Lawyer Jagadish statement on BBK: ಈ ಬಾರಿಯ ಬಿಗ್ ಬಾಸ್ ಕನ್ನಡ ಭಾರೀ ಟಿಆರ್‌ಪಿ ಪಡೆದುಕೊಂಡು ಜನಮನ್ನಣೆಗೆ ಪಾತ್ರವಾಗಿದೆ. ಆದರೆ ಕೆಲ ದಿನಗಳ ಹಿಂದೆ ದೊಡ್ಮನೆಯಲ್ಲಿ ಭಾರೀ ಗೊಂದಲಮಯ ವಾತಾವರಣ ನಿರ್ಮಾಣಗೊಂಡು ಕೊನೆಗೆ ಬಿಗ್‌ಬಾಸ್ ಮಧ್ಯಪ್ರವೇಶ ಮಾಡುವವರೆಗೆ ಪರಿಸ್ಥಿತಿ ಮುಂದುವರೆದಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಈ ಬಾರಿಯ ಬಿಗ್ ಬಾಸ್ ಕನ್ನಡ ಭಾರೀ ಟಿಆರ್‌ಪಿ ಪಡೆದುಕೊಂಡು ಜನಮನ್ನಣೆಗೆ ಪಾತ್ರವಾಗಿದೆ. ಆದರೆ ಕೆಲ ದಿನಗಳ ಹಿಂದೆ ದೊಡ್ಮನೆಯಲ್ಲಿ ಭಾರೀ ಗೊಂದಲಮಯ ವಾತಾವರಣ ನಿರ್ಮಾಣಗೊಂಡು ಕೊನೆಗೆ ಬಿಗ್‌ಬಾಸ್ ಮಧ್ಯಪ್ರವೇಶ ಮಾಡುವವರೆಗೆ ಪರಿಸ್ಥಿತಿ ಮುಂದುವರೆದಿತ್ತು.
ಅಷ್ಟೇ ಅಲ್ಲದೆ, ಸ್ಪರ್ಧಿಗಳು ಕೈಕೈ ಮಿಲಾಯಿಸಿಕೊಂಡು ಕಿತ್ತಾಡಿಕೊಂಡಿದ್ದರು. ಅಂತಹ ಇಬ್ಬರು ಸ್ಪರ್ಧಿಗಳಾದ ಲಾಯರ್ ಜಗದೀಶ್ ಮತ್ತು ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕಳುಹಿಸಿದ್ದರು.
ಇದೀಗ ಮನೆಯಿಂದ ಹೊರ ಬಂದ ಜಗದೀಶ್ ಅವರು, ಲೈವ್ ವಿಡಿಯೋದಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಮುಕ್ತವಾಗಿ ಹೇಳಿಕೆ ನೀಡಿದ್ದು, ಬಿಗ್ ಬಾಸ್ ಸ್ಕ್ರಿಪ್ಟೆಡ್ ಹೌದಾ? ಅಲ್ವಾ? ಎಂಬ ಪ್ರಶ್ನೆಗೆ ಉತ್ತರ ಕೂಡ ನೀಡಿದ್ದಾರೆ.
"ಬಿಗ್ಬಾಸ್‌ನಲ್ಲಿ ಏನೆಲ್ಲಾ ಆಯ್ತು ಅಂತಾ ನೀವೇ ನೋಡಿದ್ದೀರಾ. ನಾನು ನನ್ನ ಆಟವನ್ನು ಪ್ರಾಮಾಣಿಕವಾಗಿ ಆಡಿದ್ದೇನೆ. ಆದ್ರೆ ನನಗನಿಸಿದ್ದು ಏನಂದ್ರೆ... ಒಂದು ಸಣ್ಣ ಪದ ಬಳಕೆ ಮಾಡಿದೆ ಅಂತಾ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ಆದ್ರೆ ಅದೇ ರೀತಿ ಕೆಟ್ಟ ಪದಗಳನ್ನು ಬಳಕೆ ಮಾಡಿದ ಚೈತ್ರಾ ಕುಂದಾಪುರ, ತುಕಾಲಿ ಸಂತೋಷ್ ಪತ್ನಿ, ಮಂಜಣ್ಣ ಇವರನ್ನೆಲ್ಲಾ ಮಾತ್ರ ಯಾಕೆ ಒಳಗೆ ಇಟ್ಟುಕೊಂಡಿದ್ದಾರೆ? ಇದು ನನ್ನಲ್ಲಿರುವ ಪ್ರಶ್ನೆ" ಎಂದು ಲಾಯರ್ ಜಗದೀಶ್ ಕೇಳಿದ್ದಾರೆ.
