ಬುಧನ ಅಸ್ತ ಅವಧಿ ಈ 4 ರಾಶಿಗಳ ಜನರ ಪಾಲಿಗೆ ಭಾರಿ ಧನವೃದ್ಧಿಯ ಯೋಗ ತರಲಿದೆ!

ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ, ಬುಧನ ಗೋಚರ ಅತ್ಯಂತ ಫಲದಾಯಿ ಎಂದು ಹೇಳಲಾಗುತ್ತದೆ. ಆದರೆ ಇನ್ನೊಂದೆಡೆ ಬುಧನ ಅಸ್ತ ಕಾಲ ಕೂಡ ಕೆಲ ರಾಶಿಗಳ ಜನರಿಗೆ ಶುಭಫಲಗಳನ್ನು ನೀಡುತ್ತದೆ. ಬುಧನ ಅಸ್ತಕಾಲ ಯಾವ ನಾಲ್ಕು ರಾಶಿಗಳ ಜನರಿಗೆ ಧನವೃದ್ಧಿಯ ಯೋಗ ಕಲ್ಪಿಸಲಿದೆ ತಿಳಿದುಕೊಳ್ಳೋಣ ಬನ್ನಿ,
 

Mercury Set In Aquarius: ಒಂಬತ್ತು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲ್ಪಡುವ ಬುಧ, ಕೆಲವೇ ಶನಿಯ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೆಶಿಸಲಿದ್ದಾನೆ. ಮಾರ್ಚ್ ತಿಂಗಳಲ್ಲಿ ಬುಧ ಒಟ್ಟು ಎರಡು ಬಾರಿ ತನ್ನ ರಾಶಿಯನ್ನು ಬದಲಾಯಿಸಲಿದೆ. ಮಾರ್ಚ್ ತಿಂಗಳಿನಲ್ಲಿ ಬುಧನು ಕುಂಭ ರಾಶಿಯಿಂದ ದೇವಗುರು ಬೃಹಸ್ಪತಿ ಅಧಿಪತ್ಯದ ಮೀನ ರಾಶಿಗೆ ಸಾಗಲಿದ್ದಾನೆ. ಬಳಿಕ ಈ ತಿಂಗಳ ಕೊನೆಯಲ್ಲಿ, ಬುಧನು ಮಂಗಳನ ಅಧಿಪತ್ಯದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.


ಇಲ್ಲಿ ಕುತೂಹಲಕಾರಿ ಸಂಗತಿ ಎಂದರೆ ಬುಧ ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಅಸ್ತಮಿಸಲಿದ್ದಾನೆ. ಪ್ರಸ್ತುತ ಸೂರ್ಯ ಮತ್ತು ಶನಿ ಕುಂಭ ರಾಶಿಯಲ್ಲಿದ್ದಾರೆ. ಸೂರ್ಯ ಮತ್ತು ಬುಧ ಪರಸ್ಪರ ಹತ್ತಿರವಾಗಿರುವುದರಿಂದ, ಬುಧವು ಸೂರ್ಯನ ಪ್ರಭಾವದಿಂದ ಅಸ್ತಮಿಸಲಿದ್ದಾನೆ. ಇದನ್ನು ಬುಧನ ವಕ್ರಿ ಅವಸ್ಥೆ ಎಂದೂ ಕೂಡ ಕರೆಯಲಾಗುತ್ತದೆ. ಸುಮಾರು ಒಂದು ತಿಂಗಳ ಕಾಲ ಬುಧ ಇದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ.


