ʼಹರಿವರಾಸನಂʼ ಹಾಡಿನ ಹಿಂದಿದೆ ಅದ್ಭುತ ಇತಿಹಾಸ..! "ಮಣಿಕಂಠ"ನನ್ನೇ ಮಲಗಿಸುವಂತಹ ಈ ಗೀತೆ ಹುಟ್ಟಿದ್ದು ಹೇಗೆ ಗೊತ್ತೆ..?

Harivarasanam song history : 100 ವರ್ಷಗಳ ಹಿಂದೆಯೇ ರಚಿಸಲ್ಪಟ್ಟ "ಹರಿವರಾಸನಂ" ಹಾಡು ಹೇಳಿದ್ರೆ ಹರಿಹರ ಪುತ್ರ ಅಯ್ಯಪ್ಪ ನಿದ್ದೆಗೆ ಜಾರುತ್ತಾನೆ ಎನ್ನುವ ನಂಬಿಕೆ ಇದೆ. ಇಂದಿಗೂ ಶಬರಿಮಲೆಯಲ್ಲಿ ಈ ಹಾಡಿನ ನಂತರ ದೇವರ ದರ್ಶನಕ್ಕೆ ಅವಕಾಶ ಇಲ್ಲ.. ಹಾಗಿದ್ರೆ ಈ ಹಾಡಿನ ಹಿನ್ನೆಲೆ ಏನು..? ಇದನ್ನು ರಚಿಸಿದವರು ಯಾರು..? ಬನ್ನಿ ನೋಡೋಣ..

1 /9

ಅಯ್ಯಪ್ಪ ಸ್ವಾಮಿ ಭಕ್ತಿ ಪ್ರಧಾನ ಗೀತೆ "ಹರಿವರಾಸನಂ" ಬಗ್ಗೆ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ಇವುಗಳಲ್ಲಿ ಹಲವು ಭಕ್ತರ ಮನಸ್ಸಿನಲ್ಲಿ ಗೊಂದಲ ಮತ್ತು ಸಂದೇಹಕ್ಕೆ ಕಾರಣವಾಗಿವೆ. ಈ ಹಾಡು ಅಯ್ಯಪ್ಪನನ್ನ ನಿದ್ದೆಗೆ ಜಾರುವಂತೆ ಮಾಡುತ್ತೆ ಎನ್ನುವ ನಂಬಿಕೆಯೂ ಇದೆ.. ಹಾಗಾಗಿ ಇದನ್ನು ಹಗಲಿನಲ್ಲಿ ಹಾಡಬಾರದು ಎನ್ನುವ ಮಾತಿದೆ.. ಹಾಗಿದ್ರೆ ಇದು ಸತ್ಯವೇ..? ಬನ್ನಿ ತಿಳಿಯೋಣ..  

2 /9

ಈ ಅಭಿಪ್ರಾಯಗಳಿಗೆ ಯಾವುದೇ ಪುರಾವೆಗಳು ಅಥವಾ ಮೂಲಗಳಿಲ್ಲ. ಅಯ್ಯಪ್ಪನ ಮಹಿಮೆಯನ್ನು ಸಾರುವ ಅನೇಕ ಹಾಡುಗಳಿದ್ದರೂ "ಹರಿವರಾಸನಂ" ಅತ್ಯಂತ ಜನಪ್ರಿಯ ಅಯ್ಯಪ್ಪ ಗೀತೆಯಾಗಿದೆ. ಈ ಹಾಡನ್ನು ಅಯ್ಯಪ್ಪನ ಭಕ್ತೆಯಾಗಿದ್ದ ಕೊನ್ನಕಟ್ಟು ಜಾನಕಿ ಅಮ್ಮಾಳ್ ಅವರು 1923 ರಲ್ಲಿ ರಚಿಸಿದ್ದಾರೆ. ಶ್ರೀನಿವಾಸ ಅಯ್ಯರ್ ಎಂಬ ಭಕ್ತನ ಮೂಲಕ ಈ ಕೀರ್ತನೆ ಜಗತ್ತಿಗೆ ತಲುಪಿತು.   

