Acಯಿಂದ ಸ್ಲೀಪರ್ ವರೆಗೆ ಭಾರತೀಯ ರೈಲಿನ ಸೀಟುಗಳು ಹೇಗಿರುತ್ತದೆ?

ರೈಲಿನಲ್ಲಿ ವಿವಿಧ ಕೋಚ್‌ಗಳಲ್ಲಿ ವಿವಿಧ ರೀತಿಯ ಸೀಟುಗಳಿವೆ.

ಬೆಂಗಳೂರು : ಭಾರತೀಯ ರೈಲ್ವೇಯನ್ನು ದೇಶದ ಜೀವನಾಡಿ ಎಂದೇ  ಕರೆಯಲಾಗುತ್ತದೆ. ಸಾವಿರಾರು ರೈಲುಗಳು ಪ್ರತಿದಿನ ಲಕ್ಷಗಟ್ಟಲೆ ಪ್ರಯಾಣಿಕರನ್ನು ತಮ್ಮ ಗಮ್ಯಸ್ಥಾನಕ್ಕೆ ಸೇರಿಸುತ್ತವೆ. ರೈಲಿನಲ್ಲಿ ಹಲವಾರು ರೀತಿಯ ಆಸನಗಳಿವೆ. ರೈಲಿನಲ್ಲಿ ವಿವಿಧ ಕೋಚ್‌ಗಳಲ್ಲಿ ವಿವಿಧ ರೀತಿಯ ಸೀಟುಗಳಿವೆ. ಸಾಮಾನ್ಯವಾಗಿ ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಸೀಟ್ ಗೊತ್ತಿದ್ದರೂ ಅನೇಕರಿಗೆ 1ನೇ ಎಸಿ, 2ನೇ ಎಸಿ ಮತ್ತು 3ನೇ ಎಸಿ ಕ್ಲಾಸ್ ಸೀಟುಗಳ ವ್ಯತ್ಯಾಸವೇ ಗೊತ್ತಿರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಭಾರತೀಯ ರೈಲ್ವೇಯಲ್ಲಿ ಅತ್ಯಂತ ದುಬಾರಿ ವರ್ಗವೆಂದರೆ ಎಸಿ ಫಸ್ಟ್ ಕ್ಲಾಸ್. ಅದರ ಎಲ್ಲಾ ವಿಭಾಗಗಳು 2 ಅಥವಾ 4 ಬರ್ತ್‌ಗಳನ್ನು ಹೊಂದಿವೆ. 2 ಬರ್ತ್‌ಗಳನ್ನು ಹೊಂದಿರುವ ವಿಭಾಗವನ್ನು ಕೂಪ್ ಎಂದು ಕರೆಯಲಾಗುತ್ತದೆ ಮತ್ತು 4 ಬರ್ತ್‌ಗಳನ್ನು ಹೊಂದಿರುವ ವಿಭಾಗವನ್ನು ಕ್ಯಾಬಿನ್ ಎಂದು ಕರೆಯಲಾಗುತ್ತದೆ. ಈ ಕಂಪಾರ್ಟ್‌ಮೆಂಟ್‌ಗಳ ವಿಶೇಷತೆಯೆಂದರೆ ಅವುಗಳಿಗೆ ಪ್ರತ್ಯೇಕ ಬಾಗಿಲುಗಳಿರುತ್ತವೆ. ಈ ಕೋಚ್ ನಲ್ಲಿ ಸೈಡ್ ಮತ್ತು ಮೇಲಿನ ಬರ್ತ್‌ಗಲಿರುವುದಿಲ್ಲ. ಇದಲ್ಲದೆ, ಎಲ್ಲಾ ವಿಭಾಗಗಳಲ್ಲಿ ಡಸ್ಟ್‌ಬಿನ್ ಮತ್ತು ಸಣ್ಣ ಟೇಬಲ್ ಇರುತ್ತದೆ. ಅಲ್ಲದೆ, ರೈಲಿನಲ್ಲಿ ಅಟೆಂಡರ್‌ಗೆ ಕರೆ ಮಾಡಲು ಕಂಪಾರ್ಟ್‌ಮೆಂಟ್‌ನಲ್ಲಿ ಬಟನ್ ಕೂಡಾ ಇರುತ್ತದೆ. 

