ಇಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಕೋಟಿ ಕೋಟಿ ರೂಪಾಯಿಗಳಷ್ಟು ಹಣವಿದೆ. ಮಾತ್ರವಲ್ಲ ಈ ಹಳ್ಳಿ ಯಾವ ನಗರಕ್ಕೂ ಕಡಿಮೆಯಿಲ್ಲ.
ನವದೆಹಲಿ : ನಾವು ಆಗಾಗ ವಿಶ್ವದ ಶ್ರೀಮಂತ ಜನರ ಬಗ್ಗೆ ಮಾತನಾಡುತ್ತೇವೆ. ವಿಶ್ವದ ಶ್ರೀಮಂತ ಜನರ ಪಟ್ಟಿಯನ್ನು ಕೂಡಾ ನೋಡುತ್ತೇವೆ. ಆದರೆ ಇಡೀ ಹಳ್ಳಿಯಲ್ಲಿರುವ ಎಲ್ಲರು ಶ್ರೀಮಂತರೇ ಅನ್ನುವುದನ್ನು ಯಾವತ್ತಾದರೂ ಕೇಳಿದ್ದೀರಾ? ಹೌದು ಇಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಕೋಟಿ ಕೋಟಿ ರೂಪಾಯಿಗಳಷ್ಟು ಹಣವಿದೆ. ಮಾತ್ರವಲ್ಲ ಈ ಹಳ್ಳಿ ಯಾವ ನಗರಕ್ಕೂ ಕಡಿಮೆಯಿಲ್ಲ. ನಗರವನ್ನೂ ಮೀರಿಸುವ ಸೌಕರ್ಯ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ಗ್ರಾಮವು ಚೀನಾದ ಜಿಯಾಂಗ್ಸು ರಾಜ್ಯದಲ್ಲಿದೆ. ಈ ಹಳ್ಳಿಯ ಹೆಸರು ವಕ್ಷಿ. ಚೀನಾದ ಈ ಹಳ್ಳಿಯಲ್ಲಿ ದೇಶದ ರಾಜಧಾನಿಯಲ್ಲಿರುವ ಎಲ್ಲಾ ಸೌಲಭ್ಯಗಳು ಸಿಗಲಿವೆ.
ಸೌಲಭ್ಯಗಳ ದೃಷ್ಟಿಯಿಂದ ಇದನ್ನು ಸೂಪರ್ ವಿಲೇಜ್ ಎಂದು ಹೆಸರಿಸಲಾಗಿದೆ. ಗ್ರಾಮದಲ್ಲಿ 72 ಅಂತಸ್ತಿನ ಗಗನಚುಂಬಿ ಕಟ್ಟಡ, ಹೆಲಿಕಾಪ್ಟರ್ ಟ್ಯಾಕ್ಸಿಗಳು, ಥೀಮ್ ಪಾರ್ಕ್ ಮತ್ತು ಐಷಾರಾಮಿ ವಿಲ್ಲಾಗಳಿವೆ. ಗ್ರಾಮದಲ್ಲಿ ಲಭ್ಯವಿರುವ ಈ ಸೌಲಭ್ಯಗಳು ನಗರಗಳಿಗಿಂತ ಭಿನ್ನವಾಗಿವೆ.
ಈ ಗ್ರಾಮದಲ್ಲಿ ಸುಮಾರು ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಖಾತೆಯಲ್ಲಿ ಒಂದು ಮಿಲಿಯನ್ ಯುವಾನ್ ಅಂದರೆ ಒಂದು ಕೋಟಿಗಿಂತ ಹೆಚ್ಚು ಠೇವಣಿ ಇದೆ ಎನ್ನಲಾಗಿದೆ. ಇದಲ್ಲದೆ, ಪ್ರತಿ ಕುಟುಂಬಕ್ಕೆ ಗ್ರಾಮದಲ್ಲಿ ನೆಲೆಸಲು ಪ್ರಾಧಿಕಾರದಿಂದ ಕಾರು ಮತ್ತು ವಿಲ್ಲಾ ನೀಡಲಾಗಿದೆ. ಆದರೆ ಈ ಹಳ್ಳಿಯನ್ನು ತೊರೆಯುವುದಾದರೆ ಎಲ್ಲಾ ಸೌಕರ್ಯಗಳನ್ನು ಹಿಂದಿರುಗಿಸಬೇಕಾಗುತ್ತದೆ.
ವಕ್ಷಿಯನ್ನು ಬಹು ಮಿಲಿಯನ್ ಡಾಲರ್ ಕಂಪನಿಗಳ ಭದ್ರಕೋಟೆಯೆಂದು ಪರಿಗಣಿಸಲಾಗಿದೆ. ಇದರಲ್ಲಿ ಪ್ರಮುಖ ಕಂಪನಿಗಳಾದ ಸ್ಟೀಲ್ ಮತ್ತು ಶಿಪ್ಪಿಂಗ್ ಸೇರಿವೆ. ಹಳ್ಳಿಯ ಎಲ್ಲಾ ಮನೆಗಳು ಬಹುತೇಕ ಹೆಚ್ಚಿನ ಮನೆಗಳು ಒಂದೇ ರೀತಿಯಾಗಿವೆ. ಇವೆಲ್ಲವೂ ಹೊರಗಿನಿಂದ ಹೋಟೆಲ್ನಂತೆ ಕಾಣುತ್ತವೆ. ಗ್ರಾಮದಲ್ಲಿ ಹೆಲಿಕಾಪ್ಟರ್, ಟ್ಯಾಕ್ಸಿ ಮತ್ತು ಥೀಮ್ ಪಾರ್ಕ್ ಇವೆ.
ದೀಪಗಳಿಂದ ಮಿನುಗುತ್ತಿರುವ ಹಳ್ಳಿಯ ಬೀದಿಗಳು ಎಲ್ಲರನ್ನು ಆಕರ್ಷಿಸುತ್ತವೆ. ಯಶಸ್ಸಿನ ಪರಾಕಾಷ್ಠೆಯನ್ನು ತಲುಪಿದ ಈ ಗ್ರಾಮವು ಒಂದು ಕಾಲದಲ್ಲಿ ಬಹಳ ಬಡವಾಗಿತ್ತು. ಗ್ರಾಮದ ಪ್ರಗತಿ ಮತ್ತು ಯಶಸ್ಸಿನ ಮನ್ನಣೆ ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಕಾರ್ಯದರ್ಶಿ ವೂ ರೆನ್ಬೋಗೆ ಸಲ್ಲುತ್ತದೆ.