Interesting Facts - ವಿಶ್ವದಲ್ಲಿ ಕೊರೊನಾವೈರಸ್ (Coronavirus) ನಿಂದ ಉದ್ಭವಿಸಿದ್ದ ಪರಿಸ್ಥಿತಿ ಸುಧಾರಿಸಿದ ನಂತರ, ಪ್ರವಾಸೋದ್ಯಮವು (Tourism) ಮತ್ತೆ ಪ್ರವರ್ಧಮಾನಕ್ಕೆ ನಿಧಾನಕ್ಕೆ ಬರುತ್ತಿದೆ. ಭಾರತದಲ್ಲಿ ಪ್ರವಾಸೋದ್ಯಮವೂ (Tourism Industry) ವೇಗವನ್ನು ಪಡೆಯುತ್ತಿದೆ.
Interesting Facts - ವಿಶ್ವದಲ್ಲಿ ಕೊರೊನಾವೈರಸ್ (Coronavirus) ನಿಂದ ಉದ್ಭವಿಸಿದ್ದ ಪರಿಸ್ಥಿತಿ ಸುಧಾರಿಸಿದ ನಂತರ, ಪ್ರವಾಸೋದ್ಯಮವು (Tourism) ಮತ್ತೆ ಪ್ರವರ್ಧಮಾನಕ್ಕೆ ನಿಧಾನಕ್ಕೆ ಬರುತ್ತಿದೆ. ಭಾರತದಲ್ಲಿ ಪ್ರವಾಸೋದ್ಯಮವೂ (Tourism Industry) ವೇಗವನ್ನು ಪಡೆಯುತ್ತಿದೆ. ಆದರೆ ಭಾರತದ ಒಂದು ರಾಜ್ಯದಿಂದ ಮಾತ್ರ ಭಾರಿ ಪ್ರಮಾಣದಲ್ಲಿ ಜನರು ಪ್ರವಾಸ (Travel) ಕೈಗೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ಕರ್ನಾಟಕದಿಂದ ಅತಿ ಹೆಚ್ಚು ಜನರು ಪ್ರವಾಸ ಕೈಗೊಳ್ಳುತ್ತಿದ್ದಾರೆ - ಥಾಮಸ್ ಕುಕ್ ಇಂಡಿಯಾ ಪ್ರಕಾರ, ಕರೋನಾ ನಂತರದ ಪರಿಸ್ಥಿತಿಯಲ್ಲಿ, ಕರ್ನಾಟಕದಿಂದ (Karnataka) ಜನರು (Tourists) ಗರಿಷ್ಠ ಸಂಖ್ಯೆಯಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಕಂಪನಿಯ ಪ್ರಕಾರ, ಕರ್ನಾಟಕದಿಂದ ದೇಶದಲ್ಲೇ ಗರಿಷ್ಠ ಹಾಲಿಡೇ ಬಿಸಿನೆಸ್ (Holiday Business) ನಡೆಯುತ್ತಿದೆ. ಜನರು ನಿರಂತರವಾಗಿ ಮನೆಗಳಲ್ಲಿ ಇದ್ದು ಬೇಸರಗೊಂಡಿದ್ದಾರೆ ಮತ್ತು ಇದೀಗ ಅವರು ಕೆಲವು ದಿನಗಳವರೆಗೆ ಫ್ರೀಯಾಗಿದ್ದುಕೊಂಡು (Holiday) ಪ್ರವಾಸದ ಆನಂದ ಪಡೆಯಲು (Favourate Holiday Destination) ಬಯಸುತ್ತಿದ್ದಾರೆ.
2. ಕಳೆದ 18 ತಿಂಗಳುಗಳವರೆಗೆ ಕಠಿಣ ನಿರ್ಬಂಧನೆಯಲ್ಲಿ ಕಾಲ ಕಳೆದ ಜನರು - ಕಂಪನಿಯ ಪ್ರಕಾರ, ಕೊರೊನಾವೈರಸ್‌ನಿಂದಾಗಿ (Corona) ಕಳೆದ 18 ತಿಂಗಳುಗಳಿಂದ ಜನರು ಕಟ್ಟುನಿಟ್ಟಾದ ನಿರ್ಬಂಧಗಳು ಮತ್ತು ಲಾಕ್‌ಡೌನ್‌ನಂತಹ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿದ್ದಾರೆ. ಆದರೆ ಇದೀಗ ಹೆಚ್ಚುತ್ತಿರುವ ವ್ಯಾಕ್ಸಿನೇಷನ್ ಮತ್ತು ಚಿಕಿತ್ಸಾ ಸೌಲಭ್ಯಗಳಿಂದಾಗಿ ದೇಶದ ಸ್ಥಿತಿ ಸುಧಾರಿಸಿದೆ. ಹೀಗಿರುವಾಗ ಜನರಲ್ಲಿ ಹೊರಹೋಗಲು ಮತ್ತು ಪ್ರಯಾಣಿಸಲು ಅಪಾರ ಆಸೆ ಇತ್ತು. ಅದನ್ನು ಇದೀಗ ಜನರು ಪ್ರವಾಸ ಕೈಗೊಳ್ಳುವ ಮೂಲಕ ಪೂರೈಸಿಕೊಳ್ಳುತ್ತಿದ್ದಾರೆ.