3 /9

ಅಂದಿನಿಂದ ಇಂದಿನವರೆಗೆ ಅನೇಕ ಸಂಯೋಜಕರು ಈ ಹಾಡಿಗೆ ಸಂಗೀತ ಸಂಯೋಜಿಸಿದ್ದರೂ, ಯೇಸುದಾಸ್ ಅವರ ಧ್ವನಿಯಲ್ಲಿ ಬಂದ ಹರಿವರಾಸನಂ ಹಾಡು ಬಹಳ ಜನಪ್ರಿಯವಾಯಿತು. ಜಿ.ದೇವರಾಜನ್ ಸಂಗೀತದಲ್ಲಿ ಯೇಸುದಾಸ್ ಅವರು ಹಾಡಿರುವ ಈ ಹಾಡು 1952 ರಿಂದ ದೇವಸ್ಥಾನದಲ್ಲಿ ಪ್ರಸಾರವಾಗುತ್ತಿದೆ..   

4 /9

ಮೊದಲು ಪೂಜೆಯ ವೇಳೆ ಹರಿವರಾಸನಂ ಹಾಡನ್ನು ಹಾಡುತ್ತಿದ್ದರು. ಈ ಹಾಡು ಮುಗಿಯುವ ಹೊತ್ತಿಗೆ ನಿಧಾನವಾಗಿ ಬಾಗಿಲನ್ನು ಮುಚ್ಚಿಕೊಂಡು ಎಲ್ಲರೂ ಹೊರಗೆ ಬರುತ್ತಿದ್ದರು. ಮಲಯಾಳಿಗಳು ಇದನ್ನು 'ಸ್ಲೀಪ್ ಸಾಂಗ್' ಎಂದು ಕರೆಯುತ್ತಾರೆ ಏಕೆಂದರೆ ಇದು ಅಯ್ಯಪ್ಪನನ್ನ ನಿದ್ದೆಗೆ ಜಾರುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಯ್ಯಪ್ಪನ ನಿದ್ದೆಗೂ ಈ ಹಾಡಿಗೂ ಸಂಬಂಧವಿಲ್ಲ. ಈ ಹಾಡನ್ನು ಬರೆಯುವ ಮೊದಲು ಶಬರಿಮಲೆಗೆ ತೀರ್ಥಯಾತ್ರೆ ಮತ್ತು ಪೂಜೆ ನಡೆಯುತ್ತಿತ್ತು..  

5 /9

1923 ರಲ್ಲಿ ರಚಿತವಾದ ಈ ಕೀರ್ತನೆಯ 100ನೇ ವಾರ್ಷಿಕೋತ್ಸವವನ್ನು 2023 ರಲ್ಲಿ ಸಂಗೀತಗಾರ ಇಳಯರಾಜ ನೇತೃತ್ವದಲ್ಲಿ ಆಚರಿಸಲಾಯಿತು. ಸ್ವಾಮಿ ವಿಮೋಕಾನಂದರು 1950 ರಲ್ಲಿ ಶಬರಿಮಲೆಯಲ್ಲಿ ಈ ಕೀರ್ತನೆಯನ್ನು ಮೊದಲು ಹಾಡಿದರು. ನಂತರ, ವಿಷಣ್ಣರಾದ ವಡಕಿಲ್ಲಂ ಈಶ್ವರನ್ ನಂಬೂತಿರಿ ಅವರು ರಾತ್ರಿಯ ಹೊತ್ತಿನಲ್ಲಿ ಈ ಗೀತೆಯನ್ನು ನಿರಂತರವಾಗಿ ಪಠಿಸಲು ಪ್ರಾರಂಭಿಸಿದರು. ವಡಕಿಲ್ಲಂ ಈಶ್ವರನ್ ನಂಬೂತಿರಿಯವರು ಇದನ್ನು ಮುಂದುರೆಸಿದರು.. ನಂತರದ ಮೇಳಸಂತಿಯರು ಪಾಲಿಸುತ್ತಾ ಬಂದರು.. ಇಂದಿಗೂ ರಾತ್ರಿ 12 ಗಂಟೆಗೆ ಈ ಹಾಡನ್ನು ಹಾಡಲಾಗುತ್ತದೆ..    