"ಒಂದಂತೂ ಹೇಳಲು ಇಷ್ಟಪಡುತ್ತೇನೆ... ಬಿಗ್ ಬಾಸ್ ಎಂಬುದು ಕನ್ನಡಿ ಇದ್ದಂತೆ. ನಮ್ಮ ಭಾವನೆಗಳನ್ನು, ನಮ್ಮ ನಿಜವಾದ ಮುಖವನ್ನು, ಅಕಸ್ಮಾತ್ ಮುಖವಾಡ ಹಾಕಿಕೊಂಡಿದ್ದರೆ ಮುಖವಾಡವನ್ನು ಕಳಚಿ ನಮ್ಮನ್ನು ಜನರ ಮುಂದೆ ತೋರಿಸುವ ದೊಡ್ಡ ಕನ್ನಡಿ ಅಂತಾ ನನಗೆ ಅನಿಸುತ್ತಿದೆ" ಎಂದಿದ್ದಾರೆ
"ಈ 15 ದಿನದಲ್ಲಿ ನನ್ನ ಕೈಲಾದಷ್ಟು ಮಾಡಿದ್ದೇನೆ... ಜೊತೆಗೆ ಅಷ್ಟೇ ಪ್ರಾಮಾಣಿಕವಾಗಿದ್ದೆ, ಬಿಗ್‌ಬಾಸ್‌ಗೆ ನೀವು ಮತ್ತೊಮ್ಮೆ ಹೋಗಿ ಅಂತಿದ್ದೀರಾ ನೀವೆಲ್ಲ. ಆದ್ರೆ ನನ್ಗೆ ಆ ರೀತಿಯಾದ ನಂಬಿಕೆ ಇಲ್ಲ. ಯಾಕಂದ್ರೆ ಬಿಗ್‌ಬಾಸ್‌ಗೆ ಜಗದೀಶ್ ಮುಗಿದ ಅಧ್ಯಾಯ ಅಂತಾ ಸುದೀಪ್ ಸರ್ ಅವರೇ ಹೇಳಿದ್ದಾರೆ" ಎಂದರು.
"ಇನ್ನು ಕೆಲವರಿಗೆ ಬಿಗ್ ಬಾಸ್‌ನಲ್ಲಿ ಸ್ಕ್ರಿಪ್ಟ್ ಕೊಡುತ್ತಾರಾ ಎಂಬ ಅನುಮಾನ ಇದೆ. ನೂರಕ್ಕೆ ನೂರು ಬಿಗ್ ಬಾಸ್ ಸ್ಕ್ರಿಪ್ಟ್ ಅಲ್ಲ. ಇಲ್ಲಿ ನಾವು ಯಾವ ನಾಟಕ ಕೂಡ ಮಾಡಬೇಕಾಗಿಲ್ಲ. ಯಾವ ಪ್ರಭಾವವೂ ನಡೆಯುವುದಿಲ್ಲ. ಇಲ್ಲಿ ನ್ಯಾಯಕ್ಕೆ ಧರ್ಮಕ್ಕೆ ಬೆಲೆ ಇದೆ ಅಂತಾ ನನಗೆ ಅನಿಸಿದೆ. ನನಗೂ ಮೊದಲು ಬಿಗ್ ಬಾಸ್ ಮೇಲೆ ಅನುಮಾನ ಇತ್ತು. ಆದರೆ ಅಲ್ಲಿ ಎಲ್ಲವೂ ಟ್ರಾನ್ಸ್‌ಪರೆಂಟ್ ಆಗಿದೆ" ಎಂದು ಹೇಳಿದ್ದಾರೆ.