IPL 2024: ಮಗನನ್ನು ಕ್ರಿಕೆಟ್ ಆಟಗಾರನನ್ನಾಗಿಸಲು ನೌಕರಿ ತೊರೆದ ತಂದೆ, ವಿರಾಟ್ ಈತನ ಆದರ್ಶ!

Nitish Reddy Father Left Job For His Son: ಪ್ರತಿಯೊಂದು ಐಪಿಎಲ್ ಆವೃತ್ತಿ ಒಂದಿಲ್ಲ ಒಂದು ಹೊಸ ಆಟಗಾರನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಇದೆ ಟೂರ್ನಿಯಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಹಲವಾರು ಆಟಗಾರರು ಲಭಿಸಿದ್ದಾರೆ. ಕೇವಲ ಭಾರತ ಅಷ್ಟೇ ಅಲ್ಲ ವಿಶ್ವದ ಹಲವು ತಂಡಗಳಿಗೆ ಈ ಪಂದ್ಯಾವಳಿ ಸ್ಟಾರ್ ಆಟಗಾರರನ್ನು ನೀಡಿದೆ. 
 

Nitish Reddy Father Left Job For His Son: ಪ್ರತಿಯೊಂದು ಐಪಿಎಲ್ ಆವೃತ್ತಿ ಒಂದಿಲ್ಲ ಒಂದು ಹೊಸ ಆಟಗಾರನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಇದೆ ಟೂರ್ನಿಯಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಹಲವಾರು ಆಟಗಾರರು ಲಭಿಸಿದ್ದಾರೆ. ಕೇವಲ ಭಾರತ ಅಷ್ಟೇ ಅಲ್ಲ ವಿಶ್ವದ ಹಲವು ತಂಡಗಳಿಗೆ ಈ ಪಂದ್ಯಾವಳಿ ಸ್ಟಾರ್ ಆಟಗಾರರನ್ನು ನೀಡಿದೆ. ಈ ಪಟ್ಟಿಯಲ್ಲಿ ಇದೀಗ ನಿತಿಶ್ ಕುಮಾರ್ ರೆಡ್ಡಿ ಎಂಬ ಹೊಸ ಹೆಸರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ನಿತೀಶ್, ಪಂದ್ಯಾವಳಿಯ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರುತ್ತ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

 

ಇದನ್ನೂ ಓದಿ-Gautam Gambhir Video: Virat Kohli ಬಳಿಕ ಈ ಆಟಗಾರನ ಜೊತೆಗೆ ಗೌತಿಯ ಆನ್ ಫೀಲ್ಡ್ ದೋಸ್ತಿ ವಿಡಿಯೋ ವೈರಲ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರ 17ನೇ ಆವೃತ್ತಿಯಲ್ಲಿ ಭಾರತೀಯ ಆಟಗಾರರಾಗಿರುವ ಮತ್ತು ಲಖನೌ ಸೂಪರ್ ಜೈಂಟ್ಸ್ ತಂದಕ್ಕಾಗಿ ಆಡುತ್ತಿರುವ ಮಯಾಂಕ್ ಯಾದವ್, ಕೆಕೆಆರ್ ತಂಡದ ಆಂಗ್‌ಕ್ರಿಶ್ ರಘುವಂಶಿ ಮತ್ತು ಪಂಜಾಬ್ ಕಿಂಗ್ಸ್ ನ ಅಶುತೋಷ ಶರ್ಮಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಆಟಗಾರರೆಲ್ಲರೂ ಆನ್ಕ್ಯಾಪ್ದ್ ಆಟಗಾರರಾಗಿದ್ದಾರೆ. ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ 20 ವರ್ಷದ ನಿತೀಶ್ ರೆಡ್ಡಿ ಭೀರುಸಿನ ಅರ್ಧ ಶತಕ ಗಳಿಸಿದ್ದಾರೆ. ಅವರು, 37 ಎಸೆತಗಳನ್ನು ಎದುರಿಸಿ ಹೈದ್ರಾಬಾದ್ ತಂಡದ ಪರ 67 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಅವರ ಈ ಆಟದಲ್ಲಿ 4 ಬೌಂಡರಿ ಹಾಗೂ ಐದು ಸಿಕ್ಸರ್ ಶಾಮೀಲಾಗಿವೆ. ಈ ಸಂದರ್ಭದಲ್ಲಿ ಅವರ ಸ್ತ್ರೈಕ್ ರೇಟ್ 172.97 ಆಗಿತ್ತು. ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲ ಬೌಲಿಂಗ್ ನಲ್ಲಿಯೂ ತನ್ನ ಕೈಚಳಕ ತೋರಿದ ನಿತೀಶ್ 3 ಓವರ್ ಗಳಲ್ಲಿ 33 ರನ್ ನೀಡಿ ಒಂದು ವಿಕೆಟ್ ಕೂಡ ಕಬಳಿಸಿದ್ದಾರೆ.   