6 /9

ಈ ಹಾಡನ್ನು ಬರೆದ ಭಕ್ತರು ಇದನ್ನು ನಿದ್ರೆಯ ಹಾಡಿನ ಕಲ್ಪನೆಯಿಂದ ಬರೆದಿಲ್ಲ. ರಾತ್ರಿ ಹಾಡುತ್ತಿದ್ದರಿಂದ ಈ ಗೀತೆ ಮಣಿಕಂಠನನ್ನು ಮಲಗಿಸುವ ಗೀತೆಯಾಗಿ ಪ್ರಚಾರ ಪಡೆದುಕೊಂಡಿತು.. ಆದ್ರೆ ಇದೊಂದು ಅದ್ಭುತ ಭಕ್ತಿ ಗೀತೆ.. ಹರಿಹರ ಪುತ್ರನನ್ನು ಮನದಾಳದಲ್ಲಿ ಪ್ರತಿಷ್ಠಾಪಿಸುವಂತಹ ಗೀತೆ..  

7 /9

ದೇವರು ನಿದ್ರಿಸುವುದಿಲ್ಲ.. ನಂಬಿದ ದೈವ ನಿದ್ರೆಗೆ ಜಾರಿದರೆ ಜಗತ್ತೆ ಕತ್ತಲಾಗುತ್ತದೆ.. ಹಾಗಯೇ ರಾತ್ರಿ ಹೊತ್ತು ಪಂದಳಕಂದನ ಮುಂದೆ ಹಾಡುತ್ತಿದ್ದ ಈ ಹಾಡು ಇದೀಗ ಅಯ್ಯಪ್ಪನ ಲಾಲಿ ಹಾಡಾಗಿ ಪ್ರಚಾರ ಪಡೆದಿದೆ.. ಭಕ್ತಿಯಿಂದ ಈ ಗೀತೆಯನ್ನು ಯಾವಾಗಬೇಕಾದರೂ ಹಾಡಬಹುದು..   

8 /9

ದೇಹವೇ ದೇವಾಲಯ, ಹೃದಯವೇ ದೇಗುಲ, ನಮ್ಮ ಆತ್ಮವೇ ಭಗವಂತ... ಹಾಗಾಗಿ ವಿಲ್ಲಾಳಿ ವೀರನನ್ನು ಮನದೊಳಗೆ ಇರಿಸಿ ನೀವು ಎಲ್ಲಿ ಬೇಕಾದರೂ ಭಕ್ತಿಯಿಂದ ಈ ಸ್ತುತಿಯನ್ನು ಹಾಡಬಹುದು.. ಮಹೀಷಿಗೆ ಮೋಕ್ಷ ನೀಡಿದ ಹರಿಹರ ಸುತ ನಿಮಗೆ ಒಳ್ಳೆಯದನ್ನ ಮಾಡಲಿ... "ಓಂ ಅಯ್ಯಪ್ಪ ಸ್ವಾಮಿಯೇ ನಮಃ"  

9 /9

(ಸೂಚನೆ : ಈ ಲೇಖನವನ್ನು ಸಂಪೂರ್ಣವಾಗಿ ಆಧ್ಯಾತ್ಮಿಕ ನಂಬಿಕೆಯ ಮೇಲೆ ಬರೆಯಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಅಥವಾ ವಿವರಣೆಗಳಿಲ್ಲ. ಈ ಮಾಹಿತಿಯನ್ನು Zee Kannada News ಪರಿಸೀಲನೆ ನಡೆಸಿಲ್ಲ..)