Aditya Mandal Daan: ಕುಂಡಲಿಯಲ್ಲಿ ರಾಜಯೋಗ ಸೃಷ್ಟಿಸುತ್ತವೆ ಈ ದಾನ, ಸೂರ್ಯನ ಹಾಗೆ ಹೊಳೆಯುತ್ತದೆ ಅದೃಷ್ಟ!

ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ವಿವಿಧ ರೀತಿಯ ದಾನಗಳಿವೆ. ಸನಾತನ ಧರ್ಮದಲ್ಲಿ ಅನೇಕ ರೀತಿಯ ದಾನಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಆದಿತ್ಯ ಮಂಡಲ ದಾನ ಕೂಡ ಒಂದು. ಈ ದಾನವನ್ನು ಮಾಡುವುದರಿಂದ ಸೂರ್ಯದೇವ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಮೇಲೆ ತನ್ನ ಅಪಾರ ಕೃಪಾದೃಷ್ಟಿಯನ್ನು ಬೀರುತ್ತಾನೆ.

Aditya Mandal Daan: ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ವಿವಿಧ ರೀತಿಯ ದಾನಗಳಿವೆ. ಸನಾತನ ಧರ್ಮದಲ್ಲಿ ಅನೇಕ ರೀತಿಯ ದಾನಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಆದಿತ್ಯ ಮಂಡಲ ದಾನ ಕೂಡ ಒಂದು. ಈ ದಾನವನ್ನು ಮಾಡುವುದರಿಂದ ಸೂರ್ಯದೇವ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಮೇಲೆ ತನ್ನ ಅಪಾರ ಕೃಪಾದೃಷ್ಟಿಯನ್ನು ಬೀರುತ್ತಾನೆ.

 

ಇದನ್ನೂ ಓದಿ-ಮಾರ್ಚ್ 22 ರಂದು ಮೀನ ರಾಶಿಯಲ್ಲಿ ಗುರು-ಚಂದ್ರರ ಮೈತ್ರಿ, ಹೊಸ ವರ್ಷದಲ್ಲಿ 3 ರಾಶಿಗಳ ಜನರ ಮೇಲೆ ಭಾರಿ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಆದಿತ್ಯ ಮಂಡಲದ ದಾನವನ್ನು ಅತ್ಯಂತ ಪ್ರಭಾವಶಾಲಿ ದಾನ ಎಂದು ಪರಿಗಣಿಸಲಾಗಿದೆ. ಇದನ್ನು  ಮಾಡುವುದರಿಂದ ಜಾತಕದಲ್ಲಿನ ಹಲವು ರೀತಿಯ ದೋಷಗಳು ನಿವಾರಣೆಯಾಗುತ್ತದೆ ಮತ್ತು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ.  

2 /5

2. ಆದಿತ್ಯ ಮಂಡಲ ದಾನದ ವಿಧಾನವನ್ನು ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳಿದ್ದಾನೆ. ಈ ದಾನದಲ್ಲಿ ಮೊದಲು ಬಾರ್ಲಿಯಲ್ಲಿ ಬೆಲ್ಲವನ್ನು ಬೆರೆಸಿ ನಂತರ, ಸೌರ ವೃತ್ತದ ಆಕಾರದ ಪುವಾವನ್ನು (ಒಂದು ಪ್ರಕಾರದ ಸಿಹಿ) ಹಸುವಿನ ತುಪ್ಪದಲ್ಲಿ ತಯಾರಿಸಲಾಗುತ್ತದೆ. ಇದರ ನಂತರ, ಸೂರ್ಯನನ್ನು ಪೂಜಿಸಲಾಗುತ್ತದೆ. ಈಗ ಸೂರ್ಯನ ಮುಂದೆ ಮುಂದೆ ಕೆಂಪು ಚಂದನದ ಮಂಟಪವನ್ನು ತಯಾರಿಸಲಾಗುತ್ತದೆ. ಅದರ ಮೇಲೆ ಸೌರ ವೃತಾಕಾರದ ಪೂವಾವನ್ನು ಅದರ ಮೇಲೆ ಇರಿಸಲಾಗುತ್ತದೆ.  

3 /5

3. ಪೂಜೆ ಇತ್ಯಾದಿಗಳ ಮುಗಿದ ಬಳಿಕ ಬ್ರಾಹ್ಮಣನನ್ನು ಕರೆಯಬೇಕು. ಇದರ ನಂತರ ಅವರಿಗೆ ಕೆಂಪು ವಸ್ತ್ರ, ದಕ್ಷಿಣೆ ಮತ್ತು ಆ ಸೂರ್ಯ ವೃತಾಕಾರದ ಪೂವಾವನ್ನು ದಾನ ಮಾಡಬೇಕು. ದಾನ ಮಾಡುವಾಗ ಒಂದೊಂದು ಮಂತ್ರವನ್ನು ಪಠಿಸಬೇಕು. ಈ ಮಂತ್ರದಿಂದ ದಾನ ಮಾಡುವುದರಿಂದ ಪುಣ್ಯ ಸಿಗುತ್ತದೆ.  

4 /5

4. ಅ) ಮಂತ್ರ: ಆದಿತ್ಯತೇಜಸೋತ್ಪನ್ನಂ ರಜತಂ ವಿಧಿನಿರ್ಮಿತಂ ।  ಬ) ಶ್ರೇಯಸೇ ಮಮ್ ವಿಪ್ರ ತ್ವಂ ಪ್ರತಿಗ್ರಹೇಣದಮುತ್ತಮಂ।  

5 /5

5. ಸೂರ್ಯ ದೇವರನ್ನು ಮೆಚ್ಚಿಸಲು ಈ ದಾನ ಅತ್ಯಂತ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಸೂರ್ಯ ದೇವ ಈ ದಾನದಿಂದ ಪ್ರಸನ್ನನಾಗಿ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಸೂರ್ಯನ ಕೃಪೆಯಿಂದ ದಾನಿಯ ಎಲ್ಲಾ ಪಾಪಗಳೂ ನಾಶವಾಗುತ್ತವೆ. ಇದಾದ ನಂತರ ಅವನು ರಾಜನಂತೆ ಜೀವನ ನಡೆಸಲು ಪ್ರಾರಂಭಿಸುತ್ತಾನೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)