Income Tax Notice: ಹೆಂಡತಿ ಕೈಗೆ ಅಥವಾ ಬ್ಯಾಂಕ್ ಖಾತೆಗೆ ಹಣ ಹಾಕಿಬಿಟ್ಟರೆ ನನಗೆ ಬರುವ ಆದಾಯ ತೆರಿಗೆ ಕಮ್ಮಿ ಆಗಿಬಿಡುತ್ತದೆ ಅಂದುಕೊಳ್ಳಬೇಡಿ.
Income Tax Rules 2025: ಆದಾಯ ಮೂಲ ಇಲ್ಲದೆ ನಿಗದಿತ ಮೌಲ್ಯಕ್ಕಿಂತ ಹೆಚ್ಚು ಹಣದ ವಹಿವಾಟು ಮಾಡಿದರೆ ಅಥವಾ ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿದ್ದರೆ ಅವರು ಕೂಡ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಆದಾಯ ತೆರಿಗೆ ಕಾನೂನಿನ ಕೆಲವು ವಿಶೇಷ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಗಂಡ ಮತ್ತು ಹೆಂಡತಿ ನಡುವಿನ ನಗದು ವ್ಯವಹಾರ ಮತ್ತು ಬ್ಯಾಂಕ್ ವ್ಯವಹಾರವೂ ಅಂದರೆ ನಿಗದಿತ ಮೌಲ್ಯ ಮೀರಿದರೆ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಆದಾಯ ತೆರಿಗೆ ಕಾಯ್ದೆಯ ನಿಯಮಗಳ ಅಡಿಯಲ್ಲಿ ಬರುವ ಸೆಕ್ಷನ್ 269SS ಹಾಗು 269T ಗಳನ್ನು ಪಾಲನೆ ಮಾಡುವುದು ಬಹಳ ಮುಖ್ಯವಾದ ಸಂಗತಿ.
ಬ್ಲ್ಯಾಕ್ ಮನಿ ವ್ಯವಹಾರ ನಿಲ್ಲಿಸಲು ಸೆಕ್ಷನ್ 269SS ಹಾಗು 269T ಮೂಲಕ ನಗದು ವಹಿವಾಟನ್ನು ನಿಯಂತ್ರಣ ಮಾಡಲಾಗುತ್ತದೆ. 269SS ಸೆಕ್ಷನ್ ಪ್ರಕಾರ ಗಂಡನಾದವನು ಹೆಂಡತಿಗೆ ನಗದು ರೂಪದಲ್ಲಿ 20 ಸಾವಿರ ರೂಪಾಯಿ ಮಾತ್ರ ಕೊಡಬಹುದು.
269T ಸೆಕ್ಷನ್ ಪ್ರಕಾರ 20 ಸಾವಿರಕ್ಕಿಂತ ಹೆಚ್ಚಿನ ಹಣ ನೀಡಬೇಕಾದರೆ ಅದನ್ನು ಬ್ಯಾಂಕಿಂಗ್ ಮೂಲಕ ಪಾವತಿಸಬೇಕು. ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಪ್ರದರ್ಶಿಸಬೇಕು ಎನ್ನುವುದು ಇದರ ಉದ್ದೇಶವಾಗಿದೆ.
ಗಂಡನಾದವನು ಮನೆಯ ನಿರ್ವಹಣೆಗಾಗಿ ಅಥವಾ ಉಡುಗೊರೆಯಾಗಿ ಕೊಡುವ ಹಣಕ್ಕೆ ಯಾವುದೇ ರೀತಿಯ ತೆರಿಗೆ ಹೊಣೆಗಾರಿಕೆ ಇಲ್ಲ. ಇದನ್ನು ಪತಿಯ ಆದಾಯ ಎಂದು ಪರಿಗಣಿಸಲಾಗುತ್ತದೆ. ಅದರಿಂದ ಹೆಂಡತಿ ತೆರಿಗೆ ಕಟ್ಟಬೇಕಾಗಿಲ್ಲ.
ಆದರೆ ಹೆಂಡತಿಯು ಗಂಡ ಕೊಟ್ಟ ಹಣವನ್ನು ಸ್ಥಿರ ಠೇವಣಿ, ಷೇರು ಮಾರುಕಟ್ಟೆ ಮತ್ತು ಅಸ್ತಿ ಖರೀದಿಗಾಗಿ ವಿನಿಯೋಗಿಸಿ ಅದರಿಂದ ಹಣ ಗಳಿಸಿದರೆ ಆಗ ಅದು ತೆರಿಗೆ ವ್ಯಾಪ್ತಿಗೆ ಬರುತ್ತದೆ.
ಗಂಡನ ಹಣ ಬಳಸಿಕೊಂಡು ಹೆಂಡತಿ ಯಾವುದೇ ರೀತಿಯಲ್ಲಿ ಹಣ ಸಂಪಾದಿಸಿದರೆ ಅದು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಉದಾಹರಣೆಗೆ ಗಂಡನ ಹಣದಿಂದ ಆಸ್ತಿ ಖರೀದಿಸಿ ಬಾಡಿಗೆ ಪಡೆಯುವುದು.
ಗಂಡನ ಹಣದಿಂದ ಆಸ್ತಿ ಖರೀದಿಸಿ ಬಾಡಿಗೆ ಪಡೆದರೆ, ಬಾಡಿಗೆ ಹಣವನ್ನು ಹೆಂಡತಿಯ ಆದಾಯ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಮಾತ್ರ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ.
ಗಂಡ ಹೆಂಡತಿ ನಡುವೆ ನಡೆಯುವ ನಗದು ವಹಿವಾಟಿನ ಮೇಲೆ ನೇರ ತೆರಿಗೆ ನಿಯಮವಿಲ್ಲ, ಆದರೆ ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳನ್ನು ಅನುಸರಿಸುವುದು ಮುಖ್ಯ. ನಗದು ವಹಿವಾಟಿನಲ್ಲಿ ಪಾರದರ್ಶಕತೆ ಮತ್ತು ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಇರುವ ಸುಲಭವಾದ ಮಾರ್ಗ. ಆದಾಗ್ಯೂ, ತೆರಿಗೆ ಮಿತಿಗಿಂತ ಹೆಚ್ಚಿನ ಹಣ ವಹಿವಾಟು ನಡೆಸಿದಲ್ಲಿ, ಅದಕ್ಕೆ ತೆರಿಗೆ ಪಾವತಿಸದೆ ಇದ್ದಲ್ಲಿ ಆದಾಯ ತೆರಿಗೆ ಇಲಾಖೆ ನೊಟೀಸ್ ನೀಡಬಹುದು.