PNR ಸಂಖ್ಯೆಯು 10-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು ಅದನ್ನು ಕಾಯ್ದಿರಿಸಲಾದ ಪ್ರತಿ ಟಿಕೆಟ್ಗೆ ನೀಡಲಾಗುತ್ತದೆ.
ಬೆಂಗಳೂರು : ರೈಲಿನಲ್ಲಿ ಪ್ರಯಾನಿಸುವ ಸಲುವಾಗಿ ಟಿಕೆಟ್ ತೆಗೆದುಕೊಂಡಾಗ, ಆ ಟಿಕೆಟ್ನಲ್ಲಿ 10 ಅಂಕೆಗಳ PNR ಸಂಖ್ಯೆಯನ್ನು ಮುದ್ರಿಸಲಾಗುತ್ತದೆ. ಇದು ಕೇವಲ ಒಂದು ಸಂಖ್ಯೆಯಲ್ಲ. , ಈ ಸಂಖ್ಯೆಯು ಅನೇಕ ಉಪಯೋಗಗಳನ್ನು ಹೊಂದಿದೆ. PNR ಸಂಖ್ಯೆಯ ಪೂರ್ಣ ರೂಪ ಅಂದರೆ ಪ್ಯಾಸೆಂಜರ್ ನೇಮ್ ರೆಕಾರ್ಡ್. ಈ ಸಂಖ್ಯೆಯು ಉಪಯುಕ್ತ ಸಂಖ್ಯೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
PNR ಸಂಖ್ಯೆಯು 10-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು ಅದನ್ನು ಕಾಯ್ದಿರಿಸಲಾದ ಪ್ರತಿ ಟಿಕೆಟ್ಗೆ ನೀಡಲಾಗುತ್ತದೆ. ಇದು ಪ್ರಯಾಣಿಕ ಅಥವಾ ಪ್ರಯಾಣಿಕರ ಜೊತೆಯಲ್ಲಿರುವ ಗುಂಪಿನ ಪ್ರಯಾಣದ ವಿವರವನ್ನು ಒಳಗೊಂಡಿರುತ್ತದೆ.
ಪಿಎನ್ಆರ್ ಸಂಖ್ಯೆಯಿಂದ ಟಿಕೆಟ್ನ ಸ್ಟೇಟಸ್ ತಿಳಿಯುತ್ತದೆ. ಅಂದರೆ, PNR ಸಂಖ್ಯೆಯು ಕಾಯ್ದಿರಿಸಿದ ರೈಲು ಟಿಕೆಟ್ನ ಪ್ರಸ್ತುತ ಸ್ಥಿತಿಯನ್ನು ದೃಢೀಕರಿಸಿ, ವೈಟಿಂಗ್ ಲಿಸ್ಟ್ ಅಥವಾ RAC ಅನ್ನು ತೋರಿಸುತ್ತದೆ.
ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ ಡೇಟಾಬೇಸ್ ಅನ್ನು ನಡೆಸುತ್ತದೆ. ಇದರಲ್ಲಿ ಪ್ರಯಾಣಿಕರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಐಆರ್ಸಿಟಿಸಿ ವೆಬ್ಸೈಟ್, ಖಾಸಗಿ ಟ್ರಾವೆಲ್ ವೆಬ್ಸೈಟ್ಗಳು ಅಥವಾ ಟಿಕೆಟ್ ಕೌಂಟರ್ಗಳಲ್ಲಿ ಒಬ್ಬ ವ್ಯಕ್ತಿಯು ಭಾರತೀಯ ರೈಲ್ವೆಗೆ ಟಿಕೆಟ್ ಖರೀದಿಸಿದಾಗ ಪ್ರತಿ ಬಾರಿಯೂ ಸಿಸ್ಟಮ್ 10-ಅಂಕಿಯ PNR ಸಂಖ್ಯೆಯನ್ನು ಜನರೇಟ್ ಮಾಡುತ್ತದೆ.
ಒಂದು PNR ಸಂಖ್ಯೆಗೆ ಗರಿಷ್ಠ ಆರು ಪ್ರಯಾಣಿಕರು ಮಾತ್ರ ಸೇರಬಹುದು. ಅಂದರೆ, ಒಮ್ಮೆ ಗರಿಷ್ಠ ಆರು ಜನರಿಗೆ ಟಿಕೆಟ್ ಕಾಯ್ದಿರಿಸಬಹುದು.
PNR ಸಂಖ್ಯೆಯಲ್ಲಿ, ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಬರ್ತ್ ಆದ್ಯತೆ, ರೈಲು ಸಂಖ್ಯೆ, ದಿನಾಂಕ, ಬೋರ್ಡಿಂಗ್ ನಿಲ್ದಾಣ, ವರ್ಗ, ಕೋಟಾ ಇತ್ಯಾದಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.