ಮೌನಿ ರಾಯ್ ಅವರ ಮುಂಬರುವ ಚಿತ್ರದ ಕುರಿತು ಮಾತನಾಡುವುದಾದರೆ, ಅವರು ಅಯನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟಿ ಮೌನಿ ರಾಯ್ ಆಗಾಗ್ಗೆ ತನ್ನ ಮಾದಕ ನೋಟದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ತಮ್ಮ ಗೆಳೆಯನೊಂದಿಗೆ ಗೋವಾ ತೀರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿ ಇದೀಗ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹುಡುಗರ ಮನಗೆದ್ದಿದ್ದಾರೆ.
ಮೌನಿ ರಾಯ್ ಅವರು ಹಂಚಿಕೊಂಡ ಚಿತ್ರಗಳಲ್ಲಿ, ಕೆಂಪು ಟಿ-ಶರ್ಟ್ನೊಂದಿಗೆ ಕಪ್ಪು ಸ್ಕರ್ಟ್ ಧರಿಸಿದ್ದಾರೆ. ಮೌನಿ ರಾಯ್ ಸೋಫಾದಲ್ಲಿ ಕುಳಿತು ಮುದ್ದಾಗಿರುವ ಫೋಟೋಗೆ ಪೋಸ್ ನೀಡಿದ್ದಾರೆ.
ಮೌನಿ ರಾಯ್ ಹಂಚಿಕೊಂಡ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಲೈಕ್ ಕಮೆಂಟ್ಗಳ ಮೂಲಕ ಪ್ರೀತಿ ತೋರಿಸುತ್ತಿದ್ದಾರೆ.
ಮೌನಿ ರಾಯ್ ಮದುವೆಯ ನಂತರ ತನ್ನ ಪತಿ ಸೂರಜ್ ನಂಬಿಯಾರ್ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಒಬ್ಬರೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಮೌನಿ ರಾಯ್ ಅವರ ಮುಂಬರುವ ಚಿತ್ರದ ಕುರಿತು ಮಾತನಾಡುವುದಾದರೆ, ಅವರು ಅಯನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.