ಈ 5 ಪವರ್‌ ಫುಲ್‌ ದೇವಾಲಯಗಳಿಗೆ ಭೇಟಿ ನೀಡಿದರೆ ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ..!

Must visit Hanuman temple in India : ಭಜರಂಗ ಬಲಿ, ಮಾರುತಿ ಮತ್ತು ಆಂಜನೇಯ ಎಂದು ಹೀಗೆ ವಿವಿಧ ಹೆಸರಿನಿಂದ ಕರೆಯಲ್ಪಡುವ ಭಗವಾನ್‌ ಹನುಮಂತನನ್ನು ಪೂಜಿಸುವುದರಿಂದ ಹಲವು ಸಂಕಷ್ಟಗಳು ದೂರವಾಗುತ್ತವೆ. ಈ ಪೈಕಿ ಭಾರತದಲ್ಲಿರುವ ಈ 5 ಫವರ್‌ ಫುಲ್‌ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ. 
 

1 /5

ಬಾಲಾಜಿ ದೇವಸ್ಥಾನ, ರಾಜಸ್ಥಾನದ ದೌಸಾ ಜಿಲ್ಲೆಯ ಬಳಿ ಮೆಹಂದಿಪುರದಲ್ಲಿದೆ. ಇಲ್ಲಿ ನೀವು ಸ್ವಯಂ ಉದ್ಭವಿತ ಹನುಮನ ಮೂರ್ತಿಯನ್ನು ಕಾಣಬಹುದು. ಈ ದೇವಾಲಯವು ಸುಮಾರು 1000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ದೇಶ ವಿದೇಶಗಳಿಂದ ಜನರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.   

2 /5

ಸಾಲಸರ್ ಹನುಮಾನ್ ಪ್ರಸಿದ್ಧ ದೇವಾಲಯವು ರಾಜಸ್ಥಾನದ ಚುರುವಿನ ಸಲಾಸರ್ ಗ್ರಾಮದಲ್ಲಿದೆ. ಈ ಕಾರಣಕ್ಕಾಗಿಯೇ ಈ ದೇವಾಲಯದ ಹೆಸರೂ ಸಾಲಸರ್ ಹನುಮಾನ್ ಮಂದಿರ ಎಂದು ಹೆಸರುವಾಸಿಯಾಗಿದೆ. ಇಲ್ಲಿ ನೀವು ಸ್ವಯಂಭು ಹನುಮನ ವಿಗ್ರಹದ ದರ್ಶನ ಪಡೆಯಬಹುದು.   

3 /5

ಹಿಮಾಚಲ ಪ್ರದೇಶದ 8100 ಅಡಿ ಎತ್ತರದಲ್ಲಿರುವ ಪ್ರಸಿದ್ಧ ಹನುಮಾನ್‌ ಜಖೂ ದೇವಾಲಯದಲ್ಲಿ 108 ಅಡಿ ಎತ್ತರದ ಹನುಮಂತನ ವಿಗ್ರಹವಿದೆ. ಸ್ವಯಂಭು ಮಾರುತಿ ವಿಗ್ರಹಕ್ಕೆ ಯಕ್ಷ ಋಷಿ ದೇವಾಲಯವನ್ನು ನಿರ್ಮಿಸಿದನೆಂದು ನಂಬಲಾಗಿದೆ.    

4 /5

ಯುಪಿಯ ಅಲಹಾಬಾದ್‌ನಲ್ಲಿ ಹನುಮಂಜಿ ದೇವಸ್ಥಾನವಿದ್ದು, ಅಲ್ಲಿ ಹನುಮಂಜಿಯು ಮಲಗಿರುವ ಸ್ಥಿತಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕಾರಣಕ್ಕಾಗಿ ಈ ದೇವಾಲಯವನ್ನು ಮಲಗಿರುವ ಹನುಮಾನ್ ದೇವಾಲಯ ಎಂದೂ ಕರೆಯುತ್ತಾರೆ. ಈ ವಿಗ್ರಹದ ಉದ್ದ ಸುಮಾರು 20 ಅಡಿ ಇದೆ. ಈ ದೇವಾಲಯವು ಸುಮಾರು 700 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.   

5 /5

ಉತ್ತರ ಪ್ರದೇಶದ ರಾಮನಗರಿ ಅಯೋಧ್ಯೆಯಲ್ಲಿರುವ ಹನುಮಾನ್ ಗರ್ಹಿಯು ಹನುಮಂತನ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಸರಯೂ ನದಿಯ ದಡದಲ್ಲಿರುವ ಎತ್ತರದ ಬೆಟ್ಟದ ತುದಿಯಲ್ಲಿದೆ. ಈ ದೇವಾಲಯವನ್ನು 300 ವರ್ಷಗಳ ಹಿಂದೆ ಸ್ವಾಮಿ ಅಭ್ಯರಾಮದಾಸಜಿ ಸ್ಥಾಪಿಸಿದರು ಎಂದು ನಂಬಲಾಗಿದೆ.