ವಿಶೇಷವೆಂದರೆ ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಂಭ ರಾಶಿಗೆ ಬುಧನ ಪ್ರವೇಶ ನಿಮ್ಮ ಮೇಲೆ ಯಾವ ಯಾವ ರೀತಿಯ ಬೀರುತ್ತದೆ? ಯಾವ ರಾಶಿಯವರಿಗೆ ಸಂಪತ್ತು, ಆರ್ಥಿಕ ಪ್ರಗತಿ, ಮುಂಬರುವ ದಿನಗಳಲ್ಲಿ ಯಶಸ್ಸು ಕಾದಿದೆ, ಈ ರಾಶಿಯ ಸ್ಥಳೀಯರು ಅಸ್ತ ಕಾಲದಲ್ಲಿ ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇಷ ರಾಶಿ: ಬುಧದ ಕುಂಭ ರಾಶಿ ಗೋಚರ  ಮೇಷ ರಾಶಿಯವರಿಗೆ ತುಂಬಾ ಉತ್ತಮ ಸಾಬೀತಾಗಲಿದೆ. ಈ ಅವಧಿಯು ನೌಕರ ವರ್ಗದ ಜನರಿಗೆ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮ ಪ್ರತಿಫಲ ನೀಡಲಿದೆ. ಪ್ರೇಮ ಜೀವನ ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ. ಬುಧ ಗ್ರಹಕ್ಕೆ ಸಂಬಂಧಿಸಿದ ಈ ಪರಿಹಾರವನ್ನು ನೀವು ಮಾಡಬಹುದು. ಶ್ರೀ ವಿಷ್ಣುವಿನ ಶ್ರೀ ವಾಮನ ರೂಪವನ್ನು ಆರಾಧಿಸುವುದು ಮತ್ತು ಪೂಜಿಸುವುದು ನಿಮಗೆ ಪ್ರಯೋಜನವನ್ನು ನೀಡಲಿದೆ.  

2 /4

ವೃಷಭ ರಾಶಿ: ಬುಧನ ಕುಂಭ ಗೋಚರ ವೃಷಭ ಜಾತಕದವರ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಉದ್ಯೋಗದಲ್ಲಿ ಸ್ಥಿರತೆ ಬರಲಿದೆ. ಹಿರಿಯರ ಸಂಪೂರ್ಣ ಸಹಕಾರ ಸಿಗಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಉತ್ತಮವಾಗಿರುತ್ತದೆ. ಆದರೆ ಒಂದು ತಿಂಗಳ ಕಾಲ ಬುಧಗ್ರಹಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಕೈಗೊಳ್ಳುವುದರಿಂದ ನೀವು ಹೆಚ್ಚಿನ ಫಲಿತಾಂಶಗಳನ್ನು ಪಡೆಯುವಿರಿ. ಸಾಧ್ಯವಾದರೆ ನಿತ್ಯವೂ ಹಸುವಿಗೆ ಮೇವು ತಿನ್ನಿಸಿ.  

3 /4

ಸಿಂಹ ರಾಶಿ: ಕುಂಭ ರಾಶಿಗೆ ಬುಧದ ಪ್ರವೇಶವು ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯವು ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅದು ಒಳ್ಳೆಯ ಫಲಗಳನ್ನು ನೀಡಲಿದೆ. ಕುಟುಂಬದಲ್ಲಿ ಕೆಲವು ಬಿರುಕುಗಳು ಉಂಟಾಗಬಹುದು. ಜೀವನದಲ್ಲಿ ಒತ್ತಡವೂ ಸ್ವಲ್ಪ ಹೆಚ್ಚಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಬುಧವಾರದಂದು ನಿಯಮಿತವಾಗಿ ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಲು ಅಥವಾ ಕೇಳಲು ಸಾಧ್ಯವಾದರೆ, ಖಂಡಿತವಾಗಿಯೂ ಕೇಳಿ.  

4 /4

ತುಲಾ ರಾಶಿ: ಬುಧನ ಕುಂಭ ಗೋಚರ ತುಲಾ ರಾಶಿಯವರಿಗೆ ಧನಾತ್ಮಕವಾಗಿರಬಹುದು. ದಕ್ಷತೆಯನ್ನು ಹೆಚ್ಚಿಸಬಹುದು. ಈ ಅವಧಿಯಲ್ಲಿ ಹಣವನ್ನು ಪಡೆಯುವ ಉತ್ತಮ ಅವಕಾಶಗಳಿವೆ. ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ನಿಮಗೆ ಅವಕಾಶ ಸಿಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಬರಲಿದೆ. ಸಾಧ್ಯವಾದರೆ, ಬುಧವಾರದಂದು ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ ಮಾಡಿ.(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)