Holi 2023 Horoscope: ಹೋಳಿ ಹಬ್ಬದ ಬಳಿಕ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿಯೇ ವಿರಾಜಮಾನನಾಗಲಿದ್ದಾನೆ. ಶನಿಯ ಜೊತೆಗೆ ಈ ರಾಶಿಯಲ್ಲಿ ಸೂರ್ಯ ಹಾಗೂ ಬುಧನ ಯುತಿ ಕೂಡ ನೆರವೇರಲಿದೆ. ಹೋಳಿ ಹಬ್ಬದ ಬಳಿಕ ಪ್ರಮುಖ ಗ್ರಹಗಳ ಈ ಸ್ಥಿತಿ ಕೆಲ ರಾಶಿಗಳ ಜನರಿಗೆ ದೀರ್ಘ ಸಮಯದವರೆಗೆ ಸಾಕಷ್ಟು ವಿತ್ತೀಯ ಲಾಭವನ್ನು ನೀಡಲಿದೆ.
Holi 2023: ಬಣ್ಣಗಳ ಹಬ್ಬ ಹೋಳಿ ಹುಣ್ಣಿವೆಯ ಬಳಿಕ ಗ್ರಹಗಳ ವಿಶೇಷ ಸ್ಥಿತಿ ನಿರ್ಮಾಣಗೊಳ್ಳಲಿದೆ. 30 ವರ್ಷಗಳ ಬಳಿಕ ಶನಿ ತನ್ನ ಸ್ವರಾಶಿಯಾಗಿರುವ ಕುಂಭರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ರಾಶಿಯಲ್ಲಿ ಶನಿಯ ಜೊತೆಗೆ ಸೂರ್ಯ ಹಾಗೂ ಬುಧರ ಯುತಿ ನೆರವೇರಲಿದೆ. ಜೋತಿಷ್ಯ ಪಂಡಿತರ ಪ್ರಕಾರ ಹೋಳಿ ಹಬ್ಬದ ಬಳಿಕ ಪ್ರಮುಖ ಗ್ರಹಗಳ ಸ್ಥಿತಿ ಕೆಲ ರಾಶಿಗಳ ಜನರಿಗೆ ದೀರ್ಘಕಾಲದವರೆಗೆ ಅಪಾರ ವಿತ್ತೀಯ ಲಾಭವನ್ನು ನೀಡಲಿದೆ. ಈ ಬಾರಿಯ ಹೋಳಿ ಹಬ್ಬದ ನಂತರ ಮತ್ತು ಮುಂದಿನ ಹೋಳಿ ಹಬ್ಬದ ವರೆಗೆ ಯಾವ ರಾಶಿಗಳ ಗ್ರಹ ನಕ್ಷತ್ರಗಳು ಉಚ್ಛ್ರಾಯ ಸ್ಥಿತಿಯಲ್ಲಿರಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-International Women's Day 2023: ಜೀವನದಲ್ಲಿ ಯಾವಾಗಲು ತಲೆ ಎತ್ತಿ ಬದುಕುತ್ತಾರೆ ಈ ಮೂರು ರಾಶಿಗಳ ಹುಡುಗಿಯರು!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1 ಮಿಥುನ ರಾಶಿ- ಈ ಬಾರಿ ಹೋಳಿ ಹಬ್ಬದ ಬಳಿಕ ಮಿಥುನ ರಾಶಿಯ ಜಾತಕದವರ ವ್ಯಕ್ತಿತ್ವ ಪ್ರಭಾವದಿಂದ ಕೂಡಿರಲಿದೆ. ಈ ಅವಧಿಯಲ್ಲಿ ನೀವು ಶ್ರೇಷ್ಠ ಕಾರ್ಯಗಳಿಗೆ ವೇಗವನ್ನು ನೀಡುವಿರಿ. ಆಡಳಿತ ಮತ್ತು ಅಧಿಕಾರದ ಮೇಲೆ ನಿಮ್ಮ ನಂಬಿಕೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ವ್ಯಾಪಾರ ವರ್ಗದ ಜನರಿಗೆ ಹಚ್ಚುವರಿ ಲಾಭದ ಲಕ್ಷಣಗಳು ಗೋಚರಿಸುತ್ತಿವೆ. ಯೋಜನೆಯನ್ನು ರೂಪಿಸಿ ಮಾಡಲಾಗುವ ಕಾರ್ಯಗಳು ಯಶಸ್ವಿಯಾಗಲಿವೆ. ಸಾಧನೆಗಳು ಹೆಚ್ಚಾಗಲಿವೆ. ನಿಸಂಕೊಚವಾಗಿ ಮುಂದಕ್ಕೆ ಸಾಗಿರಿ. ಮೂರು ವಿಷಯಗಳ ಮೇಲೆ ಹೆಚ್ಚಿನ ಗಮನ ಹರಿಸಿ, ಸಹಜ ಸತ್ಕಾರ್ಯದಿಂದ ಕೆಲಸ ಮಾಡಿ, ಹಿರಿಯರ ಸನ್ನಿಧಿ ಕಾಪಾಡಿಕೊಳ್ಳಿ, ಗುರಿಯ ಮೇಲೆ ಗಮನ ಕೇಂದ್ರೀಕರಿಸಿ.
