ಮೋದಿ ಸರ್ಕಾರ ಉಜ್ವಲ ಯೋಜನೆಯ ವ್ಯಾಪ್ತಿ ವಿಸ್ತರಿಸಿದೆ.
ನವದೆಹಲಿ : ಮೋದಿ ಸರ್ಕಾರ ಉಜ್ವಲ ಯೋಜನೆಯ (Ujwala Scheme) ವ್ಯಾಪ್ತಿ ವಿಸ್ತರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಒಂದು ಕೋಟಿ ಗ್ರಾಹಕರಿಗೆ ಉಜ್ವಲ ಯೋಜನೆ ಮುಟ್ಟಿಸಲು ಕಾರ್ಯತತ್ಪರವಾಗಿದೆ. ಇದೇ ವೇಳೆ ಮೋದಿ ಸರ್ಕಾರ (Modi Government) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಎಲ್ ಪಿಜಿ (LPG) ಬುಕ್ಕಿಂಗ್ ನಿಯಮ ಬದಲಾಯಿಸಿದೆ. ಇನ್ನು ಗ್ರಾಹಕರು ಎಲ್ ಪಿಜಿ ಬುಕ್ಕಿಂಗ್ ಗಾಗಿ ಮೂರು ಡೀಲರ್ ಗಳನ್ನು ಸಂಪರ್ಕಿಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಎರಡು ವರ್ಷಗಳಲ್ಲಿ ಒಂದು ಕೋಟಿ ಕನೆಕ್ಷನ್: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಪೆಟ್ರೋಲಿಯಂ ಸಚಿವಾಲಯದ ಮಾಹಿತಿ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಒಂದು ಕೋಟಿ ಗ್ರಾಹಕರಿಗೆ ಅಡುಗೆ ಅನಿಲದ ಉಚಿತ ಸಂಪರ್ಕ ಸಿಗಲಿದೆ.
ಪ್ರತಿಯೊಂದು ಮನೆಗೂ ಎಲ್ಪಿಹಜಿ ನೀಡುವ ಯೋಜನೆ : ಉಜ್ವಲ ಯೋಜನೆಯ ಮೂಲಕ ಪ್ರತಿಯೊಂದು ಮನೆಗೂ ಎಲ್ ಪಿಜಿ ಸಂಪರ್ಕ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಅತ್ಯಂತ ಕಡಿಮೆ ದಾಖಲೆಗಳನ್ನು ಕೇಳಲು ನಿರ್ಧರಿಸಲಾಗಿದೆ. ನಿವಾಸ ಪ್ರಮಾಣಪತ್ರ ಇಲ್ಲದೇ ಹೋದರೂ ಕೂಡಾ ಎಲ್ ಪಿಜಿ ಕನೆಕ್ಷನ್ ಪಡೆಯಬಹುದಾಗಿದೆ.
ಹಣಕಾಸು ವ್ಯವಸ್ಥೆ ಹೇಗೆ ಆಗಲಿದೆ.? ಉಜ್ವಲ ಯೋಜನೆಗೆ ಹೇಗೆ ಹಣಕಾಸು ಹೊಂದಿಸಲಾಗುತ್ತದೆ ಎಂಬುದನ್ನು ಸರ್ಕಾರ ಇನ್ನೂ ಹೇಳಿಲ್ಲ. ಬಜೆಟ್ ನಲ್ಲಿಇದಕ್ಕೆ ಪ್ರತ್ಯೇಕ ಅನುದಾನ ಕೂಡಾ ಇಟ್ಟಿಲ್ಲ. ಎಲ್ ಪಿಜಿ ನೀಡಲಾಗುತ್ತಿರುವ ಸಬ್ಸಿಡಿಯಿಂದ, ಹೆಚ್ಚುವರಿ ಕನೆಕ್ಷನ್ ಗೆ ತಗಲುವ ವೆಚ್ಚವನ್ನು ಸುಲಭದಲ್ಲಿ ಭರಿಸಬಹುದಾಗಿದೆ.
ಇಲ್ಲಿಯವರೆಗೆ ಎಷ್ಟು ಜನರಿಗೆ ಇದರಿಂದ ಲಾಭ ಆಗಿದೆ.? ಉಜ್ವಲ ಯೋಜನೆಯಿಂದ ಇರುವರೆಗೆ 8 ಕೋಟಿ ಕುಟುಂಬಕ್ಕೆ ಉಚಿತ ಎಲ್ ಪಿಜಿ ಸಂಪರ್ಕ ಸಿಕ್ಕಿದೆ. ಇನ್ನೂ ಒಂದು ಕೋಟಿ ಜನರಿಗೆ ಈ ಕನೆಕ್ಷನ್ ಸಿಗಲಿದೆ.
ಬದಲಾಗಿದೆ ಬುಕಿಂಗ್ ನಿಯಮ : ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿದ ಮೇಲೂ, ಸಿಲಿಂಡರ್ ಸಿಗಲು ನಾಲ್ಕೈದು ದಿನ ಬೇಕಾಗುತ್ತದೆ. ಈ ನಡುವೆ ಸಿಲಿಂಡರ್ ಏನಾದ್ರೂ ಮುಗಿದು ಹೋದ್ರೆ ಸಿಕ್ಕಾಪಟ್ಟೆ ಸಮಸ್ಯೆ ಎದುರಿಸಬೇಕಾಗುತ್ತದೆ. ಈಗ ಒಂದೇ ಸಲ ಮೂರು ಡೀಲರ್ ಬಳಿ ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಯಾವ ಡೀಲರ್ ಮೊದಲು ಸಪ್ಲೈ ಮಾಡುತ್ತಾರೆಯೋ, ಆ ಸಿಲಿಂಡರ್ ಖರೀದಿಸಬಹುದು. ಉಳಿದ ಸಿಲಿಂಡರ್ ಕ್ಯಾನ್ಸಲ್ ಮಾಡಬಹುದು.