Interim Budget 2024:ಕೆಲವು ದೇಶಗಳಲ್ಲಿ ಸರ್ಕಾರ ತೆರಿಗೆ ಸಂಗ್ರಹಿಸುವುದಿಲ್ಲ. ಇಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.ಜನರ ಸಂಪೂರ್ಣ ಆದಾಯವು ಅವರ ಕೈಗೆ ಬರುತ್ತದೆ.
Interim Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024ರ ಮಧ್ಯಂತರ ಬಜೆಟ್ ಅನ್ನು ಇನ್ನು ಕೆಲವೇ ಕ್ಷಣಗಳಲ್ಲಿ ಮಂಡಿಸಲಿದ್ದಾರೆ. ಉದ್ಯೋಗಿಯಾಗಿರಲಿ ಅಥವಾ ಉದ್ಯಮಿಯಾಗಿರಲಿ, ಪ್ರತಿಯೊಬ್ಬ ವ್ಯಕ್ತಿಯು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸಾರ್ವಜನಿಕರಿಂದ ಪಡೆಯುವ ಆದಾಯ ತೆರಿಗೆಯು ಯಾವುದೇ ದೇಶದ ಸರ್ಕಾರಕ್ಕೆ ಆದಾಯದ ಮುಖ್ಯ ಮೂಲವಾಗಿದೆ. ಆದರೆ ಕೆಲವು ದೇಶಗಳಲ್ಲಿ ಸರ್ಕಾರ ತೆರಿಗೆ ಸಂಗ್ರಹಿಸುವುದಿಲ್ಲ. ಇಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.ಜನರ ಸಂಪೂರ್ಣ ಆದಾಯವು ಅವರ ಕೈಗೆ ಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಯುನೈಟೆಡ್ ಅರಬ್ ಎಮಿರೇಟ್ಸ್ ತೆರಿಗೆ ಮುಕ್ತ ರಾಷ್ಟ್ರವಾಗಿದೆ. ಇಲ್ಲಿ ಕಚ್ಚಾ ತೈಲದ ವ್ಯಾಪಾರ ನಡೆಯುತ್ತದೆ ಮತ್ತು ಇಡೀ ಆರ್ಥಿಕತೆಯು ಅದರ ಮೇಲೆ ಅವಲಂಬಿತವಾಗಿದೆ. ಇಲ್ಲಿಯೂ ಜನರು ತೆರಿಗೆ ಕಟ್ಟಬೇಕಾಗಿಲ್ಲ. ಗಲ್ಫ್ ದೇಶ ಬಹ್ರೇನ್ ಸರ್ಕಾರವು ತನ್ನ ನಾಗರಿಕರಿಂದ ಯಾವುದೇ ರೀತಿಯ ತೆರಿಗೆಯನ್ನು ಸಂಗ್ರಹಿಸುವುದಿಲ್ಲ.
ತೆರಿಗೆ ಮುಕ್ತ ದೇಶದ ವಿಷಯಕ್ಕೆ ಬಂದಾಗ, ಮನಸ್ಸಿಗೆ ಬರುವ ಮೊದಲ ಹೆಸರು ಬಹಾಮಾಸ್. ಪ್ರವಾಸಿಗರಿಗೆ ಸ್ವರ್ಗವೆನ್ನುವ ಈ ದೇಶ ಪಶ್ಚಿಮಘಟ್ಟದಲ್ಲಿದೆ. ಈ ದೇಶದ ಜನರು ತಮ್ಮ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗಿಲ್ಲ.
ಬ್ರೂನೈ ಕೂಡಾ ತೈಲ ನಿಕ್ಷೇಪಗಳನ್ನು ಹೊಂದಿದೆ.ಇಲ್ಲಿ ವಾಸಿಸುವ ಜನರು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಲ್ಲದೇ, ಉತ್ತರ ಅಮೆರಿಕ ಖಂಡದ ಕೆರಿಬಿಯನ್ ಪ್ರದೇಶದಲ್ಲಿ ಬರುವ ಕೇಮನ್ ದ್ವೀಪಗಳಲ್ಲಿ ವಾಸಿಸುವ ಜನರು ತಮ್ಮ ಆದಾಯದ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
ಯುಎಇಯಂತೆ, ಕುವೈತ್ ತೈಲ ಮತ್ತು ಅನಿಲದ ನೈಸರ್ಗಿಕ ನಿಕ್ಷೇಪಗಳನ್ನು ಹೊಂದಿದೆ. ಈ ದೇಶವು ಎರಡರಿಂದಲೂ ಚೆನ್ನಾಗಿ ಆದಾಯ ಗಳಿಸುತ್ತದೆ. ಇಲ್ಲಿನ ಜನರು ಅದರ ಲಾಭವನ್ನು ಪಡೆಯುತ್ತಾರೆ. ಈ ದೇಶದ ಜನ ಆದಾಯ ತೆರಿಗೆ ಕಟ್ಟದೇ ಇರುವುದಕ್ಕೆ ಇದೇ ಕಾರಣ.
ಭಾರತದ ಕಡಲ ಗಡಿಯ ಪಕ್ಕದಲ್ಲಿರುವ ಮಾಲ್ಡೀವ್ಸ್ನ ಜನರು ಸಹ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ. ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ಕಾಮೆಂಟ್ ಮಾಡಿದ್ದಕ್ಕಾಗಿ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ಗೆ ಬಹಿಷ್ಕಾರ ಹಾಕಿದ್ದಾರೆ.