2 /5

20 ಲಕ್ಷ ರೂ.ಗಳಿಗೆ ಸನ್ ರೈಸರ್ಸ್ ಹೈದ್ರಾಬಾದ್ ಖರೀದಿಸಿದೆ: ಬಲಗೈಯಿಂದ ಬ್ಯಾಟಿಂಗ್ ಮಾಡುವ ನಿತೀಶ್ ವೇಗದ ಬೌಲರ್ ಕೂಡ ಆಗಿದ್ದಾರೆ. ಅವರು ಭವಿಷ್ಯದಲ್ಲಿ ಭಾರತಕ್ಕೆ ಉತ್ತಮ ಆಲ್‌ರೌಂಡರ್ ಎಂದು ಸಾಬೀತಾಗಬಹುದು. ನಿತೀಶ್ ಐಪಿಎಲ್ ನಲ್ಲಿ ಫೇಮಸ್ ಆಗುವ ಮುನ್ನ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ನಿತೀಶ್ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಯಾಗಿದ್ದಾರೆ. 2023ರ ಐಪಿಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ ಅವರನ್ನು ಸನ್‌ರೈಸರ್ಸ್ 20 ಲಕ್ಷಕ್ಕೆ ಖರೀದಿಸಿತ್ತು. ಕಳೆದ ಸೀಸನ್‌ನಲ್ಲಿ ನಿತೀಶ್‌ಗೆ ಹೆಚ್ಚಿನ ಅವಕಾಶಗಳು ಲಭಿಸಿರಲಿಲ್ಲ. ಅವರು ಕೇವಲ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವಕಾಶ ಪಡೆದು 8 ಎಸೆತಗಳಲ್ಲಿ 14 ರನ್ ಗಳಿಸಿ ಎಲ್ಲರ ಮನಗೆದ್ದರು. ಈಗ ಪಂಜಾಬ್ ಕಿಂಗ್ಸ್ ವಿರುದ್ಧ ಅವರ ತಂಡ ಕಠಿಣ ಪರಿಸ್ಥಿತಿಯಲ್ಲಿದ್ದಾಗ, ಅವರು ಧೃತಿಗೆಡಗೆ ಪ್ರದರ್ಶನ ನೀಡಿದ್ದು,  ತಂಡಕ್ಕೆ ಬೃಹತ್ ಸ್ಕೋರ್ ತಲುಪಲು ಸಹಾಯ ಮಾಡಿದರು.  

3 /5

ವಿರಾಟ್ ಕೊಹ್ಲಿ ನನ್ನ ಆದರ್ಶ ಎನ್ನುತ್ತಾರೆ ನಿತೀಶ್: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ನಿತೀಶ್ ತಮ್ಮ ಆದರ್ಶ ಎಂದು ನಿತೀಶ್ ಪರಿಗಣಿಸುತ್ತಾರೆ. ಆಂಧ್ರ ಪರ ವಯೋಮಿತಿಯ ಕ್ರಿಕೆಟ್‌ನಲ್ಲಿ ಅಗ್ರ ಕ್ರಮಾಂಕದಲ್ಲಿ ನಿತಿಶ್ ಬ್ಯಾಟಿಂಗ್ ಮಾಡುತ್ತಿದ್ದರು. 2017-18ರ ಋತುವಿನಲ್ಲಿ ನಿತೀಶ್ ಮೊದಲು ಲೈಮ್ ಲೈಟ್ ಗೆ ಬಂದಿದ್ದಾರೆ. ವಿಜಯ್ ಮರ್ಚೆಂಟ್ ಟ್ರೋಫಿ ಸಮಯದಲ್ಲಿ ತಮ್ಮ ಹೆಸರನ್ನು ದಾಖಲೆ ಪುಟಗಳಲ್ಲಿ ನೋಂದಾಯಿಸುವಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ನಿತೀಶ್ 176.41 ಸರಾಸರಿಯಲ್ಲಿ 1237 ರನ್ ಗಳಿಸಿದ್ದರು. ಇದು ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಕೆಯಾಗಿದೆ. ಅವರು ತ್ರಿಶತಕ, ಎರಡು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಪೂರೈಸಿದ್ದಾರೆ. ಅವರು ನಾಗಾಲ್ಯಾಂಡ್ ವಿರುದ್ಧ ಪಂದ್ಯದಲ್ಲಿ 366 ಎಸೆತಗಳಲ್ಲಿ 441 ರನ್ ಗಳಿಸಿದ್ದಾರೆ. ನಿತೀಶ್ ಅವರನ್ನು 2018 ರಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಸಿಸಿಐ '16 ವರ್ಷದೊಳಗಿನವರ ವಿಭಾಗದಲ್ಲಿ ಅತ್ಯುತ್ತಮ ಕ್ರಿಕೆಟಿಗ' ಎಂದು ಆಯ್ಕೆ ಮಾಡಿದೆ. ಆ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದರು.