2. ಸಿಂಹ ರಾಶಿ- ದಾನ ಕಾರ್ಯಗಳ ಮೇಲೆ ಒಲವು ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸಿಗೆ ಅವಕಾಶಗಳು ದೊರೆಯಲಿವೆ. ಎಲ್ಲರನ್ನು ಕರೆದುಕೊಂಡು ಮುಂದಕ್ಕೆ ಸಾಗಿ. ಪ್ರತಿಪಕ್ಷಗಳ ತಂತ್ರಗಳು ವಿಫಲವಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಉತ್ತರಾರ್ಧದಲ್ಲಿ, ಅಡೆತಡೆಗಳಲ್ಲಿ ತ್ವರಿತ ಇಳಿಕೆ ಕಂಡುಬರಲಿದೆ. ಭೂ-ಕಟ್ಟಡದ ವಿಷಯಗಳು ಮುನ್ನೆಲೆಗೆ ಬರಲಿವೆ. ಪ್ರಯಾಣದ ಸಾಧ್ಯತೆ ಹೆಚ್ಚಾಗುತ್ತದೆ. ಸಂಬಂಧಗಳ ಬಲವನ್ನು ಪಡೆಯುವಿರಿ. ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಒತ್ತು ನೀಡುವಿರಿ. ಲೆಕ್ಕ ಹಾಕಿದ ಅಪಾಯಗಳನ್ನು ಮಾತ್ರ ತೆಗೆದುಕೊಳ್ಳಿ. ವಾಣಿಜ್ಯ ಕಾರ್ಯಗಳಲ್ಲಿ ಸ್ಪಷ್ಟತೆಯನ್ನು ಇರಲಿದೆ. ಕಾರ್ಯಗಳ ನಿರ್ವಹಣೆಯ ಮೇಲೆ ಗಮನವನ್ನು ಹೆಚ್ಚಿಸಿ.
3. ತುಲಾ ರಾಶಿ- ತುಲಾ ರಾಶಿಯ ಜನರು ದೊಡ್ಡ ಗುರಿಗಳತ್ತ ಗಮನ ಹರಿಸುತ್ತಾರೆ. ಧಾರ್ಮಿಕ ಮತ್ತು ಮನರಂಜನಾ ಪ್ರವಾಸಗಳು ಇರಲಿವೆ. ಮನಸ್ಸಿಗೆ ಬಂದಂತೆ ಮಾತನಾಡಲು ಸಮಯ ಅನುಕೂಲಕರವಾಗಿದೆ. ಅಧ್ಯಯನ ಬೋಧನೆಯಲ್ಲಿ ಉತ್ತಮ ಆಸಕ್ತಿ ಹೆಚ್ಚಾಗಲಿದೆ. ಉತ್ತರಾರ್ಧದಲ್ಲಿ ಸಮಯದಲ್ಲಿ ಸುಧಾರಣೆ ಇರಲಿದೆ. ಗುರಿಗಳ ಮೇಲೆ ಗಮನ ಕೇಂದ್ರೀಕರಿಸುವಿರಿ. ಕಾಯಿಲೆ-ಅನಾರೋಗ್ಯದಿಂದ ರಕ್ಷಿಸಿಕೊಳ್ಳುವಿರಿ. ವೃತ್ತಿಪರ ಜನರ ಪ್ರದರ್ಶನ ಉತ್ತಮವಾಗಿರಲಿದೆ. ಸೇವಾ ಕ್ಷೇತ್ರದಲ್ಲಿ ಅಮೂಲಾಗ್ರ ಯಶಸ್ಸನ್ನು ಸಂಪಾದಿಸುವಿರಿ. ಎಲ್ಲರ ಜೊತೆಗೆ ಕೂಡಿ ಮುಂದಕ್ಕೆ ಸಾಗಿ. ಎದುರಾಳಿಗಳು ಶಾಂತರಾಗಲಿದ್ದಾರೆ. ನೆನೆಗುದಿಗೆ ಬಿದ್ದ ಕೆಲಸಗಳನ್ನು ಮುಂದಕ್ಕೆ ಕೊಂಡೊಯ್ಯಿರಿ.
4. ಧನು ರಾಶಿ- ಧೈರ್ಯ, ಶೌರ್ಯ ಮತ್ತು ಸಂಪರ್ಕ ಉತಮವಾಗಿರಲಿದೆ. ಒಳ್ಳೆಯ ಸುದ್ದಿ ಸಿಗಲಿದೆ. ಉತ್ತಮ ಕ್ಷಣಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವಿರಿ. ಓದುತ್ತಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಹೊಸ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಮನೆಯಲ್ಲ್ಲಿ ಸೌಖ್ಯದ ವಾತಾವರಣ ಇರಲಿದೆ. ಸಂಪನ್ನ್ಮೂಲಗಳು ವೃದ್ಧಿಯಾಗಲಿವೆ. ಭಾವುಕತೆ ಅಥವಾ ಅತಿ ಉತ್ಸಾಹದ ಮೇಲೆ ನಿಯಂತ್ರಣ ಅಗತ್ಯ. ಶಿಸ್ತನ್ನು ಪಾಲಿಸಿ. ಆರ್ಥಿಕ ವ್ಯವಹಾರಗಳಲ್ಲಿ ಧೈರ್ಯ ಹೆಚ್ಚಾಗಲಿದೆ. ಹಿರಿಯರ ಸಲಹೆಯನ್ನು ಗಮನದಲ್ಲಿಟ್ಟುಕೊಳ್ಳಿ. ಯಾತ್ರೆಯ ಅವಕಾಶಗಳು ಒದಗಿಬರಲಿವೆ. ಬಂಧು-ಮಿತ್ರರ ಜೊತೆಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)