ನಿಯಮಿತವಾಗಿ ವಾಲ್ನಟ್ಸ್ ಸೇವಿಸುವುದನ್ನು ರೂಢಿಸಿಕೊಂಡರೇ ನೀವು ಅನೇಕ ಪ್ರಯೋಜನೆಗಳನ್ನು ಪಡೆದುಕೊಳ್ಳುತ್ತೀರಿ.
ವಾಲ್ನಟ್ಸ್ ಅಥವಾ ಅಖ್ರೋಟ್(Walnuts) ನಿಮ್ಮ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ವಾಲ್ನಟ್ಸ್ ಅನ್ನು ಅಗತ್ಯವಾಗಿ ಸೇರಿಸಿಕೊಳ್ಳಬೇಕು. ನಿಯಮಿತವಾಗಿ ವಾಲ್ನಟ್ಸ್ ಸೇವಿಸುವುದನ್ನು ರೂಢಿಸಿಕೊಂಡರೇ ನೀವು ಅನೇಕ ಪ್ರಯೋಜನೆಗಳನ್ನು ಪಡೆದುಕೊಳ್ಳುತ್ತೀರಿ. ಮೆದುಳಿನ ಆರೋಗ್ಯ ಸುಧಾರಿಸುವುದರಿಂದ ಹಿಡಿದು ಸರಿಯಾದ ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ವಾಲ್ನಟ್ಸ್ ನ ಕೆಲವು ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಿಮ್ಮ ಸ್ಮರಣಾಶಕ್ತಿಯನ್ನು ಸುಧಾರಿಸಲು ವಾಲ್ನಟ್ಸ್ ಸಹಕಾರಿಯಾಗಿದೆ. ಕೊಲೆಸ್ಟ್ರಾಲ್ ಮುಕ್ತವಾಗಿರುವ ವಾಲ್ನಟ್ಸ್ ಉತ್ತಮ ಒಮೆಗಾ-3 ಕೊಬ್ಬಿನಾಮ್ಲಗಳಿಂದ ಕೂಡಿದೆ. ಇದು ಮೆದುಳಿನ ಆರೋಗ್ಯ ಮತ್ತು ಕಾರ್ಯ ಎರಡಕ್ಕೂ ಒಳ್ಳೆಯದು. ವಿಟಮಿನ್ ಇ, ಫೋಲೇಟ್ ಮತ್ತು ಎಲಾಜಿಕ್ ಆಸಿಡ್ ನಂತಹ ಪೋಷಕಾಂಶಗಳು ವಾಲ್ನಟ್ಸ್ ನಲ್ಲಿವೆ. ಹೀಗಾಗಿ ನಿಮ್ಮ ನೆನಪಿನ ಶಕ್ತಿ ವೃದ್ಧಿಸಲು ನಿಯಮಿತವಾಗಿ ವಾಲ್ನಟ್ಸ್ ಸೇವಿಸಿರಿ.
ನಮ್ಮ ಆಹಾರದಲ್ಲಿ ವಾಲ್ನಟ್ಸ್ ಸೇರಿಸುವುದರಿಂದ ಬ್ಯೂಟೈರೇಟ್ ಅನ್ನು ಉತ್ಪಾದಿಸುವ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಇದು ನಿಮ್ಮ ಕರುಳನ್ನು ಪೋಷಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ವಾಲ್ನಟ್ಸ್ ಉತ್ತಮ ಕೊಬ್ಬಿನಿಂದ ಸಮೃದ್ಧವಾಗಿದೆ. ವಾಲ್ನಟ್ಸ್ ನಲ್ಲಿ ಕಂಡುಬರುವ ಆಲ್ಫಾ-ಲಿನೋಲೆನಿಕ್ ಆಸಿಡ್ ಮತ್ತು ಲಿನೋಲೆನಿಕ್ ಆಸಿಡ್ ನಂತಹ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಆರೋಗ್ಯಕರ ಲಿಪಿಡ್ ಪೂರೈಕೆಯನ್ನು ಉತ್ತೇಜಿಸುತ್ತವೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ವಾಲ್ನಟ್ಸ್ ನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ವಾಲ್ನಟ್ಸ್ ನಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತವೆ. ಶುಷ್ಕ ಮತ್ತು ತುರಿಕೆ ಚರ್ಮ, ಮೊಡವೆ ಮತ್ತು ಒಡೆಯುವಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.
ಪುರುಷರು ನಿಯಮಿತವಾಗಿ ವಾಲ್ನಟ್ಸ್ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳ ಜೊತೆಗೆ ಲಾಭವನ್ನು ಪಡೆದುಕೊಳ್ಳಬಹುದು. ವಾಲ್ನಟ್ಸ್ ಸೇವನೆಯು ವೀರ್ಯ ರಕ್ಷಿಸಲು ಸಹಾಯ ಮಾಡುತ್ತದೆ. ಶೇ.50ರಷ್ಟು ವಾಲ್ನಟ್ಸ್, ಶೇ.25 ರಷ್ಟು ಬಾದಾಮಿ ಮತ್ತು ಶೇ.25 ರಷ್ಟು ಅಡಕೆ ಮಿಶ್ರಣ ಮಾಡಿ ಸೇವಿಸುವುದರಿಂದ ಪುರುಷರ ಲೈಂಗಿಕ ಬಯಕೆ ಗಮನಾರ್ಹವಾಗಿ ಹೆಚ್ಚಳವಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.