯಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯವಿತ್ತು. ಆದರೆ, ಇದೀಗ ಮೂರನೇ ಮಗಳು ಹುಟ್ಟಿದ ಮೇಲೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದು. ಅಂದರೆ, ಮೊದಲ ಮಗಳು ಹುಟ್ಟಿದ ಬಳಿಕ ಎರಡನೇ ಚಾನ್ಸ್ ನಲ್ಲಿ ಅವಳಿ ಹೆಣ್ಣು ಮಕ್ಕಳು ಜನಿಸಿದರೆ, ಅವಳಿ ಹನ್ನುಮಕ್ಕಳ ಖಾತೆಯನ್ನು ತೆರೆಯುವ ಅವಕಾಶ ಕಲ್ಪಿಸಲಾಗಿದೆ. ಈ ರೀತಿಯಾಗಿ ಓರ್ವ ವ್ಯಕ್ತಿ ತನ್ನ ಮೂವರು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.  

6 /6

6. ಈ ಮೊದಲು ಮಗಳ ಮರಣದ ನಂತರ ಅಥವಾ ಮಗಳ ಮನೆ ವಿಳಾಸ ಬದಲಾದ ಸಂದರ್ಭದಲ್ಲಿ ಖಾತೆಯನ್ನು ಮೊಟಕುಗೊಳಿಸಲು ಅವಕಾಶವಿತ್ತು. ಆದರೆ, ಇದೀಗ ಖಾತೆ ಹೊಂದಿದವರ ಮಾರಣಾಂತಿಕ ಕಾಯಿಲೆ ಕೂಡ ಇದರಲ್ಲಿ ಶಾಮೀಲುಗೊಳಿಸಲಾಗಿದ. ಇದಲ್ಲದೆ ಪಾಲಕರ ಅಥವಾ ಪೋಷಕರ ಅಕಾಲಿಕ ಮರಣದ ನಂತರವೂ ಕೂಡ ಅಕಾಲಿಕವಾಗಿ ಖಾತೆಯನ್ನು ನೀವು ಸ್ಥಗಿತಗೊಳಿಸಬಹುದು.