2 /4

ಇದಾದ ನಂತರ  ಸೆಕೆಂಡ್ ಎಸಿ  ಕೋಚ್ ರೈಲಿನಲ್ಲಿ ಬರುತ್ತದೆ. ಅದರಲ್ಲಿ ಮಿಡಲ್ ಬರ್ತ್ ಇರುವುದಿಲ್ಲ. ಈ ಕೋಚ್ ಸೈಡ್, ಅಪ್ಪರ್ ಮತ್ತು ಲೋವೆರ್ ಸೀಟ್ ಹೊಂದಿರುತ್ತದೆ. ಈ ಎಲ್ಲಾ ಆಸನಗಳು ಸಾಕಷ್ಟು ಆರಾಮದಾಯಕವಾಗಿರುತ್ತವೆ. ಈ ರೀತಿಯಾಗಿ, ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ 6 ಆಸನಗಳಿರುತ್ತವೆ. ಈ ಬೋಗಿಗಳಲ್ಲಿಯೂ ರೈಲ್ವೇ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ. ಕೋಚ್‌ನ ಎಲ್ಲಾ ವಿಭಾಗಗಳಿಗೆ ಪರದೆಗಳನ್ನು ಅಳವಡಿಸಲಾಗಿರುತ್ತದೆ. ಪ್ರತಿ ಬರ್ತ್‌ನಲ್ಲಿ  ರೀಡಿಂಗ್ ಲೈಟ್ ಇರುತ್ತದೆ. ಪ್ರಯಾಣಿಕರಿಗೆ ದಿಂಬು, ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ನೀಡಲಾಗುತ್ತದೆ.

3 /4

ಹೆಚ್ಚಿನ ಜನರು ಥರ್ಡ್ ಎಸಿ ಕೋಚ್ ಅನ್ನು ಇಷ್ಟಪಡುತ್ತಾರೆ. ದರದ ದೃಷ್ಟಿಯಿಂದ ಈ ಕೋಚ್ ಅಗ್ಗ ಮತ್ತು ಅನುಕೂಲಕರವಾಗಿರುತ್ತದೆ. ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ 8 ಆಸನಗಳಿರುತ್ತವೆ.  ಇದರಲ್ಲಿಯೂ  ರೈಲ್ವೇ ಕಡೆಯಿಂದ ಪ್ರಯಾಣಿಕರಿಗೆ ದಿಂಬು, ಬೆಡ್ ಶೀಟ್, ಹೊದಿಕೆಗಳನ್ನೂ ನೀಡಲಾಗುತ್ತದೆ.  

4 /4

ಇದಲ್ಲದೆ, ರೈಲುಗಳಲ್ಲಿ ಸ್ಲೀಪರ್ ಕೋಚ್‌ಗಳಿವೆ. ಅದರಲ್ಲಿ ಸೀಟುಗಳು ಥರ್ಡ್ ಎಸಿಯಲ್ಲಿರುವಂತೆಯೇ ಇರುತ್ತದೆ. ಆದರೆ ಎಸಿ ಇರುವುದಿಲ್ಲ. ಭಾರತೀಯ ರೈಲ್ವೇಯು ಪ್ರಥಮ ದರ್ಜೆ, ಎಸಿ ಎಕ್ಸಿಕ್ಯುಟಿವ್ ಕ್ಲಾಸ್, ಥರ್ಡ್ ಎಸಿ ಎಕಾನಮಿ ಕ್ಲಾಸ್, ಎಸಿ ಚೇರ್ ಕಾರ್ ಮತ್ತು ಸೆಕೆಂಡ್ ಸೀಟಿಂಗ್ ಕೋಚ್‌ಗಳನ್ನು ಸಹ ನಿರ್ವಹಿಸುತ್ತದೆ.