3. ಬೆಂಗಳೂರಿನಿಂದ ಅತಿ ಹೆಚ್ಚಿನ ಸಂಖೆಯಲ್ಲಿ ಜನ ಪ್ರವಾಸ ಕೈಗೊಳ್ಳುತ್ತಿದ್ದಾರೆ - ಕಂಪನಿಯ ಪ್ರಕಾರ, ಮುಂಬರುವ ಹಬ್ಬಗಳು ಮತ್ತು ಚಳಿಗಾಲದ ಹಿನ್ನೆಲೆ, ಬುಕಿಂಗ್ ಗಾಗಿ ವಿಚಾರಣೆಯ ಕರೆಗಳು ನಿರಂತರವಾಗಿ ಬರುತ್ತಿವೆ. ಹೀಗಾಗಿ ಬಿಸಿನೆಸ್ ಕೂಡ ನಿಧಾನವಾಗಿ ಮೊದಲಿನ ಹಂತಕ್ಕೆ ಸಾಗುತ್ತಿದೆ. ಈ ವಿಚಾರದಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಪ್ರವಾಸೋದ್ಯಮ ವ್ಯವಹಾರದ ತ್ವರಿತ ಚೇತರಿಕೆ ಇಲ್ಲಿಂದ (ಬೆಂಗಳೂರು) ನಡೆಯುತ್ತಿದೆ. ಅಲ್ಲಿ ಕಂಪನಿಯ ವ್ಯವಹಾರವು ಕರೋನಾ ಮೊದಲು ಪರಿಸ್ಥಿತಿಯ 55 ಪ್ರತಿಶತವನ್ನು ತಲುಪಿತ್ತು. ಅಂದರೆ ಅಲ್ಲಿನ ಜನ ಹೆಚ್ಚು ಸುತ್ತಾಡಲು ಹೊರ ಹೋಗುತ್ತಿದ್ದಾರೆ.
4. ಹೊಸ-ಹೊಸ ತಾಣಗಳಿಗೆ ಭೇಟಿ ನೀಡಲು ಬಯಸುತ್ತಿದ್ದಾರೆ ಜನ - Leisure Travel ಉಪಾಧ್ಯಕ್ಷ ಸಂತೋಷ್ ಕಣ್ಣಾ ಅವರ ಪ್ರಕಾರ, ಪರಿಸ್ಥಿತಿ ಸುಧಾರಿಸಿದ ನಂತರ ಹೊರಗೆ ಸುತ್ತಾಡಲು ಆರಂಭಿಸುವವರಲ್ಲಿ ಬೆಂಗಳೂರಿನವರು ಮುಂಚೂಣಿಯಲ್ಲಿದ್ದಾರೆ. ತಮ್ಮ ಕಂಪನಿಯ ಒಟ್ಟು ಬುಕಿಂಗ್‌ನಲ್ಲಿ 72% ಬೆಂಗಳೂರಿನಿಂದ ಬರುತ್ತಿದೆ. ಅಲ್ಲಿನ ಜನರು ಹೊಸ ತಾಣಗಳಿಗೆ ಹೋಗಿ ಸುತ್ತಾಡಲು ಬಯಸುತ್ತಿದ್ದಾರೆ. ಅವರು ಕರೋನಾ ಅವಧಿಯ ನಂತರದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಆನಂದಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
5. ವಿದೇಶಗಳಲ್ಲಿನ ಈ ತಾಣಗಳು ಕೂಡ ಭಾರಿ ಬೇಡಿಕೆಯಲ್ಲಿವೆ - ಸಂತೋಷ ಕಣ್ಣಾ ಹೇಳುವ ಪ್ರಕಾರ ಕರ್ನಾಟಕದ ಜನರ ಮೊದಲ ಆಯ್ಕೆ ಕಡಿಮೆ ಬಜೆಟ್ ನಲ್ಲಿ ವಿಭಿನ್ನ ತಾಣಗಳನ್ನು ಸುತ್ತುವುದಾಗಿದೆ. ಇವುಗಳಲ್ಲದೆ ಹೆಚ್ಚಿನ ಜನರು ಮಾಲ್ಡೀವ್ಸ್, ತುರ್ಕಿ, ಯುರೋಪ್ ಹಾಗೂ ದುಬೈ ಸುತ್ತಲು ಬುಕಿಂಗ್ ಮಾಡುತ್ತಿದ್ದಾರೆ. ಹೊರಗಿನ ದೇಶಕ್ಕೆ ಸುತ್ತಾಡಲು ಬಯಸುವವರಲ್ಲಿ ಫ್ಯಾಮಿಲಿ ವ್ಯಕ್ತಿಗಳು, ಜೋಡಿಗಳು ಹಾಗೂ ನೌಕರವರ್ಗದವರು ಇತ್ಯಾದಿಗಳು ಶಾಮೀಲಾಗಿದ್ದಾರೆ.