4 /5

ಮಗನ ಬಗ್ಗೆ ಮಾತನಾಡಿದ ತಂದೆ ಹೇಳಿದ್ದೇನು?: ನಿತೀಶ್ ಅವರ ತಂದೆ ಮುತ್ಯಾಲ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದು, ತಮ್ಮ ಮಗ ಹಾರ್ದಿಕ್ ಪಾಂಡ್ಯ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಭೇಟಿಯಾಗಿದ್ದರು ಎಂದಿದ್ದಾರೆ. ಎನ್‌ಸಿಎಯಲ್ಲಿದ್ದ 19 ವರ್ಷದೊಳಗಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿತು ಮತ್ತು ಅಂದಿನಿಂದ ಅವರು ಆಲ್‌ರೌಂಡರ್ ಆಗಲು ಬಯಸಿದ್ದರು ಎಂದು ಹೇಳಿದ್ದಾರೆ, ಮುತ್ಯಾಲ ಅವರು ತಮ್ಮ ಮಗನ ಬೆಳವಣಿಗೆಯನ್ನು ಕಂಡು ತುಂಬಾ ಉತ್ಸುಕರಾಗಿದ್ದಾರೆ, ಅವರು ನಿತೀಶ್ ಅವರೊಂದಿಗೆ ಮಾತನಾಡಿದ್ದಾರೆ. ಅವರು ವಿಶಾಖಪಟ್ಟಣಂನ ಹೊರಗಿರುವ ಕೆಲಸವನ್ನು ಸಹ ತೊರೆದಿದ್ದಾರೆ.  

5 /5

ತಂದೆ ಕೆಲಸ ಬಿಟ್ಟಿದ್ದಾದರು ಯಾಕೆ: ಮುತ್ಯಾಲ ಅವರು ಹಿಂದುಸ್ತಾನ್ ಜಿಂಕ್ ನಲ್ಲಿ ಕೆಲಸ ಮಾಡಿದ್ದಾರೆ.  ಉದಯಪುರಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ವಿಷಯ ತಿಳಿದಾಗ, ಅವರಿಗೆ ಹಿಂದಿ ಗೊತ್ತಿಲ್ಲದ ಕಾರಣ ಉದಯಪುರಕ್ಕೆ ಹೋಗುವ ಸಂದಿಗ್ಧತೆಯಲ್ಲಿ ಸಿಲುಕಿದ್ದರು. ನಂತರ ಅವರು ಮಗ ನಿತೀಶ್ ಅವರ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆಯೂ ಯೋಚಿಸಿ,  ಉದಯಪುರಕ್ಕೆ ಹೋಗದಿರುವ ನಿರ್ಧಾರ ಕೈಗೊಂಡಿದ್ದಾರೆ ಮತ್ತು ಮುತ್ಯಾಲ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ನಿತೀಶ್ ಕೂಡ ತಮ್ಮ ತಂದೆಯ ತ್ಯಾಗದ ಬಗ್ಗೆ ಹಲವು ಬಾರಿ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ತಂದೆಯ ಮೇಲಿನ ನಂಬಿಕೆಯಿಂದ ಕ್ರಿಕೆಟಿಗನಾಗಿದ್ದೇನೆ ಎನ್ನುತ್ತಾರೆ. ಅವರು ತನ್ನ ಮೊದಲ ಸಂಪಾದನೆಯಲ್ಲಿ ತನ್ನ ತಂದೆಗಾಗಿ ಕಾರು ಖರೀದಿಸಿದ್ದಾರೆ.